ಪುತ್ತೂರು: ವಿಟ್ಲದ ಇಲೆಕ್ಟ್ರಿಕಲ್ ಅಂಗಡಿಯೊಂದರೊಳಗಿಂದ ಸುಮಾರು 35 ಸಾವಿರ ರೂ.ಮೌಲ್ಯದ ಕಪ್ಪು ಬಣ್ಣದ ಕೇಬಲ್ ಕಳವು ಮಾಡಿರುವ ಘಟನೆ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ ಪೇಟೆಯಲ್ಲಿರುವ ಶ್ರೀ ಇಲೆಕ್ಟ್ರಿಕಲ್ಸ್ ಅಂಗಡಿಯ ಎದುರಿನ ಗ್ರಿಲ್ ಮಾದರಿಯ ಕಬ್ಬಿಣದ ಗೇಟಿಗೆ ಹಾಕಿರುವ ಬೀಗವನ್ನು ಮುರಿದು ಒಳಪ್ರವೇಶಿಸಲು ಪ್ರಯತ್ನಿಸಿ ನಂತರ ಗೇಟು ಹತ್ತಿ ಅಂಗಡಿಯ ಒಳಗೆ ನುಗ್ಗಿ ಮಾರಾಟಕ್ಕೆ ಇರಿಸಿದ್ದ ಪಂಪ್ ಕೇಬಲ್ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಅಂಗಡಿ ಮಾಲಕ ಸಂತೋಷ್ ಕುಮಾರ್ ಎಂಬವರು ನೀಡಿರುವ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.