7ನೇ ವೇತನ ಆಯೋಗ ವರದಿ, ಹಳೆ ಪಿಂಚಣಿ ಯೋಜನೆ, ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಬಗ್ಗೆ ತಾ|ಸರಕಾರಿ ನೌಕರರ ಸಂಘದಿಂದ ಶಾಸಕರಿಗೆ ಮನವಿ

0

ಪುತ್ತೂರು: 7ನೇ ವೇತನ ಆಯೋಗ ವರದಿ, ಹಳೆ ಪಿಂಚಣಿ ಯೋಜನೆ, ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಬಗ್ಗೆ ತಾಲೂಕು ಸರಕಾರಿ ನೌಕರರ ಸಂಘದಿಂದ ಜ.22 ರಂದು ಶಾಸಕರಿಗೆ ಮನವಿ ಮಾಡಲಾಯಿತು.


ಈ ಸಂದರ್ಭದಲ್ಲಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಅಬ್ರಹಾಂ ಎಸ್.ಎ.,ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ, ಉಪಾಧ್ಯಕ್ಷ ‌ಹೊನ್ನಪ್ಪಗೌಡ, ವಿಜಯಕುಮಾರ್, ಶ್ರೀಮತಿ ಪದ್ಮಾವತಿ,ಕ್ರೀಡಾ ಕಾರ್ಯದರ್ಶಿ ಅಶ್ರಫ್, ವಿನೋದ್, ಕವಿತಾ,ಗಿರಿಧರ್ ಗೌಡ, ಗೌರವಾಧ್ಯಕ್ಷ ರಾಮಚಂದ್ರ, ಜಿಲ್ಲಾ ವೈದ್ಯಾಧಿಕಾರಿ ಸಂಘದ ಅಧ್ಯಕ್ಷ ಡಾ!ದೀಪಕ್ ರೈ, ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಸಂಘದ ನಾಗೇಶ್, ನಗರಸಭಾ ಪೌರಾಡಳಿತ ಸಂಘದ ಅಧ್ಯಕ್ಷ ಕರುಣಾಕರ್, ಡಿ ಗ್ರೂಪ್ ಸಂಘದ ಅಧಕ್ಷ ಚಂದ್ರು, ಶುಶ್ರೂಷಕಿ ಸಂಘದ ಅಧ್ಯಕ್ಷೆ ಗಾಯತ್ರಿ, ದೈಹಿಕ ಶಿಕ್ಷಕ ಸಂಘದ ಸೀತಾರಾಮ್, ಜಿಲ್ಲಾ ಫಾರ್ಮಸಿ ಸಂಘ ಅಧ್ಯಕ್ಷ ಸುನೀಲ್, ಉಪನ್ಯಾಸಕ ಸಂಘದ ಅಧ್ಯಕ್ಷ ಹರಿಪ್ರಕಾಶ್ ಬೈಲಾಡಿ, ಕ್ಷೇತ್ರ ಶಿಕ್ಷಾಣಾಧಿಕಾರಿ ಕಚೇರಿ ಸಿಬ್ಬಂದಿ, ಪ್ರೌಢಶಾಲಾ ಶಿಕ್ಷಕ ಸಂಘ, ತಾಲೂಕು ಕಚೇರಿ ಸಿಬ್ಬಂದಿ, ನ್ಯಾಯಾಂಗ ಇಲಾಖಾ ನೌಕರರು ಹಾಗೂ ವಾಣಿಜ್ಯ ತೆರಿಗೆ ಇಲಾಖಾ ನೌಕರರು ಸೇರಿ ಇನ್ನೂರಕ್ಕೂ ಹೆಚ್ಚಿನ ಸರ್ಕಾರಿ ನೌಕರರು ಭಾಗವಹಿಸಿದ್ದರು. ಶಾಸಕರ ಭವನದಲ್ಲಿ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮೌರಿಸ್ ಮಸ್ಕರೇನಸ್ ನೌಕರರನ್ನು ಸ್ವಾಗತಿಸಿ ಬೇಡಿಕೆ ಈಡೇರಿಕೆ ಬಗ್ಗೆ ಒತ್ತಾಯಿಸಿದರು.

LEAVE A REPLY

Please enter your comment!
Please enter your name here