ಪುತ್ತೂರು ವಕೀಲರ ಸಂಘದ 1961 ಇಸವಿಯ ಭಾವಚಿತ್ರ ಅನಾವರಣ

0

ಪುತ್ತೂರು: 1961 ಇಸವಿ ಫೆಬ್ರವರಿ ಎರಡರಂದು, ಮೈಸೂರಿನಿಂದ ಮಂಗಳೂರಿಗೆ ಹೋಗುವ ದಾರಿ ಮಧ್ಯೆ, ಪುತ್ತೂರು ವಕೀಲರ ಸಂಘಕ್ಕೆ, ಅಂದಿನ ಮೈಸೂರು ಪ್ರಾಂತ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ, ಜಸ್ಟಿಸ್ ಎಸ್ ಆರ್ ಗುಪ್ತಾರವರು ಭೇಟಿ ನೀಡಿದ ಅವಿಸ್ಮರಣೀಯ ಸಂದರ್ಭದ ಭಾವಚಿತ್ರವನ್ನು ಹಿರಿಯ ನ್ಯಾಯವಾದಿ ಎಂ ಗೋಪಾಲಕೃಷ್ಣ ಭಟ್ ರವರು ಸಂರಕ್ಷಿಸಿ, ಪುತ್ತೂರು ವಕೀಲರ ಸಂಘಕ್ಕೆ ಕೊಡುಗೆಯಾಗಿ ನೀಡಿದ್ದನ್ನು, ಪುತ್ತೂರು ಕೋರ್ಟ್ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ, ಪುತ್ತೂರು ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್ ಪಿ ಗೌಡ ರವರು ಪುತ್ತೂರಿನ ಹಿರಿಯ ನ್ಯಾಯಾವಾದಿಗಳಾದ ರಾಮ್ ಮೋಹನ್ ರಾವ್ ರವರಿಗೆ ಹಸ್ತಾಂತರಿಸಿ ಅನಾವರಣಗೊಳಿಸಿದರು. (ಈ ಚಿತ್ರದಲ್ಲಿ ನ್ಯಾಯವಾದಿಗಳಾದ ರಾಮ್ ಮೋಹನ್ ರಾವ್, ದಿವಂಗತ ಬಿ.ಟಿ.ರೈ ಸೀತಾರಾಮ ರೈ , ಬಿ ಎಲ್ ಎನ್ ರೈ ಮೊದಲಾದವರನ್ನು ಕಾಣಬಹುದು.)

ಈ ಸಂದರ್ಭದಲ್ಲಿ ಪುತ್ತೂರಿನ ನ್ಯಾಯಾದೀಶರುಗಳಾದ ಪ್ರಿಯಾ ಆರ್, ಅರ್ಚನಾ ಉಣ್ಣಿತಾನ್, ಶಿವಣ್ಣ ಯೋಗೇಂದ್ರ ಶೆಟ್ಟಿ, ನ್ಯಾಯವಾದಿಗಳಾದ ಜಗನ್ನಿವಾಸ್ ರಾವ್, ಶ್ರೀಕಾಂತ್ ಕೊಳತ್ತಾಯ, ಶಿವಪ್ರಸಾದ್, ನೂರುದ್ದೀನ್ ಸಾಲ್ಮರ, ನಾಗರಾಜ್ ಯು ಎಸ್, ಜಗನ್ನಾಥ್ ರೈ, ಪದ್ದಂಬೈಲು ಸುರೇಶ್ ರೈ ಮಾಧವ ಪೂಜಾರಿ, ಮೊಹಮ್ಮದ್ ಸಿದ್ದೀಕ್, ಸೀಮಾ ನಾಗರಾಜ್ ಸ್ವಾತಿ ಜೆ ರೈ, ಸರಕಾರಿ ಸಹಾಯಕ ಅಭಿಯೋಜಕರಾದ ಕವಿತಾ, ಪ್ರೀತಿ, ಮತ್ತು ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here