ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದ ಸಹ ಸಂಚಾಲಕರಾಗಿ ಪ್ರಶಾಂತ್ ಕೆಡೆಂಜಿ ನೇಮಕ

0

ಕಾಣಿಯೂರು: ಭಾರತೀಯ ಜನತಾ ಪಾರ್ಟಿಯ ರಾಜ್ಯ ಮಾಧ್ಯಮ ವಿಭಾಗದ ಸಹ ಸಂಚಾಲಕರಾಗಿ ಪ್ರಶಾಂತ್ ಕೆಡೆಂಜಿ ಅವರನ್ನು ನೇಮಕಗೊಳಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರರವರು ಆದೇಶಿಸಿದ್ದಾರೆ.

ಸವಣೂರು ಗ್ರಾಮದ ಕೆಡೆಂಜಿ ಗಂಗಾಧರ ಗೌಡ ಅವರ ಪುತ್ರರಾಗಿರುವ ಪ್ರಶಾಂತ್ ಕೆಡೆಂಜಿಯವರು ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ಮತ್ತು ಬಿ.ಇ ಇನ್ ಜರ್ನಲಿಸಮ್ ಮಾಡಿರುತ್ತಾರೆ. ಇವರು ಆದಿಚುಂಚನಗಿರಿ ವಿದ್ಯಾ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿರುತ್ತಾರೆ. ಪ್ರಸ್ತುತ ರಾಜ್ಯ ಮಾಧ್ಯಮ ಸಮಿತಿ ಸದಸ್ಯರಾಗಿರುವ ಪ್ರಶಾಂತ್‌ರವರು, ಬಾಲ್ಯದಿಂದಲೇ ಸ್ವಯಂ ಸೇವಕ, ಪ್ರಾಥಮಿಕ ಶಿಕ್ಷಣವನ್ನು ಪಡೆದಿರುವ ಇವರು ’ಸರಹದ್ ಕೋ ಪ್ರಣಾಮ್’ ಕುರಿತು ರಾಜಸ್ತಾನದ ಗಡಿಯಲ್ಲಿ ನಡೆದ ಅಭಿಯಾನದಲ್ಲಿ ಭಾಗಿಯಾಗಿದ್ದರು. 2011ರಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತ ಮತ್ತು ಕಾಲೇಜು ಅಧ್ಯಕ್ಷರಾಗಿ, ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್‌ನ ಬೆಂಗಳೂರು ಉತ್ತರ ಜಿಲ್ಲಾ ಸಹ ಸಂಚಾಲಕರಾಗಿ, 2012ರಿಂದ 2013ರ ತನಕ ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ವಿಸ್ತಾರಕನಾಗಿ, 2013ರಲ್ಲಿ ಸ್ವಾಮೀ ವಿವೇಕಾನಂದರ 150ನೇ ವರ್ಷದ ಅಂಗವಾಗಿ ಪೂರ್ಣಾವಽ ಕಾರ್ಯಕರ್ತನಾಗಿ, 2013-14ರ ತನಕ ಬೆಂಗಳೂರು ನಗರ ಅಖಿಲ ಭಾರತೀಯ ವಿದಾರ್ಥಿ ಪರಿಷತ್‌ನ ನಗರ ಸಂಘಟನಾ ಕಾರ್ಯದರ್ಶಿಯಾಗಿ, 2014-16ರ ತನಕ ಬೆಂಗಳೂರು ಕೇಂದ್ರ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ, 2016-18 ಬೆಂಗಳೂರು ಉತ್ತರ ವಿಭಾಗ ಸಂಘಟನಾ ಕಾರ್ಯದರ್ಶಿಯಾಗಿ, 2018-20ತನಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಬೆಂಗಳೂರು ಗ್ರಾಮಾಂತರ ವಿಭಾಗ ಸಂಘಟನಾ ಕಾರ್ಯದರ್ಶಿಯಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಪರಿಷತ್ ಸದಸ್ಯರಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ನಡೆದ ’ಸೃಷ್ಠಿ 2016’ ಕಾರ್ಯಕ್ರಮದ ಸಂಯೋಜಕರಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಡೆದ ’ಸಾಮಾಜಿಕ ದರ್ಶನ 2017’ ಕಾರ್ಯಕ್ರಮದ ಬೆಂಗಳೂರು ಸಂಚಾಲಕನಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ನಡೆದ ’ಹಾಸ್ಟೆಲ್‌ಗಳು ಜ್ಞಾನದ ಸೌಧಗಳಾಗಲಿ’ ಅಭಿಯಾನ ಕಾರ್ಯಕ್ರಮದ ಸಂಯೋಜಕರಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಡೆದ 6 ರಾಷ್ಟ್ರೀಯ ಅಧಿವೇಶದಲ್ಲಿ ಭಾಗಿಯಾಗಿ, 2020ರಲ್ಲಿ ಬಿಜೆಪಿ ರಾಜ್ಯ ಮಾಧ್ಯಮ ಸಮಿತಿ ಸದಸ್ಯರಾಗಿ ನೇಮಕಗೊಂಡಿರುವ ಪ್ರಶಾಂತ್‌ರವರು ಬೆಳಗಾವಿ ಮತ್ತು ಧಾರವಾಡ ವಿಭಾಗದ ಮಾಧ್ಯಮ ಪ್ರಭಾರಿಯಾಗಿ, ಕಳೆದ 3 ವರ್ಷಗಳಿಂದ ಪೂರ್ಣ ಸಮಯವನ್ನು ಪಕ್ಷದ ಮಾಧ್ಯಮ ನಿರ್ವಾಹಕರಾಗಿ, ರಾಜ್ಯ ಮೋರ್ಚಾಗಳ ಮಾಧ್ಯಮ ಉಸ್ತುವಾರಿಯಾಗಿ, ಜನಸ್ವರಾಜ್ ಯಾತ್ರೆಯ ಮಾಧ್ಯಮ ಸಂಯೋಜಕರಾಗಿ, ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ನಡೆದ ’ಗ್ರಾಮ ಸ್ವರಾಜ್’ ಯಾತ್ರೆಯ ಮಾಧ್ಯಮ ಸಂಯೋಜಕರಾಗಿ, ಜನಸಂಕಲ್ಪ ಯಾತ್ರೆಯ ಮಾಧ್ಯಮ ಸಂಯೋಜನಕರಾಗಿ, ಚುನಾವಣೆ ದೃಷ್ಠಿಯಿಂದ ರಾಜ್ಯ ಮೋರ್ಚಾಗಳ ಸಮಾವೇಶದ ಮಾಧ್ಯಮ ಸಂಯೋಜಕರಾಗಿ 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದ ’ವಿಜಯ ಸಂಕಲ್ಪ’ ಯಾತ್ರೆಯ ಮಾಧ್ಯಮ ಸಂಯೋಜಕರಾಗಿ, ಜಿಲ್ಲಾ ಸಂಚಾಲಕರು ಹಾಗೂ ವಕ್ತಾರರಿಗೆ ನಡೆದ ’ಮಾಧ್ಯಮ ಮಂಥನ’ ಕಾರ್ಯಕ್ರಮದ ಸಂಯೋಜಕರಾಗಿ, ರಾಷ್ಟ್ರೀಯ, ರಾಜ್ಯ ನಾಯಕರ ಪತ್ರಿಕಾಗೋಷ್ಠಿ ಹಾಗೂ ಪತ್ರಿಕಾ ಹೇಳಿಕೆಯ ಮಾಧ್ಯಮ ಸಂಯೋಜಕರಾಗಿ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರು, ಕೇಂದ್ರ ಗೃಹ ಸಚಿವರು ಹಾಗೂ ಪ್ರಮುಖ ನಾಯಕರ ಪ್ರವಾಸ ಸಂದರ್ಭದಲ್ಲಿ ನ್ಯಾಷನಲ್ ಸುದ್ದಿ ವಾಹಿನಿ ಹಾಗೂ ರಾಜ್ಯದ ಪ್ರಮುಖ ಸುದ್ದಿ ವಾಹಿನಿಗಳ ಸಂದರ್ಶನದ ಸಂಯೋಜಕರಾಗಿ, 2023ರ ಚುನಾವಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರ‍್ಯಾಲಿ ಹಾಗೂ ಸಮಾವೇಶಕ್ಕೆ ಸಂಬಂಽಸಿದಂತೆ ಮಾಧ್ಯಮ ಸಂಯೋಜಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಐ.ಎ.ಎಸ್ ಅಧಿಕಾರಿ ಡಿ.ಕೆ ರವಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಲು ಬೆಂಗಳೂರಿನಲ್ಲಿ ಕಾಂಗ್ರೆಸ್ ಸರಕಾರದ ವಿರುದ್ದ ನಡೆದ ಬೃಹತ್ ಪ್ರತಿಭಟನೆಯ ನೇತೃತ್ವ ಸೇರಿದಂತೆ ವಿವಿಧ ಪ್ರತಿಭಟನೆ, ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.

LEAVE A REPLY

Please enter your comment!
Please enter your name here