ನಾರಾಯಣ ಗುರುಗಳು ಸಮಾಜ ಸುಧಾರಕ, ಜಗದೋದ್ಧಾರಕರು-ಅಶೋಕ್ ರೈ
ಪುತ್ತೂರು: ಸಮಾಜದಲ್ಲಿ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶವನ್ನು ಸಾರಿ ಜಗತ್ತಿನಲ್ಲಿ ಸಮಾನತೆಯನ್ನು ಪ್ರತಿಪಾದಿಸಿದ ಸಂತರಾಗಿದ್ದಾರೆ ನಾರಾಯಣ ಗುರುಗಳು. ನಾರಾಯಣ ಗುರುಗಳೋರ್ವ ಮಹಾನ್ ತತ್ವಜ್ಞಾನಿ, ಯೋಗಿ, ಸಮಾಜ ಸುಧಾರಕ ಜೊತೆಗೆ ಜಗದೋದ್ಧಾರಕರಾಗಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈರವರು ಹೇಳಿದರು.

ಸೆ.7 ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ವತಿಯಿಂದ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 171ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಾನವ ಜನಾಂಗಕ್ಕೆ ಸಮರ್ಪಕ ಶಿಕ್ಷಣ, ಧರ್ಮ, ಅಧ್ಯಾತ್ಮ, ಶಾಂತಿ ಕೊಡುವ ದಾರಿ, ಅಹಿಂಸೆಯತ್ತ ಶಾಂತಿಗೆ ನಾರಾಯಣ ಗುರುಗಳು ದಾರಿದೀಪವಾಗಿದ್ದಾರೆ. ನಾರಾಯಣ ಗುರುಗಳ ತತ್ವ ಸಿದ್ಧಾಂತವಾದ ಸಮಾನತೆಯೇ ಇಂದು ಸಮಾಜ ಈ ಮಟ್ಟಕ್ಕೆ ತಲುಪಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿರವರು ತಂದಂತಹ ಉಳುವವನೇ ಒಡೆಯ ಕಾನೂನು ಜೊತೆಗೆ ಇಂದಿನ 94ಸಿ, ಅಕ್ರಮ ಸಕ್ರಮ ಕೂಡ ನಾರಾಯಣ ಗುರುಗಳ ಸಮಾನತೆಯ ಒಂದು ಹಾದಿಯಾಗಿದ್ದು ನಾರಾಯಣ ಗುರುಗಳು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ನಾವೆಲ್ಲ ಹೆಜ್ಜೆಯಿಡೋಣ ಎಂದರು.

ಯುವಪೀಳಿಗೆ ನಾರಾಯಣ ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಲಿ-ಗೋಪಾಲಕೃಷ್ಣ ನೆಕ್ಕಿತ್ತಪುಣಿ:
ಬೆಂಗಳೂರು ಬಿಲ್ಲವರ ಅಸೋಸಿಯೇಷನ್ ಗೌರವಾಧ್ಯಕ್ಷ ಗೋಪಾಲಕೃಷ್ಣ ನೆಕ್ಕಿತ್ತಪುಣಿರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸಿ ದೇವಸ್ಥಾನ ನಿರ್ಮಿಸಿ ಬಿಲ್ಲವ ಸಮುದಾಯದ ಜನರಿಗೆ ದೇವಸ್ಥಾನದ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ದಾರ್ಶನಿಕರಾಗಿದ್ದಾರೆ ನಾರಾಯಣ ಗುರುಗಳು. ಕೇವಲ 34 ವರ್ಷದ ಅಂದಿನ ಯುವಕ ಅಸ್ಪರ್ಶ್ಯತೆ, ದೌರ್ಜನ್ಯದ ವಿರುದ್ಧವಾಗಿ ಹೋರಾಟ ಮಾಡಿದವರು. ಆದರೆ ಇಂದಿನ ಯುವಪೀಳಿಗೆ ಏನು ಮಾಡ್ತಿದ್ದಾರೆ, ಎಲ್ಲಿಗೆ ಹೋಗಿದ್ದಾರೆ.? ಬಿಲ್ಲವ ಸಮಾಜ ಪುರಾತನದಿಂದಲೂ ಸ್ವಾಮಿ ನಿಷ್ಠೆಯಲ್ಲಿ ಹೆಸರು ಪಡೆದಿರುವುದಕ್ಕೆ ಕೋಟಿ ಚೆನ್ನಯ, ಕಾಂತಾಬಾರೆ ಬುದಾಬಾರೆ ಪ್ರಮುಖ ಉದಾಹರಣೆಯಾಗಿದ್ದಾರೆ ಎಂದ ಅವರು ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಶೇ.30 ರಷ್ಟು ಬಿಲ್ಲವ ಯುವಕರು ಕೇಸ್‌ನಲ್ಲಿ ಸಿಲುಕಿಕೊಂಡು ಜೈಲುವಾಸ ಅನುಭವಿಸುವುದು ಖೇದಕರವಾಗಿದೆ. ಬಿಲ್ಲವ ಸಮುದಾಯದ ಯುವಪೀಳಿಗೆ ನಾರಾಯಣ ಗುರುಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಸಮಾಜದಲ್ಲಿ ಉತ್ತಮ ಜೀವನ ನಡೆಸುವವರಾಗಿ ಎಂದರು.

