ಪುತ್ತೂರು: ನೂರಾನಿ ಫ್ಯಾಮಿಲಿ ಟ್ರಸ್ಟ್ ಬೆಟ್ಟಂಪಾಡಿ ಇದರ ಆಶ್ರಯದಲ್ಲಿ ಏಳನೇ ವರ್ಷದ ಕುಟುಂಬ ಸಂಗಮ ಬೆಟ್ಟಂಪಾಡಿ ‘ಅರ’ ಹೌಸ್ ವಠಾರದಲ್ಲಿ ನಡೆಯಿತು. ಟ್ರಸ್ಟ್ ಅಧ್ಯಕ್ಷ ಮೂಸಲ್ ಮದನಿ ಕಕ್ಕೂರು ಸಭಾಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಅಝೀಝ್ ಮುಸ್ಲಿಯಾರ್ ಕಾವು ಸಭೆ ಉದ್ಘಾಟಿಸಿದರು. ಕುಟುಂಬದ ವಿದ್ಯಾರ್ಥಿಗಳಿಂದ ಖಿರಾಅತ್, ಹಾಡು, ಭಾಷಣ, ಕ್ವಿಜ್, ಕ್ರಾಫ್ಟ್ ಮುಂತಾದ ವೈವಿಧ್ಯಮಯ ಸ್ಪರ್ಧೆಗಳು ನಡೆಯಿತು.
ಕುಟುಂಬದ ಐದು ಮಂದಿ ಹಿರಿಯರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಳೆದ ಬಾರಿಯ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಮಹಿಳಾ ಶರೀಅತ್ ಕಾಲೇಜಿನಲ್ಲಿ ಪದವಿ ಪಡೆದವರನ್ನು ಸನ್ಮಾನಿಸಲಾಯಿತು.
ಕುಟುಂಬ ಸದಸ್ಯರಾದ ಅಬ್ದುಲ್ ಖಾದರ್ ರಝ್ವಿ ದೇರಳಕಟ್ಟೆ, ಅಬೂಬಕರ್ ಸಅದಿ ಕುಕ್ಕಾಜೆ ಕುಟುಂಬ ಸಂಬಂಧ ಬೆಳೆಸುವುದರ ಮಹತ್ವದ ಕುರಿತು ಮಾತನಾಡಿದರು.
ಕುಟುಂಬ ಪ್ರಮುಖರಾದ ಅಬ್ದುಲ್ ಖಾದರ್ ಹಾಜಿ ಅಂಕತ್ತಳ, ಮೂಸಕುಂಞಿ ಹಾಜಿ ಮಾಡಾವು, ಮುಹಮ್ಮದ್ ಪಳ್ಳಿತರು, ದಾವೂದ್ ಲತೀಫಿ ಕುಕ್ಕಾಜೆ, ಇಸ್ಮಾಯಿಲ್ ಸಅದಿ ಅಂಕತ್ತಳ, ಖಲಂದರ್ ಹಿಮಮಿ, ಹಮೀದ್ ಹಿಮಮಿ, ಮುಹಮ್ಮದ್ ಹನೀಫ್, ಮುಹಮ್ಮದ್ ಕುಂಞಿ ಅಂಕತ್ತಳ, ಶರೀಫ್ ನಿಡ್ಪಳ್ಳಿ, ಖಲಂದರ್ ಗಡಿಪಿಲ, ಫಾರೂಖ್ ಕೊಡಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಫ್ಯಾಮಿಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ನೂರಾನಿ ಸ್ವಾಗತಿಸಿ ವಂದಿಸಿದರು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಹಾಗೂ ವಿಜೇತರಿಗೆ ಬಹುಮಾನ ವಿತರಿಸಲಾಯಿತು.