ಜ.6ರಿಂದ ಫೆ.4ರವರೆಗೆ ಕೋಡಿಂಬಾಡಿಯಲ್ಲಿ 17ನೇ ವರ್ಷದ ನಗರ ಭಜನೋತ್ಸವ

0

ಪುತ್ತೂರು: ಧರ್ಮಶ್ರೀ ಭಜನಾ ಮಂದಿರ ಟ್ರಸ್ಟ್ ಅಶ್ವತ್ಥಕಟ್ಟೆ ಕೋಡಿಂಬಾಡಿ ಇದರ ವತಿಯಿಂದ 17ನೇ ವರ್ಷದ ನಗರ ಭಜನೋತ್ಸವ ಜನವರಿ 6ರಿಂದ ಫೆಬ್ರವರಿ 4ರವರೆಗೆ ನಡೆಯಲಿದೆ.

ಜ.6ರಂದು ಬೆಳಿಗ್ಗೆ 8 ಗಂಟೆಗೆ ಭಜನಾ ಮಂದಿರದಲ್ಲಿ ಮಹಾಗಣಪತಿ ಹೋಮ, ಸಂಜೆ 6ಕ್ಕೆ ಮಂದಿರದಿಂದ ಮನೆಮನೆ ಭಜನೆಗೆ ಹೊರಡುವುದು, ಬಳಿಕ ಪ್ರತೀ ರಾತ್ರಿ ಗ್ರಾಮ ವ್ಯಾಪ್ತಿಯಲ್ಲಿ ಬೈಲುವಾರು ಭಜನೆ, ಫೆ.2ರಂದು ರಾತ್ರಿ 8.30ಕ್ಕೆ ಮನೆಮನೆ ಭಜನೆ ಮುಗಿಸಿ ಮಂದಿರಕ್ಕೆ ಆಗಮಿಸುವುದು. ಫೆ.3ರಂದು ಬೆಳಿಗ್ಗೆ 6ರಿಂದ ಏಕಾಹ ಭಜನೆ ಆರಂಭ, ಮಧ್ಯಾಹ್ನ 12ಕ್ಕೆ ಅಶ್ವತ್ಥಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಅಶ್ವತ್ಥಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಫೆ.4ರಂದು ಬೆಳಿಗ್ಗೆ ಏಕಾಹ ಭಜನೆಯ ಮಂಗಳ ಜರಗಲಿದೆ
ಎಂದು ಧರ್ಮಶ್ರೀ ಭಜನಾ ಮಂದಿರ ಟ್ರಸ್ಟ್ ಗೌರವಾಧ್ಯಕ್ಷ ಚಂದ್ರಹಾಸ ರೈ ಸರೋಳಿ, ಅಧ್ಯಕ್ಷ ಶೇಖರ ಪೂಜಾರಿ ನಿಡ್ಯ, ಕಾರ್ಯದರ್ಶಿ ದಯಾನಂದ ಗೌಡ ಬೋಳಾಜೆ, ಪ್ರಧಾನ ಅರ್ಚಕ ಅನಂತೇಶ ಮಯ್ಯ ಮತ್ತು ಅರ್ಚಕ ದೀಪಕ್ ಮಣಿಯಾಣಿ ತಿಳಿಸಿದ್ದಾರೆ.

ಫೆ.3ರಂದು 6ನೇ ವರ್ಷದ ಅಶ್ವತ್ಥಪೂಜೆ, 46ನೇ ವರ್ಷದ ಸತ್ಯನಾರಾಯಣ ಪೂಜೆ
ಸಾರ್ವಜನಿಕ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಅಶ್ವತ್ಥಕಟ್ಟೆ, ಕೋಡಿಂಬಾಡಿ ಇದರ ವತಿಯಿಂದ ಫೆ.3ರಂದು ಮಧ್ಯಾಹ್ನ 12ರಿಂದ ಕೋಡಿಂಬಾಡಿ ಅಶ್ವತ್ಥಕಟ್ಟೆಯಲ್ಲಿ ಆರನೇ ವರ್ಷದ ಸಾರ್ವಜನಿಕ ಶ್ರೀ ಅಶ್ವತ್ಥಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ‌ 6.30ರಿಂದ 46ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ(ವೃತ) ಪೂಜೆ, ವೇದಮೂರ್ತಿ ಶ್ರೀವತ್ಸ ಕೆದಿಲಾಯ ಶಿಬರ ಇವರಿಂದ ಕಥಾವಾಚನ ನಡೆಯಲಿದ್ದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ವಾರಿಸೇನ ಜೈನ್ ಕೋಡಿಯಾಡಿ, ಅಧ್ಯಕ್ಷ ಕೇಶವ ಭಂಡಾರಿ ಕೈಪ, ಪ್ರಧಾನ ಕಾರ್ಯದರ್ಶಿ ದೇವಾನಂದ ಕೆ. ಮತ್ತು ಅರ್ಚಕ ಬಾಲಕೃಷ್ಣ ಐತಾಳ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here