ನಾರಾಯಣ ಗುರುಗಳ ಉಪದೇಶಗಳು ಇಂದಿಗೂ ಜೀವಂತಿಕೆ ಹೊಂದಿದೆ-ರುಕ್ಮಯ ಪೂಜಾರಿ:
ಬಂಟ್ವಾಳ ಮಾಜಿ ಶಾಸಕ ರುಕ್ಮಯ ಪೂಜಾರಿ ಮಾತನಾಡಿ, ನಮ್ಮ ದೇಶದಲ್ಲಿ ಬೇರೆಬೇರೆ ಸಂತರು ಬಂದು ಹೋಗಿದ್ದಾರೆ ಆದರೆ ಇಡೀ ಮಾನವ ಸಮಾಜದಲ್ಲಿ ಒಳ್ಳೆಯ ರೀತಿಯ ಸಂದೇಶ ನೀಡಿದವರು ಸಂತರಾದ ನಾರಾಯಣ ಗುರುಗಳು. ಸಮಾಜದಲ್ಲಿ ಹೋರಾಟ ಮಾಡಿ ಯಾರು ಶೋಷಣೆಗೆ ಒಳಗಾಗಿದ್ದಾರೋ ಅವರಿಗೆ ಸ್ವಾಭಿಮಾನದ ಬದುಕು ಕಲ್ಪಿಸಿದವರು ಜೊತೆಗೆ ಇತರ ಸಮಾಜದೊಂದಿಗೆ ಬೆರೆಯುವ ಸ್ಫೂರ್ತಿಯನ್ನು ತುಂಬಿಸಿದವರು ನಾರಾಯಣ ಗುರುಗಳು. ನಾರಾಯಣ ಗುರುಗಳು ಸಂಸ್ಕಾರಭರಿತ ಶಿಕ್ಷಣದೊಂದಿಗೆ ಸಂಘಟನೆಯನ್ನು ಬೆಳೆಸುವುದು, ಅವರ ಆದರ್ಶ ಜೀವನ, ಸಾಧಿಸಿದ ಸಾಧನೆ, ಅವರು ಸಾರಿರುವ ಉಪದೇಶಗಳು ಇಂದಿಗೂ ಜೀವಂತಿಕೆಯನ್ನು ಹೊಂದಿದೆ ಎಂದರು.

ಐಎಎಸ್, ಐಪಿಎಸ್ ಹುದ್ದೆಯತ್ತ ಸಮಾಜ ಬಾಂಧವರು ಚಿತ್ತ ಹರಿಸಿ-ತಾರಾನಾಥ್ ಸಾಲಿಯಾನ್:
ಬಂಟ್ವಾಳ ಪಂಚಾಯತ್‌ರಾಜ್ ಇಂಜಿನಿಯರ್ ವಿಬಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರನಾಥ ಸಾಲಿಯಾನ್ ಪಿ, ಮಾತನಾಡಿ, ಮನುಷ್ಯ ಸಾರ್ಥಕತೆ ಪಡೆಯಬೇಕಾದರೆ ಸಂಸ್ಕಾರಯುತ ಶಿಕ್ಷಣ ಪಡೆಯಬೇಕು, ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಾರಾಯಣ ಗುರುಗಳು ಬೋಧಿಸಿದ ತತ್ವ ಸಿದ್ಧಾಂತಗಳಿಗೆ ಅರ್ಥ ಬರುತ್ತದೆ. ವಿದ್ಯಾರ್ಥಿಗಳ ಸಾಧನೆ ಇಲ್ಲಿಗೆ ನಿಲ್ಲಿಸದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮುಂದುವರೆಸಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವವರಾಗಿ. ಬಿಲ್ಲವ ಸಮಾಜ ಬಾಂಧವರು ಸಮಾಜದ ಉನ್ನತ ಹುದ್ದೆಯಾಗಿರುವ ಐಎಎಸ್, ಐಪಿಎಸ್ ಆಗುವತ್ತ ಚಿತ್ತ ಹರಿಸಿ, ನಾರಾಯಣ ಗುರುಗಳ ಆಶೀರ್ವಾದ ಸದಾ ಇರುತ್ತದೆ ಎಂದರು.

ಗುರುಗಳ ಆಶಯದಂತೆ ವಿದ್ಯಾರ್ಥಿಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವತಂತ್ರರಾಗಬೇಕು-ಸತೀಶ್ ಕೆಡೆಂಜಿ:
ಅಧ್ಯಕ್ಷತೆ ವಹಿಸಿದ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಸಮಾಜದಲ್ಲಿನ ಬೇರೆಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗುರುಜಯಂತಿ ದಿನದಂದು ಸನ್ಮಾನಿಸಿರುವುದು ಹೆಮ್ಮೆ ತಂದಿದೆ. ನಾರಾಯಣ ಗುರುಗಳ ಆಶಯದಂತೆ ವಿದ್ಯಾರ್ಥಿಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವತಂತ್ರರಾಗಬೇಕು. ಸಮಾಜದ ಕಟ್ಟಕಡೆಯ ವಿದ್ಯಾರ್ಥಿ ಕೂಡ ವಿದ್ಯಾರ್ಜನೆಯಿಂದ ವಂಚಿತರಾಗಬಾರದು ಎನ್ನುವ ಉದ್ಣೇಶದಂತೆ ಸುಮಾರು ೨೫೦ ಫಲಾನುಭವಿಗಳಿಗೆ ವಿದ್ಯಾರ್ಥಿ ವೇತನವನ್ನು ದಾನಿಗಳ ಸಹಕಾರದಿಂದ ವಿತರಿಸುತ್ತಿದ್ದೇವೆ. ಭವ್ಯ ಭಾರತ ನಿರ್ಮಾಣದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳು ವಿದ್ಯೆಯನ್ನು ಚೆನ್ನಾಗಿ ಆಭ್ಯಸಿಸುವವರಾಗಿ ಎಂದರು.

