ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಫೆ.17 ಲಾಸ್ಟ್ ಡೇಟ್ – ಇನ್ನು 17 ದಿನಗಳು ಮಾತ್ರ ಬಾಕಿ

0

ಪುತ್ತೂರು: ಹೈ ಸೆಕ್ಯೂರಿಟಿ ರಿಜಿಸ್ಟೇಷನ್ ನಂಬರ್ ಪ್ಲೇಟ್(ಹೆಚ್‌ಎಸ್‌ಆರ್‌ಪಿ) ಅಳವಡಿಸುವ ಕುರಿತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಈಗಾಗಲೇ ಹಲವು ಗಡುವುಗಳನ್ನು ವಿಸ್ತರಿಸಿದ್ದು, ಇದೀಗ ಕೊನೆಯದಾಗಿ ಫೆ.17ಕ್ಕೆ ಅಂತಿಮ ಗಡು ನೀಡಿದ್ದು ಇನ್ನು 17 ದಿನಗಳು ಮಾತ್ರ ಬಾಕಿ ಉಳಿದಿವೆ.
ನಕಲಿ ನಂಬರ್ ಪ್ಲೇಟ್, ವಾಹನಗಳನ್ನು ಕಾನೂನು ಬಾಹಿರ ಚಟುವಟಿಕೆಗೆ ಬಳಕೆ ಮಾಡುವುದನ್ನು ತಪ್ಪಿಸಲು ಹಾಗೂ ವಾಹನಗಳನ್ನು ಟ್ರ್ಯಾಕ್ ಮಾಡಲು ಸೇರಿದಂತೆ ಹಲವು ಕಾರಣಗಳಿಂದ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಗತ್ಯವಾಗಿದೆ. ಈ ನಂಬರ್ ಪ್ಲೇಟ್ ಎಲ್ಲೆಂದರಲ್ಲಿ ಸಿಗುವುದಿಲ್ಲ. ಮಧ್ಯವರ್ತಿಗಳ ಅವಶ್ಯಕತೆ ಇಲ್ಲ. ಸುಲಭವಾಗಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯಲು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯುವುದು ಹೇಗೆ?
2019ರ ಎಪ್ರಿಲ್ 1ಕ್ಕಿಂತ ಮೊದಲು ನೋಂದಾವಣೆಯಾಗಿರುವ ಎಲ್ಲಾ ಮಾದರಿಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಕೆ ಮಾಡಲೇಬೇಕಿದೆ. ಹೀಗಾಗಿ https://transport.karnataka.gov.in/ ಈ ಅಧಿಕೃತ ವೆಬ್‌ತಾಣದ ಮೂಲಕ ನೋಂದಾವಣೆ ಮಾಡಿ ಶುಲ್ಕ ಪಾವತಿ ಮಾಡಿದ ನಂತರ ವಾಹನ ಡೀಲರ್ ಬಳಿ ಹೋಗಿ ನಂಬರ್ ಪ್ಲೇಟ್ ಬದಲಾಯಿಸಬಹುದು. ದ್ವಿಚಕ್ರ ವಾಹನಗಳಿಗೆ ರೂ.400-600 ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ರೂ.600-850ನ್ನು ಆನ್‌ಲೈನ್ ಮೂಲಕ ಪಾವತಿಸಿ, ನೋಂದಾಯಿಸಿಕೊಳ್ಳಬೇಕು.
ನೀವು ಆನ್‌ಲೈನ್ ಮೂಲಕಕ HSRP ನಂಬರ್ ಪ್ಲೇಟ್ ಬುಕ್ ಮಾಡಿದ ಬಳಿಕ ಹೊಸ ನಂಬರ್ ಪ್ಲೇಟ್ ನೀವು ಆಯ್ಕೆ ಮಾಡಿದ ವಾಹನದ ಡೀಲರ್ ಬಳಿ ತಲುಪಲಿದೆ. ಬಳಿಕ ನಿಗದಿಮಾಡಿದ ದಿನಾಂಕದಂದು ಡೀಲರ್ ಬಳಿ ತೆರಳಿ ಹೊಸ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಾಗುತ್ತದೆ.
ಎಚ್‌ಎಸ್‌ಆರ್‌ಪಿ ಎಂಬುದು ವಾಹನಗಳ ನೋಂದಣಿ ನಂಬರ್ ಪ್ಲೇಟ್ ಆಗಿದ್ದು, ಅಲ್ಯೂಮೀನಿಯಂನಿಂದ ತಯಾರಿಸಲಾಗುತ್ತದೆ. ಅದರಲ್ಲಿ ಲೇಸರ್ ಕೋಡ್ ಇದ್ದು, ಸ್ಕ್ಯಾನ್ ಮಾಡಿದಾಗ ವಾಹನದ ಸಂಪೂರ್ಣ ಮಾಹಿತಿ ಹಾಗೂ ಅಶೋಕ ಚಕ್ರದ ಚಿತ್ರವನ್ನು ಒಳಗೊಂಡಿರುತ್ತದೆ. ನಕಲಿ ನಂಬರ್ ಪ್ಲೇಟ್ ಅಳವಡಿಸುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಪ್ರಾರಂಭದಲ್ಲಿ ಸರಕಾರ 2023ರ ನ.27ಕ್ಕೆ ಅಂತಿಮ ಗಡು ನೀಡಿತ್ತು. ನಂತರ ಅವಽ ವಿಸ್ತರಿಸಿದ್ದ ಸರಕಾರವು ಇದೇ ಫೆ.17ಕ್ಕೆ ಅಂತಿಮ ಗಡು ನೀಡಿದೆ.

LEAVE A REPLY

Please enter your comment!
Please enter your name here