ಪುತ್ತೂರು: ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಶ್ರೀ ಹನುಮಗಿರಿ ಮೇಳ ಇವರಿಂದ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಯಕ್ಷಗಾನದ ಪಾರಂಪರಿಕ ಸಂಭ್ರಮ, ಯಕ್ಷ ಪರಂಪರೆಯ ಭಾಗವತ ಕುರಿಯ ಗಣಪತಿ ಶಾಸ್ತ್ರೀಯವರ ನಿರ್ದೇಶನ ಹಾಗೂ ಭಾಗವತಿಕೆಯೊಂದಿಗೆ ದ.27 ರಂದು ಸಂಜೆ 6 ರಿಂದ ಕವಿ ಮುದ್ದಣ್ಣ ವಿರಚಿತ ‘ ಕುಮಾರ ವಿಜಯ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಇದಲ್ಲದೆ ಭಾಗವತ ರಂಗನಾಯಕ ಕುರಿಯ ಗಣಪತಿ ಶಾಸ್ತ್ರೀಗಳಿಗೆ ಅಭಿನಂದನೆ ಕಾರ್ಯಕ್ರಮ ಕೂಡ ಇದೇ ಸಂದರ್ಭದಲ್ಲಿ ನಡೆಯಲಿದೆ.
ವಿಶೇಷ ಆಕರ್ಷಣೆ
ಯಕ್ಷಗಾನ ಬಯಲಾಟದಲ್ಲಿ ವಿಶೇಷ ಆಕರ್ಷಣೆಯಾಗಿ ಯಕ್ಷ ಪರಂಪರೆಯ ಭಾಗವತ ಕುರಿಯ ಗಣಪತಿ ಶಾಸ್ತ್ರೀಯವರ ಭಾಗವತಿಕೆ ಹಾಗೂ ಷಣ್ಮುಖ ಸುಬ್ರಾಯ ಕುಣಿತ, ದೇವೇಂದ್ರನ ಸಭಾಕಲಾಸು, ಶೂರಪದ್ಮನ ತೆರೆಕಲಾಸು ಯಕ್ಷಪ್ರೇಮಿಗಳನ್ನು ರಂಜಿಸಲಿದೆ. ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಕ್ಷಗಾನದ ಪಾರಂಪರಿಕ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.