ಶೈಕ್ಷಣಿಕ ಟಾಪರ್ಸ್‌ಗಳಿಗೆ ಅಭಿನಂದನೆ:
ವಿವಿಧ ಶೈಕ್ಷಣಿಕ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ವಿದ್ಯಾರ್ಥಿಗಳಾದ ಆದಿತ್ಯ ಡಿ.ಎ ಪೆರಾಬೆ, ದಿಶಾ ಪಿ ಹಿರೇಬಂಡಾಡಿ(ಎಸೆಸ್ಸೆಲ್ಸಿ) ಹಿಮಾನಿ ಎ.ಸಿ ಬಪ್ಪಳಿಗೆ, ಆತ್ಮಿ ಕೆ ಬೆಳ್ಳಿಪ್ಪಾಡಿ(ಪಿಯುಸಿ), ಮೈತ್ರಿ ಎಂ ಒಳಮೊಗ್ರು(ಬಿಸಿಎ), ದೀಪ್ತಿ ಆರ್ಯಾಪು(ಬಿಇ), ವರ್ಷಾ ಕೆ ಬಲ್ನಾಡು(ಎಂಸಿಎ), ಚೈತನ್ಯ ಆಲಂಕಾರು(ಬಿಎ), ಚೈತನ್ಯ ಶಾಂತಿಗೋಡು(ಬಿಸಿಎ), ನಿಶ್ಮಿತಾ ಎಸ್.ಆರ್ ಸರ್ವೇದೋಳ(ಬಿಸಿಎ), ನವ್ಯ ಕೆ.ಪೂಜಾರಿ ಬೆಟ್ಟಂಪಾಡಿ(ಬಿಎಸ್ಸಿ), ದೀಕ್ಷಾ ಸುವರ್ಣ ಪಿ ಬೆಟ್ಟಂಪಾಡಿ(ಬಿಎಡ್), ಅಧೀಕ್ಷಾ ಎಚ್.ಕೆ ಕೆದಂಬಾಡಿ(ಬಿಸಿಎ), ಸಮೀಕ್ಷಾ ಆಲಂಕಾರು(ಬಿಕಾಂ), ಪ್ರತೀಕ್ಷಾ ಕೆ.ಹಿರೇಬಂಡಾಡಿ(ಬಿಬಿಎ), ಹರ್ಷಿತಾ ಪಿ ಹಿರೇಬಂಡಾಡಿ(ಬಿಕಾಂ), ಮೋಕ್ಷಾ ಎನ್ ಹಿರೇಬಂಡಾಡಿ( ಬಿಎ), ಅಕ್ಷಿತಾ ಎ.ಎಸ್ ಬೆಳಂದೂರು(ಬಿಎಸ್ಸಿ), ಶಾರ್ವರಿ ಬಿ ಪುತ್ತೂರು(ಬಿಕಾಂ), ಮೈತ್ರಿ ಎಂ ಒಳಮೊಗ್ರು(ಬಿಸಿಎ), ಹರ್ಷಿತಾ ಕೆ ಈಶ್ವರಮಂಗಲ(ಬಿಕಾಂ), ಆಶಿತಾ ಹಿರೇಬಂಡಾಡಿ (ಬಿಕಾಂ), ಶ್ರಾವ್ಯ ಕೋಡಿಂಬಾಡಿ(ಬಿಕಾಂ), ಪ್ರಮೋಕ್ಷ ಎನ್ ಗೋಳಿತೊಟ್ಟು(ಬಿಎಸ್ಸಿ)ರವರುಗಳನ್ನು ಅಭಿನಂದಿಸಲಾಯಿತು.

ಪ್ರತಿಭಾ ಪುರಸ್ಕಾರ:
ಶೈಕ್ಷಣಿಕ ಕ್ಷೇತ್ರದಲ್ಲಿ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ಗ್ರೀಷ್ಮ ಎಸ್ ಮುಂಡೂರು, ರೋಶನ್ ಎಸ್.ಕೆ ಪಡ್ನೂರು, ವೈಭವ್ ಪೂಜಾರಿ ಬನ್ನೂರು, ಶರಣ್ಯ ಬೆಟ್ಟಂಪಾಡಿ, ದಕ್ಷಾ ಬೆಳ್ಳಿಪ್ಪಾಡಿ, ಅಸ್ಮಿತಾ ಎಸ್ ಅರಿಯಡ್ಕ, ಈಕ್ಷ ಟಿ ಚಿಕ್ಕಮುಡ್ನೂರು, ಪುಣ್ಯ ಅರಿಯಡ್ಕ, ವಿಧಿಶ ಪಡ್ನೂರು, ದೀಪಕ್ ರಾಜ್ ನಿಡ್ಪಳ್ಳಿ, ಪಿಯುಸಿ ವಿಭಾಗದಲ್ಲಿ ಮನ್ವಿತ್ ಎಸ್ ಆರ್ಯಾಪು, ಚೈತನ್ಯ ಚಿಕ್ಕಮುಡ್ನೂರು, ಜೋಶಿತ ಪುತ್ತೂರು, ಧೃತಿ ಪ್ರದೀಪ್ ಪೂಜಾರಿ ಶಾಂತಿಗೋಡು, ಅಂಶಿಕಾ ಕೋಡಿಂಬಾಡಿ, ಪವನ ಜೆ.ಪಿ ಗೋಳಿತ್ತೊಟ್ಟು, ಪ್ರತೀಕ್ಷಾ ಎಸ್ ನೆಹರುನಗರ, ಆಪ್ತ ಎ.ಆರ್ ಕೆಮ್ಮಿಂಜೆ, ದೀಕ್ಷಾ ನರಿಮೊಗರು, ನಿಸರ್ಗ ಆಲಂಕಾರು, ಸಾಹಿಲ್ ಎನ್.ಕೆ ಆಲಂಕಾರು, ಶ್ರೇಷ್ಠ ಡಿ ಉರ್ಲಾಂಡಿ, ಇಂಚರ ಕೆ.ಎಸ್ ನಿಡ್ಪಳ್ಳಿ, ಹರ್ಷಿತಾ ಹಳೆನೇರಂಕಿ, ಸಂಧ್ಯಾ ಆಲಂಕಾರು, ಪ್ರಜ್ವಲ್ ಕುಮಾರ್ ಬಲ್ನಾಡು, ವರ್ಷಾ ಪಿ.ವಿ ಕಾಮಣ, ಪ್ರೇಕ್ಷಾ ಉಪ್ಪಿನಂಗಡಿ, ನಿಧಿ ಬಂಗೇರ ನೆಕ್ಕಿಲಾಡಿ, ತ್ರಿಶಾ ಬನ್ನೂರು, ಲಿಖಿತಾ ನೆಕ್ಕಿಲಾಡಿ, ಸ್ನಾತಕೋತ್ತರ ಪದವಿಯಲ್ಲಿ ವರ್ಷಾ ಕೆ ಬಲ್ನಾಡು, ಕಾವ್ಯ ಕೋಡಿಂಬಾಡಿ, ತಾಂತ್ರಿಕ ಪದವಿ ವಿಭಾಗದಲ್ಲಿ ದೀಪ್ತಿ ಆರ್ಯಾಪು, ದಿಶಾ ಪಿ.ಜಿ ಪಡ್ನೂರು, ರೇಣುಕಾ ಎಂ ಕುರಿಯ, ಕಿಶನ್ ಎಸ್.ಎ ಕುಟ್ರುಪ್ಪಾಡಿ, ರಕ್ಷಿತ್ ಸಾಲ್ಯಾನ್ ರೆಂಜಿಲಾಡಿ, ಮೇಘ ಎಂ ಕುರಿಯ, ರಕ್ಷಾ ಕೋಡಿಂಬಾಡಿರವರುಗಳನ್ನು ಅಭಿನಂದಿಸಲಾಯಿತು.

