





ಪುತ್ತೂರು:’ಗಮಕ ಸಾಹಿತ್ಯದ ಪರಂಪರೆ ಅತಿ ಪುರಾತನವಾದದ್ದು. ಗಮಕ ಸಾಹಿತ್ಯದಲ್ಲಿ ಕನಕದಾಸರು ಮೇಲ್ಪಂಕ್ತಿಯಲ್ಲಿರುವವರು. ಅವರು ಅವರ ಜೀವಿತಾವಧಿಯಲ್ಲಿ ಸಾಮಾಜಿಕ ಸಮಸ್ಯೆಗಳನ್ನು ವಚನ ಸಾಹಿತ್ಯಗಳ ಮೂಲಕ ತಿಳಿಸುತ್ತಿದ್ದರು. ಇಂದಿನ ವಿದ್ಯಾರ್ಥಿಗಳು ಇಂತಹ ಕಲೆಗಳಿಗೆ ಒಲವು ತೋರಿದರೆ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯ.” ಎಂದು ವಿವೇಕಾನಂದ ಪದವಿ ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ. ಎನ್ ಹೇಳಿದರು.



ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ ) ಪುತ್ತೂರು ಇಲ್ಲಿನ ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರ, ಕನ್ನಡ ವಿಭಾಗ, ಕನ್ನಡ ಸಂಘ ಮತ್ತು ಐಕ್ಯೂಎಸಿ ಇದರ ಸಹಯೋಗದೊಂದಿಗೆ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಕನಕದಾಸ ಜಯಂತಿ ಪ್ರಯುಕ್ತ ಗಮಕ ವಾಚನ ಮತ್ತು ವ್ಯಾಖ್ಯಾನ ಎಂಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.





ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೋ.ಶ್ರೀಪತಿ ಕಲ್ಲುರಾಯ ಮಾತನಾಡಿ ‘ಕನಕದಾಸರ ನಳದಮಯಂತಿ ಕಥೆ ವಿಶಿಷ್ಟವಾದದ್ದು. ಅದನ್ನು ಗಮಕ ಸಾಹಿತ್ಯದ ಮೂಲಕ ವಿಶೇಷವಾಗಿ ಪ್ರಸ್ತುತ ಪಡಿಸಿದ್ದಾರೆ’ ಎಂದು ನುಡಿದರು.
ಈ ಸಂದರ್ಭದಲ್ಲಿ “ಕನಕದಾಸರ ನಳಚರಿತ್ರೆ” ಎಂಬ ಕಥೆಯ ಗಮಕ ಕಾವ್ಯ ವಾಚನವನ್ನು ವಿದ್ವಾನ್ ಪದ್ಯಾಣ ಗಣಪತಿ ಭಟ್ಟ ಅಳಿಕೆ ಹಾಗೂ ವ್ಯಾಖ್ಯಾನವನ್ನು ಮುಳಿಯ ಶಂಕರ ಭಟ್ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ವಿದ್ವಾನ್ ಪದ್ಯಾಣ ಗಣಪತಿ ಭಟ್ ಅಳಿಕೆ ಹಾಗೂ ಮುಳಿಯ ಶಂಕರ ಭಟ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯೆ ಶೋಭಾ ಕೊಳತ್ತಾಯ, ಕಾಲೇಜಿನ ಉಪಪ್ರಾಂಶುಪಾಲ ಶ್ರೀಕೃಷ್ಣ ಗಣರಾಜ್ ಭಟ್ ಮತ್ತಿತರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸ್ನಾತಕೋತ್ತರ ವಿಭಾಗ ಮುಖ್ಯಸ್ಥೆ ಡಾ.ವಿಜಯ ಸರಸ್ವತಿ ಸ್ವಾಗತಿಸಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿದ್ಯಾ.ಎಸ್. ವಂದಿಸಿ, ಕನ್ನಡ ವಿಭಾಗ ಮುಖ್ಯಸ್ಥ ಡಾ. ಮನಮೋಹನ. ಎಂ. ನಿರ್ವಹಿಸಿದರು










