ಕೋಡಿಂಬಾಡಿ: ಕಾರು-ಲಾರಿ ಅಪಘಾತ ಕಾರಲ್ಲಿದ್ದ ಮೆಸ್ಕಾಂ ಅಧಿಕಾರಿಗೆ ಗಾಯ

0

ಪುತ್ತೂರು: ಕೋಡಿಂಬಾಡಿಯಲ್ಲಿ ಇಕೋಸ್ಪೋರ್ಟ್ಸ್ ಕಾರು ಹಾಗೂ ಈಚರ್ ಲಾರಿ ಮಧ್ಯೆ ಅಪಘಾತ ಸಂಭವಿಸಿ ಕಾರಲ್ಲಿದ್ದ ಓರ್ವರು ತೀವ್ರ ಗಾಯಗೊಂಡಿರುವ ಘಟನೆ ದ.28ರಂದು ತಡರಾತ್ರಿ 12.25ರ ಸುಮಾರಿಗೆ ನಡೆದಿದೆ.ಕೋಡಿಂಬಾಡಿ ಧರ್ಮಶ್ರೀ ಭಜನಾ ಮಂದಿರದ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ.

ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಇಕೋಸ್ಪೋರ್ಟ್ಸ್ ಕಾರು (ಕೆಎ 21ಪಿ-9416)ಮತ್ತು ಎದುರುಗಡೆಯಿಂದ ಬರುತ್ತಿದ್ದ ಈಚರ್ ಲಾರಿ(ಕೆಎ 12-ಸಿ:2676)ರ ನಡುವೆ ಅಪಘಾತ ಸಂಭವಿಸಿದೆ.ಕಾರಿನ ಮುಂಭಾಗ ಜಖಂಗೊಂಡಿದ್ದು ಕಾರಿನ ಹಿಂಬದಿ ಸೀಟಲ್ಲಿದ್ದ ಮೆಸ್ಕಾಂ ಅಧಿಕಾರಿ ಆನಂದ ಉಕ್ಕುಡ ಎಂಬವರು ತೀವ್ರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಕಾರು ಚಾಲಕ ಲೇಖನ್ ಬನ್ನೂರು ಹಾಗೂ ಇನ್ನೋರ್ವರು ಅಪಾಯದಿಂದ ಪಾರಾಗಿದ್ದಾರೆ.ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here