ಕ್ರೀಡಾ ಪ್ರತಿಭೆಗಳಿಗೆ ಗೌರವ:
ವಿವಿಧ ಕ್ರೀಡಾ ವಿಭಾಗಗಳಲ್ಲಿ ಸಾಧನೆಗೈದ ಸಮಾಜ ಬಾಂಧವರ ಕ್ರೀಡಾ ಪ್ರತಿಭೆಗಳಾದ ಶಾರ್ವಿ, ಅಶ್ವಿತಾ ಎ, ಭವಿನ್ ಆರ್, ಅನಿತಾ, ಪ್ರಜ್ಞಾ ಕೆ, ನಮೃತಾ, ಶೃತಿ ಕೆ, ಮಿಲನ್, ಸಾನ್ವಿ ಡಿ, ವಿಶಾಲ್ ಕೆ.ಆರ್, ಅಮೃತಾ ಜೆ, ವಿಸ್ಮಿತಾ ಡಿ, ಎಂ.ಎಸ್ ಚೈತನ್ಯ, ಸನ್ಮಿತ್ ಆರ್.ಸಿ, ಕಾರ್ತಿಕ್, ಭವಿತ್ ಕುಮಾರ್‌ರವರುಗಳನ್ನು ಗೌರವಿಸಲಾಯಿತು.
ಹಾಲಿ/ನಿಕಟಪೂರ್ವ ಪದಾಧಿಕಾರಿಗಳಿಗೆ ಅಭಿನಂದನೆ:
2025-28ನೇ ಸಾಲಿನ ಬಿಲ್ಲವ ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಉಪಾಧ್ಯಕ್ಷರಾದ ಚಿದಾನಂದ ಸುವರ್ಣ ಹಾಗೂ ಪುಷ್ಪಾವತಿ ಕೇಕುಡೆ, ಕಾರ್ಯದರ್ಶಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಜೊತೆ ಕಾರ್ಯದರ್ಶಿ ಪುರುಷೋತ್ತಮ ಬರೆಂಬೆಟ್ಟು, ಕೋಶಾಧಿಕಾರಿ ಜನಾರ್ದನ ಪೂಜಾರಿ ಪದಡ್ಕ, ನಿಕಟಪೂರ್ವ ಪದಾಧಿಕಾರಿಗಳಾದ ಅಶೋಕ್ ಕುಮಾರ್ ಪಡ್ಪು, ವಿಮಲಾ ಸುರೇಶ್, ದಯಾನಂದ ಕರ್ಕೇರಾ ಮಡ್ಯೊಟ್ಟು, ಉದಯಕುಮಾರ್ ಕೋಲಾಡಿರವರುಗಳನ್ನು ಅಭಿನಂದಿಸಲಾಯಿತು.
ಮಾಜಿ ಅಧ್ಯಕ್ಷರುಗಳಿಗೆ ಅಭಿನಂದನೆ:
ಪುತ್ತೂರು ಬಿಲ್ಲವ ಸಂಘವನ್ನು ಮುನ್ನೆಡೆಸಿದ ಮಾಜಿ ಅಧ್ಯಕ್ಷರುಗಳಾದ ವಿಜಯಕುಮಾರ್ ಸೊರಕೆ, ಕೆ.ಪಿ ದಿವಾಕರ್, ಜಯಂತ್ ನಡುಬೈಲುರವರುಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಅಭಿನಂದನಾ ಸನ್ಮಾನ:
ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ವೆದ್ರಾಳ, ಪಾಲಿಂಜೆ ಅಮ್ಮುಂಜ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ಸುಬ್ರಹ್ಮಣ್ಯ ಮಹತೋಭಾರ ಕುಕ್ಕೆಶ್ರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಜಿತ್ ಕುಮಾರ್ ಪಾಲೇರಿ, ಮಹಾನ್ ರಕ್ತದಾನಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ರಾಜ್ಯ ಮಟ್ಟದ ಅತ್ತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಸರಿತಾ ಜನಾರ್ದನ, ರಂಗಭೂಮಿ ಕಲಾವಿದ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವ ಮಚ್ಚಿಮಲೆ, ಆಗಸ್ಟ್ ತಿಂಗಳಲ್ಲಿ ನಡೆದ ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾದ ಕೃಷ್ಣಪ್ಪ ಪೂಜಾರಿ, ಕಡಬ ತಾಲೂಕು ಕೆಡಿಪಿ ಸದಸ್ಯರಾಗಿ ಆಯ್ಕೆಯಾದ ಗಿರೀಶ್ ಸಾಲ್ಯಾನ್ ಬದನೆ, ವಿದ್ಯಾನಿಧಿ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ ಮನೋಹರ್ ಎ(2021-23). ಡಾ.ಸದಾನಂದ ಕುಂದರ್(2023-25), ಉಲ್ಲಾಸ್ ಕೋಟ್ಯಾನ್ (2025-28), ವಿದ್ಯಾನಿಧಿಗೆ ರೂ.50 ಸಾವಿರ ದೇಣಿಗೆ ನೀಡಿದ ಬೊಳ್ವಾರು ಸ್ನೇಹ ಸಿಲ್ಕ್ಸ್ ಮತ್ತು ರೆಡಿಮೇಡ್ಸ್ ಮಾಲಕ ಸತೀಶ್ ಎಸ್, ಬಿಲ್ಲವ ಮಹಿಳಾ ವೇದಿಕೆಯ ಪರವಾಗಿ ಅಧ್ಯಕ್ಷೆ ಪುಷ್ಪಾವತಿ ಕೇಕುಡೆ, ವೈದ್ಯಕೀಯ ಕ್ಷೇತ್ರದಲ್ಲಿ ಎಂಬಿಬಿಎಸ್ ಪದವಿ ಪಡೆದಿರುವ ಡಾ.ಅಕ್ಷಯ್ ನಡುಬೈಲು, ಎಂಎಸ್ಸಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ ಚಂದ್ರಾಕ್ಷ ಶಾಂತಿಗೋಡು, ಎಂ.ಎಸ್.ಡಬ್ಲ್ಯೂವಿನಲ್ಲಿ ತೃತೀಯ ರ್‍ಯಾಂಕ್ ಗಳಿಸಿದ ಅರ್ಪಿತಾರವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವ್ಯವಸ್ಥಾಪನಾ ಸಮಿತಿಯ ಸದಸ್ಯರಿಗೆ ಅಭಿನಂದನೆ:
