ಜ.28: ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ ಇದರ 30ನೆಯ ವಾರ್ಷಿಕೋತ್ಸವ ಸಮಾರಂಭ “ತ್ರಿಂಶತಿ ಸಂಭ್ರಮ”

0

ಪುತ್ತೂರು: ಪುತ್ತೂರು ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ ಇದರ 30ನೆಯ ವಾರ್ಷಿಕೋತ್ಸವ ಸಮಾರಂಭ “ತ್ರಿಂಶತಿ ಸಂಭ್ರಮ”ವು ಜ. 28 ಪುತ್ತೂರಿನ ಕಿಲ್ಲೆ ಮೈದಾನದ ಪುರಭವನದಲ್ಲಿ ನಡೆಯಲಿದೆ.

ಬೆಳಗ್ಗೆ 9 ಗಂಟೆಯಿಂದ ಸಂಸ್ಥೆಯ ವಿದ್ಯಾರ್ಥಿಗಳು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ನೀಡಲಿದ್ದಾರೆ. ಇವರಿಗೆ ಸಂಸ್ಥೆಯಲ್ಲಿ ವ್ಯಾಸಂಗವನ್ನು ಮಾಡುತ್ತಿರುವ ವಿದ್ಯಾರ್ಥಿಗಳು ಮೃದಂಗ ಹಾಗೂ ಪಿಟೀಲು ಪಕ್ಕವಾದ್ಯ ದಲ್ಲಿ ಸಹಕರಿಸಲಿದ್ದಾರೆ.
ಮಧ್ಯಾಹ್ನ 3.30ರಿಂದ 4.30ರ ತನಕ ವಿದ್ಯಾರ್ಥಿಗಳು ಕೊಳಲು ಕಾರ್ಯಕ್ರಮ ನೀಡಲಿದ್ದಾರೆ. ಸಾಯಂಕಾಲ 5ಗಂಟೆಗೆ ಸರಿಯಾಗಿ ಸಭಾಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷರಾಗಿ ವಿದುಷಿ ನಯನ ವಿ ರೈ, ಸಾಹಿತಿ ಮಧುರಕಾನನ ಗಣಪತಿ ಭಟ್ ‌ ಮುಖ್ಯ ಅತಿಥಿ ಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ.


ಈ ಕಾರ್ಯಕ್ರಮದಲ್ಲಿ ಭರತನಾಟ್ಯದಲ್ಲಿ ಸಾಧನೆ ಮಾಡಿದ ಸಂಸ್ಥೆಯ ವಿದ್ಯಾರ್ಥಿಗಳಾದ ವಿದುಷಿಯರಾದ ಅನುಶ್ರೀ, ಜೀವಿತಾ,ವೈಷ್ಣವಿ,ಡಿಂಪಲ್‌ ಎನ್‌ ಎಸ್‌, ಚೈತ್ರಾ ಪ್ರಜ್ವಲ್‌ ಶೆಟ್ಟಿ, ಅಕ್ಷತಾ ಶ್ರೀವತ್ಸ, ಪೂರ್ಣಿಮಾ ಇವರಿಗೆ “ಶಾರದಾ ಕಲಾಶ್ರೀ” ಬಿರುದನ್ನು ನೀಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ. ಭರತನಾಟ್ಯ ಪ್ರದರ್ಶನದಲ್ಲಿ “ವಿನಾಯಕ ಚರಿತೆ” ಎಂಬ ನೃತ್ಯ ರೂಪವನ್ನು ಪ್ರದರ್ಶಿಸಲಾಗುವುದು ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ವಿದ್ವಾನ್ ಶ್ರೀ ಸುದರ್ಶನ್ ಎಂ ಎಲ್ ಭಟ್‌ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here