ನರೇಂದ್ರ ಪ.ಪೂ. ಕಾಲೇಜಿನಲ್ಲಿ ಉಪನ್ಯಾಸ ಮಾಲಿಕೆ ಅಯೋಧ್ಯಾ ರಾಮ

0

ನವಭಾರತಕೆ ಅಯೋಧ್ಯಾ ಹೊಸ ಅಧ್ಯಾಯ – ಗಣರಾಜ ಕುಂಬ್ಳೆ


ಪ್ರಾಚೀನ ಮಹಾಕಾವ್ಯವಾಗಿದ್ದರೂ ವಾಲ್ಮೀಕಿ ರಾಮಾಯಣವು ಆಧುನಿಕ ಜಗತ್ತಿನಲ್ಲಿ ಹೆಚ್ಚಿನ ಪ್ರಸ್ತುತತೆಯನ್ನು ಹೊಂದಿದೆ.ಅದರ ಬೋಧನೆಗಳು,ಪಾಠಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅನ್ವಯಿಸಬಹುದು.ಸದ್ಗುಣ ಮತ್ತು ಸಾರ್ಥಕ ಜೀವನವನ್ನು ನಡೆಸಲು ನಮಗೆ ಮಾರ್ಗದರ್ಶನ ನೀಡುತ್ತದೆ.ಈ ಮಹಾಕಾವ್ಯವು ಕೌಟುಂಬಿಕ ಮೌಲ್ಯಗಳು,ನಿಷ್ಠೆ,ಪ್ರಾಮಾಣಿಕತೆ ಮತ್ತು ಧರ್ಮದ ಶಕ್ತಿಯ ಮಹತ್ವವನ್ನು ಜಗತ್ತಿಗೆ ಸಾರುವ ಪರಮಜ್ಯೋತಿಯಾಗಿದೆ.ಎಂದು ಶ್ರೀರಾಮಕುಂಜೇಶ್ವರ ಮಹಾವಿದ್ಯಾಲಯ ರಾಮಕುಂಜ ಇದರ ಪ್ರಾಚಾರ್ಯರಾದ ಗಣರಾಜ ಕುಂಬ್ಳೆ ಇವರು ಹೇಳಿದರು.


ಪುತ್ತೂರಿನ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ,ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ , ನರೇಂದ್ರ ಪ.ಪೂ. ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಿದ ರಾಮನ ವ್ಯಕ್ತಿತ್ವದ ಸಮಗ್ರ ವರ್ಣನೆಯ ಉಪನ್ಯಾಸ ಮಾಲಿಕೆ ಅಯೋಧ್ಯಾ ರಾಮ ಕಾರ‍್ಯಕ್ರಮದಲ್ಲಿ ,ಶ್ರೀರಾಮ ಪಥ ಎಂಬ ವಿಚಾರವಾಗಿ ಅವರು ಮಾತನಾಡಿದರು.
ವಾಲ್ಮೀಕಿಯು ತನ್ನ ರಾಮಾಯಣದಲ್ಲಿ ರಾಮನ ಮೂಲಕ ಮಾನವನ ಬಾಳುವೆಯ ರೀತಿಯ ಕುರಿತು ತನ್ನ ನೀತಿಯನ್ನು ವ್ಯಕ್ತಪಡಿಸುತ್ತಾನೆ .ವ್ಯಕ್ತಿಯು ಧರ್ಮವನ್ನು ಧರ್ಮಕ್ಕಾಗಿ ಪಾಲಿಸಬೇಕೇ ಹೊರತು ಅದರಿಂದ ಉಂಟಾಗುವ ಲಾಭ, ನಷ್ಟಗಳಿಗಾಗಿ ಅಲ್ಲ ಎಂಬುದು ಅವನ ಅಭಿಪ್ರಾಯ. ಇಂಥ ಧರ್ಮಪಾಲನೆಯಿಂದ ಇಹಲೋಕದಲ್ಲೂ ಪರಲೋಕದಲ್ಲೂ ವ್ಯಕ್ತಿಯ ಕಲ್ಯಾಣವಾಗುವುದು ಅಷ್ಟೆ ಅಲ್ಲದೆ ,ಯಾವುದೇ ಮಾತುಕೊಡುವ ಮೊದಲೇ ಪರಿಣಾಮಗಳನ್ನು ಕುರಿತು ಯೋಚಿಸಬೇಕು ಮತ್ತು ಒಮ್ಮೆ ಮಾತುಕೊಟ್ಟ ಮೇಲೆ ಎಷ್ಟೇ ಕಷ್ಟವಾಗಲಿ ಅದನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ರಾಮಾಯಣವು ಒತ್ತುಕೊಡುತ್ತದೆ. ಎಂದು ಹೇಳಿದರು.


ಪಿತೃವಾಕ್ಯ ಪರಿಪಾಲನೆ,ಸತ್ಯ ಸಂಧತೆ,ಭ್ರಾತೃಪ್ರೇಮ,ರಾಷ್ಟ್ರ ಪ್ರೇಮ, ಸಮಾನತೆ, ಪ್ರಜಾಭ್ಯುದಯ, ನ್ಯಾಯ, ನಿಷ್ಠುರತೆ, ಸ್ತ್ರೀ ಗೌರವ, ಧರ್ಮ ಸಂರಕ್ಷಣೆ ಮೊದಲಾದ ಶ್ರೀರಾಮನ ಆದರ್ಶಗಳನ್ನು ಇಂದಿನ ಯುವಜನತೆಯಲ್ಲಿ ಜಾಗೃತಗೊಳಿಸುವಲ್ಲಿ ಇಂತಹ ಉಪನ್ಯಾಸ ಕಾರ‍್ಯಕ್ರಮಗಳ ಪಾತ್ರ ಮುಖ್ಯವಾಗಿರುತ್ತದೆ. ಎಂದು ಹೇಳಿದರು.

ಕಾರ‍್ಯಕ್ರಮದಲ್ಲಿ ಪುತ್ತೂರಿನತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ,ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ , ನರೇಂದ್ರ ಪ.ಪೂ. ಕಾಲೇಜು ಇದರ ಆಡಳಿತ ಮಂಡಳಿಯ ಅಧ್ಯಕ್ಷರು,ಸಂಚಾಲಕರು,ಸದಸ್ಯರು,ಮುಖ್ಯಗುರುಗಳು,ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ‍್ಯಕ್ರಮದಲ್ಲಿ ನರೇಂದ್ರ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರಾದ ಧನ್ಯ ವಂದಿಸಿದರು.ನರೇಂದ್ರ ಪ.ಪೂ. ಕಾಲೇಜಿನ ಗಣಕ ವಿಜ್ಞಾನ ಉಪನ್ಯಾಸಕರಾದ ಶ್ರೀಮತಿ ನಾಗಶ್ರೀ ಕಾರ‍್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here