ವಿವಿಧ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಿನಯ ಸುವರ್ಣ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವೆಂಕಪ್ಪ ಪೂಜಾರಿ, ಡಾ.ರಮ್ಯ ರಾಜಾರಾಂ, ಮುಂಡೂರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ಗಣೇಶ್ ಸಾಲ್ಯಾನ್ ಪಜಿಮಣ್ಣು, ಜಲಜ ಕಂಪ, ಆಲಂಕಾರು ನೆಕ್ಕಿಲಾಡಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸೇಸಪ್ಪ ಪೂಜಾರಿ, ಸದಾನಂದ ಕುಮಾರ್ ಮಡ್ಯೊಟ್ಟು,ವಿಜಯಕುಮಾರ್ ಕೆದಿಲ, ಕಲ್ಲೇಗ ಕಲ್ಕುಡ ದೇವಸ್ಥಾನದ ಕೃಷ್ಣಪ್ಪ ಕಬಕ, ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕೃಷ್ಣಪ್ಪ ಪೂಜಾರಿ, ಶೇಷಪ್ಪ ಪೂಜಾರಿ, ನಾಗೇಶ್ ಪೂಜಾರಿ ಸಾರಕೆರೆ, ವಿಮಲ ಶಾಂತಿಗೋಡು, ಶಾಂತಿಗೋಡು ಶ್ರೀ ಶಾಸ್ತಾವು ದೇವಸ್ಥಾನದ ಶ್ರೀಧರ ಪೂಜಾರಿ , ಕೊಡಿಪ್ಪಾಡಿ ಶ್ರೀ ಜನಾರ್ದನ ದೇವಸ್ಥಾನದ ಕೇಶವ ಪೆಲತ್ತಡಿ, ಸರೋಜಿನಿ, ಅಗಳಿ ಶ್ರೀ ಸದಾಶಿವ ದೇವಸ್ಥಾನದ ರವಿಚಂದ್ರ ಕೆ.ಮಾರ್ಕಹೆ, ಸರ್ವೆ ಎಲಿಯ ವಿಷ್ಣುಮೂರ್ತಿ ದೇವಸ್ಥಾನದ ಶ್ರೀಮತಿ ಯಶೋಧ, ಆನಂದ ಪೂಜಾರಿ ಕೈಯೊಂಳ್ಕು, ಉಮೇಶ್ ಎಸ್.ಡಿ, ರಾಮಕುಂಜ ಶ್ರೀರಾಮಕುಂಜೇಶ್ವರ ದೇವಸ್ಥಾನದ ಪುಷ್ಪಾವತಿ, ಆತೂರು ಶ್ರೀ ಸದಾಶಿವ ದೇವಸ್ಥಾನದ ಶ್ರೀಧರ ಪೂಜಾರಿ ತುಂಬೆತ್ತಡ್ಕ, ಅಮ್ಮುಂಜ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪೂರ್ಣಿಮಾ ಮಾಣಿಜಾಲು, ನಳಿನಾಕ್ಷಿ ಮಲಾರ್, ಬನ್ನೂರು ಶ್ರೀ ಸದಾಶಿವ ದೇವಸ್ಥಾನದ ಮಹಾಬಲ ಪೂಜಾರಿ, ಕೆಯ್ಯೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದಾಮೋದರ ಪೂಜಾರಿ, ಚಂದ್ರಶೇಖರ, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬಿ.ಎ ವಸಂತ ಕೆಲಂಬೀರಿ, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯದ ಮನಮೋಹನ್ ಇರ್ದೆ, ಆನಡ್ಕ ಶ್ರೀ ವಿಷ್ಣುಮೂರ್ತಿ ದೇವಾಲಯದ ಜಲಜಾಕ್ಷಿ ಮರಕ್ಕೂರು, ಕುರಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದಿನೇಶ್ ಸಾಲ್ಯಾನ್, ಹರೀಶ್ ಡಿಂಬ್ರಿ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹರಿಶ್ಚಂದ್ರ ಯು, ಮಠಂತಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯಮುನಾ, ಕುಮಾರನಾಥ, ಪಡ್ನೂರು ಮದಗ ಶ್ರೀ ಜನಾರ್ದನ ದೇವಸ್ಥಾನದ ಮನೋಹರ ಎ, ರೋಹನ್ ರಾಜ್ ರವರುಗಳನ್ನು ಅಭಿನಂದಿಸಲಾಯಿತು.
