ಬದಿನಾರು ಶ್ರೀ ಪೂಮಾಣಿ- ಕಿನ್ನಿಮಾಣಿ ಹಾಗೂ ವ್ಯಾಘ್ರಚಾಮುಂಡಿ ದೇವಸ್ಥಾನದ ನೇಮೋತ್ಸವ

0

ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಹಾಗೂ ಬದಿನಾರು ಶ್ರೀ ಪೂಮಾಣಿ- ಕಿನ್ನಿಮಾಣಿ ಹಾಗೂ ವ್ಯಾಘ್ರಚಾಮುಂಡಿ ದೇವಸ್ಥಾನದ ನೇಮೋತ್ಸವವು ಬ್ರಹ್ಮಶ್ರೀ ವೇದ ಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಆಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ  ನಡೆಯಿತು.

ಜ.18ರಂದು ಬೆಳಗ್ಗೆ  ಬೆಳ್ಳಿಪ್ಪಾಡಿ ಪಡುಮಲೆ ಮನೆಯಿಂದ ಮಲರಾಯ ದೈವದ ಭಂಢಾರ ಬಂದು ಮಲರಾಯ ದೈವದ ನೇಮ ಗ.11ರಿಂದ ವ್ಯಾಘ್ರಚಾಮುಂಡಿ (ರಾಜನ್) ದೈವದ ನೇಮ, ಪ್ರಸಾದ ವಿತರಣೆ  ಅನ್ನಸಂತರ್ಪಣೆ ನಡೆಯಿತು. ಸಂಜೆ, ಕನ್ನಡ್ಕ ತರವಾಡು ದೈವಸ್ಥಾನದಿಂದ ರುದ್ರ ಚಾಮುಂಡಿ ದೈವದ ಭಂಡಾರ ತರಲಾಯಿತು.,  ರಾತ್ರಿ 7.30ರಿಂದ ಪಡುಮಲೆ ದೊಡ್ಡಮನೆಗೆ ಅವಭೃತ ಸ್ನಾನಕ್ಕೆ ಹೋಗುವುದು. ಕಟ್ಟೆಪೂಜೆ, ಧ್ವಜಾವರೋಹಣ,ರುದ್ರಚಾಮುಂಡಿ ದೈವದ ನೇಮ, ನವಕಾಭಿಷೇಕ,ಮಂತ್ರಾಕ್ಷತೆ ಬಳಿಕ ಗುಳಿಗ ದೈವದ ನೇಮ ನಡೆಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಅರಣ್ಯ ಸಚಿವ ರಾಮನಾಥ ರೈ ಬೆಳ್ಳಿಪಾಡಿ, ವ್ಯವಸ್ಥಾಪನಾ ಸಮಿತಿ ನಿಕಟಪುರ್ವ ಅಧ್ಯಕ್ಷ ರವಿರಾಜ ಶೆಟ್ಟಿ ಅಣಿಲೆ, ಕುತ್ಯಾಳಪಾದೆ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೂಕ್ತೇಸರ ವಿನೋದ್ ಆಳ್ವ ಮೂಡಾಯೂರು, ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ಭಟ್, ಬ್ರಹ್ಮಕಲಶೋತ್ಸವದ ಆರ್ಥಿಕ ಸಮಿತಿ ಸದಸ್ಯ ವೇಣುಗೋಪಾಲ ಭಟ್, ಸದಸ್ಯರಾದ ದಯಾ ವಿ.ರೈ ಬೆಳ್ಳಿಪ್ಪಾಡಿ, ರವಿರಾಜ ರೈ ಸಜಂಕಾಡಿ, ಚಿದಾನಂದ ಗೌಡ, ಸಾರಕುಟೇಲು, ಶ್ರೀಧರ ಎನ್ ನೇರ್ಲಪ್ಪಾಡಿ, ವಿಶ್ವನಾಥ ಪೂಜಾರಿ ಪುಜಾರಿಮುಲೆ, ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ ಪದಡ್ಕ ಮತ್ತು  ಪ್ರಮುಖರರಾದ ತಿಲೋತ್ತಮಾ ರೈ , ಬಾಲಕೃಷ್ಣ ರೈ ಕುದ್ಕಾಡಿ, ಗಣೇಶ ರೈ ಮುಳಿಪಡ್ಪು ಮೂಡಾಯುರು, ಅಯಾಗ್ ಅಳ್ವ ಮೂಡಾಯೂರು,  ಬಾಲಚಂದ್ರ ರೈ ಬೆದ್ದರ್ಮಾರ್, ಕೃಷ್ಣ ರೈ ಕುದ್ಕಾಡಿ, ಪಡುಮಲೆ ಸೇನೆರ್ ಲಕ್ಷ್ಮೀ ನಾರಾಯಣ ರಾವ್, ರಾಮಣ್ಣ ಗೌಡ  ಕರ್ಪುಡಿಕಾನ, ಅನಂತ್  ರೈ ಮೂಡಾಯೂರು, ಗಣೇಶ ಭಟ್ ಈಶಮೂಲೆ, ನಾರಾಯಣ ಗೌಡ ಕನ್ನಡ್ಕ ಹಾಗೂ ಊರಾ ಪರವೂರ ಭಕ್ತಾಧಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here