ನ.24ರಿಂದ ನ. 26 ರವರೆಗೆ ವಿವಿಧ ಕಾರ್ಯಕ್ರಮಗಳು
ಪುತ್ತೂರು : ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ನ.24ರಿಂದ ನ.26ರವರೆಗೆ ನಡೆಯಲಿರುವ ಚಂಪಾ ಷಷ್ಠಿ ಮಹೋತ್ಸವ ಮತ್ತು ಜಾತ್ರೋತ್ಸವದ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯು ರವಿವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಚಂಪಾ ಷಷ್ಠೀ ಮಹೋತ್ಸವ ಮತ್ತು ಜಾತ್ರೋತ್ಸವ ಕಾರ್ಯಕ್ರಮಕ್ಕೆ ಕೈಗೊಳ್ಳಬೇಕಾದ ಸಿದ್ಧತೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಷಷ್ಠಿ ವೃತದವರಿಗೆ ವ್ಯವಸ್ಥೆ, ಭಜನೆ, ಯಕ್ಷಗಾನ, ನಾಟಕ,ಅನ್ನಸಂತರ್ಪಣೆ,ಹಸಿರು ಹೊರೆ ಕಾಣಿಕೆ ಸಮರ್ಪಣೆ ವಿಭಾಗದ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಯಿತು.
ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ಮಾತನಾಡಿ, ದೇವಸ್ಥಾನದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ತುಂಬಾ ಸಹಕಾರ ನೀಡುತ್ತಿದ್ದಾರೆ.ಜಾತ್ರೋತ್ಸವ ಹಾಗೂ ಷಷ್ಠೀ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಕೈ ಜೋಡಿಸಬೇಕು.ಉತ್ಸವ ,ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆಗಳೊಂದಿಗೆ ಜಾತ್ರೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಪ್ರವೀಣ್ ಶಂಕರ, ಮೊಕ್ತೇಸರಾದ ಮೋಹನದಾಸ ರೈ ನಳೀಲು, ಪ್ರವೀಣ್ ಕುಮಾರ್ ರೈ ನಳೀಲು, ಅರುಣ್ ಕುಮಾರ್ ರೈ ನಳೀಲು, ಸತೀಶ್ ರೈ ನಳೀಲು, ಪ್ರಧಾನ ಕಾರ್ಯದರ್ಶಿ ಸುರೇಶ್ಚಂದ್ರ ರೈ ಪಾಲ್ತಾಡಿ,ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ರೈ ನಡುಕೂಟೇಲು ,ಸಮಿತಿಯ ಕೋಶಾಧಿಕಾರಿ ಸುಧಾಕರ ರೈ ಪಾಲ್ತಾಡಿ, ಜಾತ್ರೋತ್ಸವ ಸಮಿತಿ ಕಾರ್ಯದರ್ಶಿ ಪ್ರವೀಣ್ ಕುಮಾರ್,ವಿನೋದ್ ಕುಮಾರ್ ಕೆ.ಎಸ್.,ವಸಂತ ರೈ ಮಾಡಾವು, ಜಗನ್ನಾಥ ರೈ ಮಣಿಕ್ಕರ, ಕಿರಣ್ ಕುಂಡಡ್ಕ, ಪದ್ಮಪ್ರಸಾದ್ ರೈ ಕಲಾಯಿ,ದೇವಿಪ್ರಸಾದ್ ಕೆ.,ಮಧು ಕುಮಾರ್, ಗಣೇಶ್ ಕೆ.ವಿ.ಕೊಲ್ಯ,ಕಿಟ್ಟಣ್ಣ ರೈ ನಡುಕೂಟೇಲು,ಧನಂಜಯ ಕಾಯರಗುರಿ,ತಾರಾನಾಥ ಬೊಳಿಯಾಲ, ರಾಮಚಂದ್ರ ಕಲ್ಲಕಟ್ಟ,ರಾಮಣ್ಣ ರೈ ಬಾಕಿಜಾಲು,ಜಯಂತ ಕುಂಡಡ್ಕ, ರಾಮಣ್ಣ ನಾಯ್ಕ ಕಾಪುತಮೂಲೆ, ಭಾಸ್ಕರ ಕುಂಡಡ್ಕ, ರವಿ ಚೆನ್ನಾವರ, ಉಮೇಶ್ ಮರುವೇಲು,ಗಣೇಶ್ ಅಮೆಚ್ಚೋಡು,ಪ್ರಶಾಂತ್ ಆಚಾರ್ಯ ನಳೀಲು, ಪುರಂದರ ಕಾಪುತಮೂಲೆ, ಸೃಜನ್ ಆಚಾರ್ಯ, ಗೋಪಾಲ ಆಚಾರ್ಯ, ತಾರಾನಾಥ ಕಲ್ಲಕಟ್ಟ,ಬಿ.ಸದಾಶಿವ ರೈ,ವಿನಯಚಂದ್ರ ಕೆಳಗಿನಮನೆ,ಪುನೀತ್ ಕುಮಾರ್ ಕೆ.,ವ್ಯಾಸರಾಯ ಆಚಾರ್,ಪುಷ್ಪಾವತಿ ಮಯ್ಯರಮೂಲೆ ,ಚಂದ್ರಾವತಿ ಪಾಲ್ತಾಡಿ ಮೊದಲಾದವರಿದ್ದರು.
ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ರೈ ನಡುಕೂಟೇಲು ಸ್ವಾಗತಿಸಿದರು. ಉಪಾಧ್ಯಕ್ಷ ಸುಬ್ರಾಯ ಗೌಡ ಪಾಲ್ತಾಡಿ ವಂದಿಸಿದರು.