ಕಾರ್ಯಕಾರಿ ಸಮಿತಿಗೆ ಆಯ್ಕೆಯಾದವರಿಗೆ ಗೌರವ:
ಕಾರ್ಯಕಾರಿ ಸಮಿತಿಯಲ್ಲಿ ವಲಯ ಸಂಚಾಲಕರಾಗಿ ದೇವಿಕಾ ಜಯನಾಂದ್ ಬನ್ನೂರು, ನಾಗೇಶ್ ಬಲ್ನಾಡು, ರಾಮಚಂದ್ರ ಪೂಜಾರಿ ಬೆಳ್ಳಿಪ್ಪಾಡಿ, ಅಶೋಕ್ ಕುಮಾರ್ ಪಡ್ಪು, ಅಜಿತ್ ಕುಮಾರ್ ಪಾಲೇರಿ, ಬಾಬು ಪೂಜಾರಿ ಇದ್ಪಾಡಿ, ಗಿರೀಶ್ ಕುಮಾರ್ ಕನ್ನಡ್ಕ, ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಸಂತೋಷ್ ಕುಮಾರ್ ಮರಕ್ಕಡ, ದಿನೇಶ್ ಕೇಪುಳು, ಲಕ್ಷ್ಮೀಶ ಬಂಗೇರ, ಸತೀಶ್ ಕೆ.ಐತೂರು, ಸಂಘ-ಸಂಸ್ಥೆ ಪ್ರತಿನಿಧಿಗಳಾಗಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಪುಷ್ಪಾವತಿ ಬಿ.ಎಮ್, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಅಣ್ಣಿ ಪೂಜಾರಿ ಅನಂತಿಮಾರು, ಉಪ್ಪಿನಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ನಾಣ್ಯಪ್ಪ ಪೂಜಾರಿ, ವಿವಿಧ ಗ್ರಾಮ ಸಮಿತಿ ಅಧ್ಯಕ್ಷರುಗಳಾದ ಪುತ್ತೂರು ನಗರ ವಲಯದಿಂದ ಮೋಹನ್ ತೆಂಕಿಲ(ಪುತ್ತೂರು ಕಸಬಾ), ಶೀನಪ್ಪ ಪೂಜಾರಿ ಬನ್ನೂರು(ಬನ್ನೂರು), ಕೇಶವ ಪೂಜಾರಿ ಬೆದ್ರಾಳ(ಕೇಪುಳು-ಬೆದ್ರಾಳ), ಬಲ್ನಾಡು ವಲಯದಿಂದ ಉಮೇಶ್ ಬಾಯಾರು(ಬಲ್ನಾಡು),’ಸುಂದರ ಪೂಜಾರಿ ಕಾಡ್ಲ(ಬುಳೇರಿಕಟ್ಟೆ), ಕೇಶವ ಪೆಲತ್ತಡಿ(ಕೊಡಿಪ್ಪಾಡಿ), ಶ್ರೀಧರ ಪೂಜಾರಿ ನೈತ್ತಾಡಿ(ಕೆಮ್ಮಿಂಜೆ),ಪುತ್ತೂರು ಗ್ರಾಮಾಂತರ ವಲಯದಲ್ಲಿ ರವಿಚಂದ್ರ ಪಡ್ಡಾಯೂರು(ಪಡ್ನೂರು), ಅಣ್ಣಿ ಪೂಜಾರಿ ಅನಂತಿಮಾರು(ಚಿಕ್ಕಮುಡ್ನೂರು), ವಸಂತ ಪೂಜಾರಿ(ಬೆಳ್ಳಿಪ್ಪಾಡಿ), ಉಲ್ಲಾಸ್ ಕೋಟ್ಯಾನ್(ಕೋಡಿಂಬಾಡಿ), ಮನೋಹರ್ ಕಾರ್ಜಾಲು(ಕಬಕ), ಉಪ್ಪಿನಂಗಡಿ ವಲಯದಿಂದ ವಸಂತ ಕುಕ್ಕುಜೆ(ಉಪ್ಪಿನಂಗಡಿ), ಗೋಪಾಲ ಎಚ್.ಎ(೩೪ನೇ ನೆಕ್ಕಿಲಾಡಿ), ಸದಾಶಿವ ಬಂಗೇರ ಎಲಿಯ(ಹಿರೇಬಂಡಾಡಿ), ಸೋಮಸುಂದರ(ಬಜತ್ತೂರು), ನೆಲ್ಯಾಡಿ ವಲಯದಿಂದ ಬಾಬು ಪೂಜಾರಿ(ಗೋಳಿತ್ತೊಟ್ಟು-ಆಲಂತಾಯ), .ಮಾಧವ ಪೂಜಾರಿ(ಶಿರಾಡಿ-ಕೊಣಾಜೆ-ಸಿರಿಬಾಗಿಲು), ಗಿರೀಶ್ ಸಾಲಿಯಾನ್ ಬದನೆ(ಇಚ್ಲಂಪಾಡಿ) ನೋಣಯ್ಯ ಅಂಬರ್ಜೆ(ನೆಲ್ಯಾಡಿ-ಕೌಕ್ರಾಡಿ-ಕೊಣಾಲು), ಆರ್ಯಾಪು ವಲಯದಿಂದ ರವಿ ಸುವರ್ಣ(ಆರ್ಯಾಪು), ಸುಂದರ ಪೂಜಾರಿ(ಕುರಿಯ), ಚಿದಾನಂದ ಸುವರ್ಣ(ಕುಂಜೂರುಪಂಜ), ಆನಂದ ಪೂಜಾರಿ(ಇರ್ದೆ-ಬೆಟ್ಟಂಪಾಡಿ), ವಿಶ್ವನಾಥ ಪೂಜಾರಿ(ಪಾಣಾಜೆ), ರಾಜೇಶ್ ನೆಲ್ಲಿತ್ತಡ್ಕ(ನಿಡ್ಪಳ್ಳಿ), ಕುಂಬ್ರ ವಲಯದಿಂದ ಸುಶಾಂತ್ ಅಜ್ಜಿಕಲ್ಲು(ಒಳಮೊಗ್ರು), ವಿಶ್ವನಾಥ ಪೂಜಾರಿ(ಕೆಯ್ಯೂರು), ಬಾಲಪ್ಪ ಪೂಜಾರಿ(ಕೆದಂಬಾಡಿ), ಸುಂದರ ಪೂಜಾರಿ(ಕೊಳ್ತಿಗೆ), ಭರತ್ ಪೂಜಾರಿ(ಅರಿಯಡ್ಕ), ತಾರಾನಾಥ(ಪಾಲ್ತಾಡಿ), ಬಡಗನ್ನೂರು ವಲಯದಿಂದ ಜನಾರ್ದನ ಪೂಜಾರಿ ಪದಡ್ಕ(ಸುಳ್ಯಪದವು-ಪಡುವನ್ನೂರು), ಪ್ರಕಾಶ್ ಸಾಲಿಯಾನ್(ಬಡಗನ್ನೂರು), ನಾರಾಯಣ ಪೂಜಾರಿ(ನೆಟ್ಟಣಿಗೆ ಮುಡ್ನೂರು), ಮೋನಪ್ಪ ಪೂಜಾರಿ(ಕಾವು), ನರಿಮೊಗರು ವಲಯದಿಂದ ಹರೀಶ್ ಎಂ.ಕೆ(ನರಿಮೊಗರು), ನಾರಾಯಣ ಪೂಜಾರಿ(ಆನಡ್ಕ), ದಾಮೋದರ್ ಕೆ(ಶಾಂತಿಗೋಡು), ಉಮೇಶ್ ಎಸ್.