ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನೆಯ ವಿಶೇಷ ದಿನದಂದು ಹನುಮಾನ್ ಚಾಲೀಸ್ ಪಠಣ, ರಾಮ ರಕ್ಷ ಸ್ತೋತ್ರ, ಭಜನೆ, ಹಾಗೂ ವಿದ್ಯಾರ್ಥಿಗಳಿಂದ ರಾಮ, ಲಕ್ಶ್ಮಣ, ಸೀತೆ, ಹನುಮಂತ ವೇಷ ಪ್ರದರ್ಶನ ನಡೆಸಲಾಯಿತು.
ಶಾಲಾ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್ 990 ರ ಅವಧಿಯಲ್ಲಿ ಅಯೋಧ್ಯೆಗೆ ಭೇಟಿ ನೀಡಿ ಅಲ್ಲಿನ ಪ್ರತಿಯೊಂದು ಹಂತವನ್ನು ವಿವರಿಸಿದರು.ಯೋಚನೆ ಪೂರ್ತಿಯಾದರೆ ಜೀವನ ಸಾರ್ಥಕ ಎಲ್ಲದಕ್ಕೂ ಒಂದೇ ಪ್ರೇರಣೆ ಬರಬೇಕು. ಕಷ್ಟ ಬಂದಾಗ ಶ್ರೀರಾಮ ಎಂದರೆ ಅಲ್ಲಿ ಯೋಚನೆಗಳು ಉತ್ತಮವಾಗುತ್ತದೆ. ಅದುವೇ ದೇವರ ಅನುಗ್ರಹ. ವಿದ್ಯಾರ್ಥಿಗಳು ವಿದ್ಯಾವಂತರಾಗಿ ವಿಚಾರಮಾಡಿ ಬುದ್ದಿವಂತರಾಗಿ ಬಾಳಿ ಎಂದರು.
ಶಾಲಾ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕೆದಿಲಾಯರು ರಾಮನ ವಿಶೇಷತೆಯನ್ನು ವಿದ್ಯಾರ್ಥಿಗಳಲ್ಲಿ ಹೇಳಿಸಿ, ಪ್ರೋತ್ಸಾಹಿಸಿದರು. ರಾಮ ಮಂದಿರದ ಹಿನ್ನಲೆಯನ್ನು ಅರ್ಥೈಸಿದರು.
ಸದಸ್ಯ ಹರೀಶ್ ಪುತ್ತೂರಾಯಾ ನಮ್ಮ ಜೀವಿತಾವಧಿಯಲ್ಲಿ ನಡೆಯುವ ವಿಶೇಷ ಸಂದರ್ಭಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ದೇವಾಲಯವನ್ನು ಕಟ್ಟುವುದು ಮಾತ್ರವಲ್ಲ ಅದನ್ನು ಉಳಿಸಿಕೊಂಡು ರಾಮನ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿ ಉತ್ತಮ ಪ್ರಜೆಯಾಗಿ ಬಾಳೋದು ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದ ಜಯರಾಮ ಕೆದಿಲಾಯ ರವರು ಮಾತನಾಡಿ 33 ವರ್ಷದ ವಿಭಜನೆಯ ನಂತರ ಶ್ರೀರಾಮಚಂದ್ರನನ್ನು ನೋಡುವ ಭಾಗ್ಯ ನಮಗೆಲ್ಲರಿಗೂ ಇಂದು ಒದಗಿ ಬಂದಿದೆ ಎಂದರು.
ಮುಖ್ಯೋಪಾಧ್ಯಾಯಿನಿ ಜಯಮಾಲಾ ವಿ ಎನ್ ಸ್ವಾಗತಿಸಿ, ರವಿಶಂಕರ್ ವಂದಿಸಿ, ನಿರೂಪಿಸಿ, ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ನಂತರ ಧಾರ್ಮಿಕ ಕಾರ್ಯಕ್ರಮ ನಡೆಯಿತುತರಗತಿವಾರು ಭಕ್ತಿಗೀತೆ, ರಸಪ್ರಶ್ನೆ, ರಾಮನ ಚಿತ್ರಬಿಡಿಸುದು, ರಾಮನಿಗೆ ಬಣ್ಣ ಹಚ್ಚುವುದು ಇನ್ನೂ ಇತರ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.ಪೋಷಕರು, ಶಿಕ್ಷಕ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.