ಪುತ್ತೂರು: ಜ. 28ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಸ್ತ ನೂರನೇ ವಾರ್ಷಿಕೋತ್ಸವದ ಉದ್ಘಾಟನಾ ಸಮ್ಮೇಳನದ ಪ್ರಚಾರಾರ್ಥ ಜ.19ರಂದು ಜುಮಾ ನಮಾಝ್ ಬಳಿಕ ಪರ್ಲಡ್ಕ ಮಸೀದಿಯಲ್ಲಿ ಧ್ವಜ ದಿನಾಚರಣೆ ಹಾಗೂ ಸಾಮೂಹಿಕ ಖಬರ್ ಝಿಯಾರತ್ ನಡೆಸಲಾಯಿತು. ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹಾಜಿ ಧ್ವಜಾರೋಹಣಗೈದರು.
ಸ್ಥಳೀಯ ಖತೀಬರಾದ ಅಬ್ದುಲ್ ರಶೀದ್ ರಹ್ಮಾನಿ ಸಮಸ್ತದ ವಿಶುದ್ಧ ಆದರ್ಶ ಹಾಗೂ ಸಮಾಜಕ್ಕೆ ಸಮಸ್ತದ ಕೊಡುಗೆಯನ್ನು ವಿವರಿಸಿ ಉದ್ಭೋಧನೆ ನೀಡಿದರು. ನಂತರ ಸಾಮೂಹಿಕ ಖಬರ್ ಝಿಯಾರತ್ ನಡೆಸಲಾಯಿತು. ಜಮಾಅತ್ ಆಡಳಿತ ಸಮಿತಿ ಪದಾಧಿಕಾರಿಗಳಾದ ಫಾರೂಕ್ ನಿಶ್ಮ,ಬಶೀರ್ ಅಕ್ಕರೆ,ಶಮೀರ್ ಸ್ಕೇಲ್, ಅಬ್ದುಲ್ಲ ಗುಡ್ಡೆ, ಇಬ್ರಾಹಿಂ ಕೋಡಿಜಾಲ್, ಶರೀಅತ್ ಕಾಲೇಜು ಕಾರ್ಯದರ್ಶಿ ಹಂಝ ಹಾಜಿ ಪಿ.ಎಸ್,ಸಮಸ್ತ ವಿದ್ಯಾಭ್ಯಾಸ ಮಂಡಳಿ ಸದಸ್ಯ ರಶೀದ್ ಹಾಜಿ ಪರ್ಲಡ್ಕ , ಶರೀಅತ್ ಕಾಲೇಜು ವ್ಯವಸ್ಥಾಪಕ ಮುಸ್ತಫಾ ಫೈಝಿ ಮಲಪ್ಪುರಂ,ಉಸ್ಮಾನ್ ಮುಸ್ಲಿಯಾರ್,ತ್ವಾಯಿಫ್ ಫಾಳಿಲಿ,ಎಸ್ ಕೆ ಎಸ್ ಎಸ್ ಎಫ್ ನಾಯಕರಾದ ಸಿನಾನ್ ಪರ್ಲಡ್ಕ,ತ್ವಾಹ ಪರ್ಲಡ್ಕ,ಸುಹೈಲ್ ಪರ್ಲಡ್ಕ,ಮುಸ್ತಫಾ ಫೈಝಿ, ಮುಹಮ್ಮದ್ ಮೆಡಿಕಲ್, ಝಾಹಿದ್ ಗುಡ್ಡೆ, ಹಮೀದ್ ಪಿ.ಎಸ್, ಹಮೀದ್ ಗುಡ್ಡೆ, ಇ ಎಸ್ ಎಸ್ ವೈ ಎಸ್ ಪದಾಧಿಕಾರಿಗಳು,ಜಮಾಅತ್ ಸದಸ್ಯರು,ಹಿರಿಯರು ಭಾಗವಹಿಸಿದ್ದರು.