ಡಿ(ಸರ್ವೆ), ಅನಿಲ್ ಕನ್ನರ್ ನೂಜಿ(ಮುಂಡೂರು), ಸವಣೂರು ವಲಯದಿಂದ ವಿಜಯಕುಮಾರ್ ಸೊರಕೆ(ಕಾಣಿಯೂರು-ಚಾರ್ವಾಕ-ದೋಲ್ಪಾಡಿ), ಸತೀಶ್ ಕುಮಾರ್ ಕೆಡೆಂಜಿ(ಕುದ್ಮಾರು-ಬೆಳಂದೂರು-ಕಾಯೈಮಣ), ಅಕ್ಷಯ್ ಕುಮಾರ್(ಸವಣೂರು-ಪುಚ್ಚಪ್ಪಾಡಿ), ಆಲಂಕಾರು ವಲಯದಿಂದ ಚಂದ್ರಶೇಖರ(ಆಲಂಕಾರು), ಪುರುಷೋತ್ತಮ(ಹಳೇನೇರಂಕಿ), ಸಂಜೀವ ಮಾರಂಗ(ರಾಮಕುಂಂಜ-ಕೊಯಿಲ), ಉದಯಕುಮಾರ್(ಪೆರಾಬೆ-ಕುಂತೂರು), ಕಡಬ ವಲಯದಿಂದ ಹರೀಶ್ ಡಿ.ಎಚ್(ಬಲ್ಯ), ಜಯಪ್ರಕಾಶ್ ದೋಳ(ಕಡಬ-ಕುಟ್ರುಪ್ಪಾಡಿ), ಬಾಬು ಪೂಜಾರಿ(ಕೋಡಿಂಬಾಳ), ಮರ್ದಾಳ ವಲಯದಿಂದ ರಧೀಶ್(ನೂಜಿಬಾಳ್ತಿಲ), ಸಂಜೀವ ಪೂಜಾರಿ(ರೆಂಜಿಲಾಡಿ), ಉದಯ ಮಿತ್ತೋಡಿ(ಐತೂರು-ಬಂಟ್ರ-೧೦೨ನೆಕ್ಕಲಾಡಿ), ನೋಣಯ್ಯ ಕೆ(ಕೊಂಬಾರು-ಬಿಳಿನೆಲೆ)ರವರುಗಳನ್ನು ಗೌರವಿಸಲಾಯಿತು.
ವಿದ್ಯಾನಿಧಿ ಯೋಜನೆಗೆ ರೂ.10 ಸಾವಿರಕ್ಕಿಂತ ಮೇಲ್ಪಟ್ಟು ದೇಣಿಗೆ ನೀಡಿದವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಪುತ್ತೂರು ಕಸಬಾ ಗ್ರಾಮ ಸಮಿತಿ ಅಧ್ಯಕ್ಷ ಮೋಹನ್ ತೆಂಕಿಲ ಪ್ರಾರ್ಥಿಸಿದರು. ಬಿಲ್ಲವ ಸಂಘದ ಉಪಾಧ್ಯಕ್ಷ ಚಿದಾನಂದ ಸುವರ್ಣ ಸ್ವಾಗತಿಸಿ, ಕಾರ್ಯದರ್ಶಿ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ವಂದಿಸಿದರು. ವೇದನಾಥ ಸುವರ್ಣ, ಪುರುಷೋತ್ತಮ ಬರೆಂಬೆಟ್ಟು, ಮೋನಪ್ಪ ಪೂಜಾರಿ ಕಾವು, ಕೋಶಾಧಿಕಾರಿ ಜನಾರ್ದನ ಪೂಜಾರಿ ಪದಡ್ಕ, ಉಪಾಧ್ಯಕ್ಷೆ ಪುಷ್ಪಾವತಿ ಕೇಕುಡೆ, ಗುರುಮಂದಿರದ ನಿಕಟಪೂರ್ವ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕೋಲಾಡಿರವರು ಅತಿಥಿಗಳಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಸ್ವಾಗತಿಸಿದರು. ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ಬಗ್ಗೆ ವಿದ್ಯಾನಿಧಿ ಸಂಚಾಲಕ ಉಲ್ಲಾಸ್ ಕೋಟ್ಯಾನ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಾ ಪುರಸ್ಕೃತರ ಹೆಸರನ್ನು ವಿದ್ಯಾನಿಧಿ ಸಂಚಾಲಕ ರವಿ ಕಲ್ಕಾರುರವರು ಓದಿದರು. ಸನ್ಮಾನಿತರ ಸನ್ಮಾನ ಪತ್ರವನ್ನು ಬಾಲಕೃಷ್ಣ ಪೂಜಾರಿ ಪಲ್ಲತ್ತಾರು, ಶಕುಂತಳಾ ಬೆಟ್ಟಂಪಾಡಿ, ಅಶೋಕ್ ಕುಮಾರ್ ಪಡ್ಪು, ಜಯರಾಮ ಬಿ.ಎನ್, ದೇವಿಪ್ರಸಾದ್ ಇಚ್ಲಂಪಾಡಿರವರು ಓದಿದರು. ಎಸ್‌ಸಿಡಿಸಿಸಿ ಬ್ಯಾಂಕ್‌ನ ಸುಳ್ಯ ಶಾಖಾ ವ್ಯವಸ್ಥಾಪಕ ಸಂತೋಷ್ ಕುಮಾರ್ ಮರಕ್ಕಡ ಹಾಗೂ ದೇವಿಕಾ ಜಯಾನಂದ್ ಕಾರ್ಯಕ್ರಮ ನಿರೂಪಿಸಿದರು. ಅವಿಭಜಿತ ಪುತ್ತೂರು ಹಾಗೂ ಕಡಬ ತಾಲೂಕಿನ 55 ಬಿಲ್ಲವ ಗ್ರಾಮ ಸಮಿತಿ, ಬಿಲ್ಲವ ಮಹಿಳಾ ವೇದಿಕೆ ಪುತ್ತೂರು, ಯುವವಾಹಿನಿ ಪುತ್ತೂರು ಘಟಕ, ಉಪ್ಪಿನಂಗಡಿ ಹಾಗೂ ಕಡಬ ಘಟಕಗಳು, ಪುತ್ತೂರು ಬಿಲ್ಲವ ವಿದ್ಯಾರ್ಥಿ ಸಂಘದ ಸಹಕಾರದಲ್ಲಿ ಕಾರ್ಯಕ್ರಮ ನಡೆಯಿತು. ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
250 ಮಿಕ್ಕಿ ವಿದ್ಯಾರ್ಥಿಗಳು.. ರೂ.5 ಲಕ್ಷ ವೆಚ್ಚ..
