ಪುತ್ತೂರು: ಕೊಳ್ತಿಗೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ರಜತ ಸಂಭ್ರಮ ಡಿ. 16ರಂದು ನಡೆಯಲಿದೆ.
ಕೊಳ್ತಿಗೆ ಸ.ಹಿ.ಪ್ರಾ.ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯತ್ ಕೆಮ್ಮಾರ ಅವರು ಮಾತನಾಡಿ, ಕೊಳ್ತಿಗೆ ಶಾಲೆಯ ವಾರ್ಷಿಕೋತ್ಸವ ವೈಭವದಿಂದ ನಡೆಯಲಿದೆ. ದ.ಕ.ಜಿ.ಪಂ, ಕೊಳ್ತಿಗೆ ಶಾಲೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ ಮತ್ತು ರಜತ ಸಂಭ್ರಮ ಸಮಿತಿ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಡಿ.16ರಂದು ರಾತ್ರಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕೊಳ್ತಿಗೆ ಗ್ರಾ.ಪಂ ಅಧ್ಯಕ್ಷೆ ಅಕ್ಕಮ್ಮ ಅವರು ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ. ನಿವೃತ್ತ ಉಪನ್ಯಾಸಕ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಅವರು ಉಪನ್ಯಾಸ ನೀಡಲಿದ್ದಾರೆ. ಈ ಸಂದರ್ಭ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ರಜತರತ್ನ ಸಾಧಕರಿಗೆ ಸನ್ಮಾನ:
ರಜತ ಮಹೋತ್ಸವದ ಅಂಗವಾಗಿ ಶಾಲೆಯ ಹಿರಿಯ ವಿದ್ಯಾರ್ಥಿಗಳಾಗಿ ಅನೇಕ ಕ್ಷೇತ್ರದಲ್ಲಿ ಸಾಧಕರಾಗಿರುವ 7 ಮಂದಿಯನ್ನು ‘ರಜತರತನ್ನ’ಗಳೆಂಬ ಹೆಸರಿನಡಿಯಲ್ಲಿ ಸನ್ಮಾನಿಸಲಾಗುವುದು. ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿ ಕೊಳ್ತಿಗೆ ನಾರಾಯಣ ಗೌಡ, ನಿವೃತ್ತ ಶಿಕ್ಷಕ ಮಾಯಿಲಪ್ಪ ಗೌಡ, ನ್ಯಾಯವಾದಿ ಮೋಹಿತ್ ಕುಮಾರ್ ಕುಂಡಡ್ಕ, ಚಿತ್ರಕಲೆಯಲ್ಲಿ ಮಹೇಶ್ ಕುಂದಡ್ಕ, ಲೋಹಿತ್ ಅಟ್ಟೋಳಿ, ಯಕ್ಷಿತ್ ಬಾರಿಕೆ, ಭರತನಾಟ್ಯದಲ್ಲಿ ಕು.ಅಭಿಜ್ಞಾ ಅಟೋಳಿ ಅವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಕಳೆದ 25 ವರ್ಷಗಳಲ್ಲಿ ಹಿರಿಯ ವಿದ್ಯಾರ್ಥಿ ಸಂಘದಲ್ಲಿ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಮಾಡಲಾಗುವುದು. ಒಟ್ಟು ಕಾರ್ಯಕ್ರಮದಲ್ಲಿ ಬೆಳಿಗ್ಗೆ ಧ್ವಜಾರೋಹಣ, ಶಾಲಾ ವಿದ್ಯಾರ್ಥಿಗಳಿಗೆ, ಹಿರಿಯ ವಿದ್ಯಾರ್ಥಿಗಳಿಗೆ ಮತ್ತು ಊರವರಿಗೆ ಛದ್ಮವೇಷ ಸ್ಪರ್ಧೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಜಯತ್ ಕೆಮ್ಮಾರ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶಾಲಾಭಿವೃದ್ಧಿ ಮತ್ತ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜನಾರ್ಧನ ಎಂ, ರಜತ ಸಂಭ್ರಮ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಬಾಯಂಬಾಡಿ, ಪ್ರಧಾನ ಕಾರ್ಯದರ್ಶಿ ಶೋಭಿತ್ ಕೆಮ್ಮಾರ, ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ವಿಜೇಶ್ ರೈ ಕೊಳ್ತಿಗೆ ಕೆಳಗಿಮನೆ ಉಪಸ್ಥಿತರಿದ್ದರು.
ಶಾಂಭವಿ ನಾಟಕ ಪ್ರದರ್ಶನ…
ಶಾಲಾ ರಜತ ಸಂಭ್ರಮದ ಪ್ರಯುಕ್ತ ಪುತ್ತೂರು ತಾಲೂಕಿನಲ್ಲಿಯೇ ಪ್ರಥಮ ಬಾರಿಗೆ ಅಭಿನಯ ಕಲಾವಿದರು ಉಡುಪಿ ಕುತೂಹಲಭರಿತ ತುಳು ಹಾಸ್ಯಮಯ ನಾಟಕ ‘ಶಾಂಭವಿ’ ಪ್ರದರ್ಶನಗೊಳ್ಳಲಿದೆ.
*ಕೊಳ್ತಿಗೆ, ಬಾಯಂಬಾಡಿ, ಮೊಗಪ್ಪೆ ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ
- *ಕೊಳ್ತಿಗೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
- *ಮಾಲಿತ್ತೋಡು ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