ಪೆರ್ನೆ : ತಿಪ್ಪಕೋಡಿಯಲ್ಲಿ 27ನೇ ವರುಷದ “ಶ್ರೀದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ

0

ಪುತ್ತೂರು: ಬಂಟ್ವಾಳ ತಾಲೂಕಿನ ,ಪೆರ್ನೆ – ಬಿಳಿಯೂರು ಗ್ರಾಮದ ತಿಪ್ಪಕೋಡಿ ಬಾಲಕೃಷ್ಣ ಮಹಾಬಲ ರೈ ಇವರ ಮನೆಯಂಗಳದಲ್ಲಿ ಜ. 22 ರಂದು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ , ಕಟೀಲು ಮೇಳದಿಂದ 27 ನೆಯ ವರುಷದ ” ಶ್ರೀದೇವಿ ಮಹಾತ್ಮೆ” ಯಕ್ಷಗಾನ ಕಥಾಭಾಗವು ಬಯಲಾಟವಾಗಿ ನಡೆಯಿತು.

ಅಪರಾಹ್ನ 3.30 ರಿಂದ ಶ್ರೀ ಉಮಾಮಹೇಶ್ವರ ಭಜನಾ ಮಂದಿರ, ಉದಯಗಿರಿ ಹಿರೇಬಂಡಾಡಿ ತಂಡದಿಂದ ಕುಣಿತ ಭಜನೆ ನಡೆದು ಆ ಬಳಿಕ , ಶ್ರೀ ದೇವಿಗೆ ಮಹಾಪೂಜೆಯು ವಿಜೃಂಭಣೆಯಿಂದ ನಡೆಯಿತು. ಈ ವೇಳೆ ಹಲವರು ಅತಿಥಿಗಳ ಸಹಿತ , ಯಜಮಾನ ಬಾಲಕೃಷ್ಣ ಮಹಾಬಲ ರೈ ಕುಟುಂಬ ವರ್ಗ ಮತ್ತು ಸಾರ್ವಜನಿಕರು ಶ್ರೀ ದೇವರ ಕೃಪೆಗೆ ಪಾತ್ರರಾಗಿ , ಗಂಧ ಪ್ರಸಾದ ಸ್ವೀಕರಿಸಿದರು. ತದನಂತರ ಅನ್ನಸಂತರ್ಪಣೆಯೂ ನಡೆದು , ಪುಷ್ಪ ಹಾಗೂ ದೀಪಾಲಂಕೃತವಾದ ಭವ್ಯ ವೇದಿಕೆಯಲ್ಲಿ ಶ್ರೀ ದೇವಿ ಮಹಾತ್ಮೆ ಕಥಾ ಪ್ರಸಂಗ ನಡೆಯಿತು. ತಿಪ್ಪಕೋಡಿ ಬಾಲಕೃಷ್ಣ ಮಹಾಬಲ ರೈ ದಂಪತಿ ಸ್ವಾಗತಿಸಿ ,ವಂದಿಸಿದರು.

LEAVE A REPLY

Please enter your comment!
Please enter your name here