ಬಿಲ್ಲವ ಸಮಾಜದ ಬಡ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ, ಸಹಾಯಧನ, ಪ್ರತಿಭಾ ಪುರಸ್ಕಾರ ಇತ್ಯಾದಿ ಉದ್ಧೇಶಗಳಿಗಾಗಿ ಸ್ಥಾಪಿಸಿದ ವಿನೂತನ ವಿದ್ಯಾನಿಧಿ ಯೋಜನೆಯಡಿಯಲ್ಲಿ ಸುಮಾರು 250ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಸುಮಾರು ರೂ.5 ಲಕ್ಷ ವೆಚ್ಚದಲ್ಲಿ ವಿದ್ಯಾನಿಧಿಯನ್ನು ನೀಡಲಾಗಿದೆ ಎಂದು ವಿದ್ಯಾನಿಧಿ ಯೋಜನೆಯ ಸಂಚಾಲಕ ಉಲ್ಲಾಸ್ ಕೋಟ್ಯಾನ್‌ರವರು ತಿಳಿಸಿದರು.
ಸಾಧಕರಿಗೆ ಸನ್ಮಾನ..
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯ್ದ ಸಮಾಜ ಬಾಂಧವರಾದ ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಭಗೀರಥ ಜಿ, ಮಂಗಳೂರು ನಂದಾದೀಪ ಫೌಂಡೇಶನ್ ಮತ್ತು ಬಿಲ್ಲವ ಬ್ರಿಗೇಡ್ ಕೇಂದ್ರೀಯ ಮಂಡಳಿಯ ಸಂಸ್ಥಾಪಕ ಸದಾನಂದ ಪೂಜಾರಿ, ಪುತ್ತೂರು ಬಿಲ್ಲವ ಸಂಘದ ವಿದ್ಯಾನಿಧಿ ಇದರ ಸ್ಥಾಪಕ ಸಂಚಾಲಕರಾದ ಕ್ಯಾ|ಚಿದಾನಂದ ನಾಡಾಜೆರವರುಗಳನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.
ಧಾರ್ಮಿಕ ಕಾರ್ಯಕ್ರಮ:
ಬೆಳಿಗ್ಗೆ ನವೀನ್ ಶಾಂತಿ ಅಡ್ಯಾಲು ಅಜಿಲಮೊಗರು ಇವರ ಪೌರೋಹಿತ್ಯದಲ್ಲಿ ಪ್ರಾರ್ಥನೆ, ಗಣಹೋಮ, ಪಂಚಾಮೃತಾಭಿಷೇಕ, ಗುರುಪೂಜೆ ಬಳಿಕ ಸುಳ್ಯಪದವು ಆಲಂಕಾರು, ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು.
ವಿಶ್ವಮಾನವ ಸಂದೇಶ ಜಗತ್ತಿಗೆ ಸಾರಿದವರು ನಾರಾಯಣ ಗುರುಗಳು..
ಗುರುಸಂದೇಶ ನೀಡಿದ ಸ್ಮಿತೇಶ್ ಎಸ್.ಬಾರ್ಯರವರು, 19ನೇ ಶತಮಾನದಲ್ಲಿ ಜಗತ್ತಿನ ಸಮಾನತೆಯನ್ನು ಹೋಗಲಾಡಿಸಲು ಮತ್ತು ಲೋಕವನ್ನು ಬೆಳಗಿಸಲು ದೇವರ ಅವತಾರವಾಗಿರುವ ನಾರಾಯಣ ಗುರುಗಳ ಉದಯವಾಯಿತು. ಮನುಷ್ಯನಿಗೆ ಆಧ್ಯಾತ್ಮಿಕ ಬೆಳವಣಿಗೆ ಮಾತ್ರವಲ್ಲ ಜ್ಞಾನ ಭಂಡಾರದ ಅಭಿವೃದ್ಧಿ ಆಗಬೇಕು ಎನ್ನುವ ನಿಟ್ಟಿನಲ್ಲಿ ಯಾವುದೇ ಪ್ರತಿಭಟನೆಯಿಲ್ಲದೆ ಮೌನ ಪ್ರತಿಭಟನೆ ಮೂಲಕ ಕ್ರಾಂತಿ ಹಾಡಿದವರು ನಾರಾಯಣ ಗುರುಗಳು. ಕೇಂದ್ರ ಸರಕಾರದ ತ್ರಿಭಾಷಾ ಸಿದ್ಧಾಂತ ಏನಿದೆಯೋ ಅದು ಅಂದು ನಾರಾಯಣ ಗುರುಗಳು ಪ್ರತಿಪಾದಿಸಿದವರಾಗಿದ್ದಾರೆ ಎಂದ ಅವರು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಮಾತ್ರವಲ್ಲ ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂಬುದಾಗಿ ಮಾನವ ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂದು ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದವರಾಗಿದ್ದಾರೆ.
ಸ್ಮಿತೇಶ್ ಎಸ್.ಬಾರ್ಯ, ಗುರುಸಂದೇಶ ನೀಡಿದವರು, ಚಲನಚಿತ್ರ ನಿರ್ದೇಶಕರು ಹಾಗೂ ಆಪ್ತ ಸಮಾಲೋಚಕರು