ಪುತ್ತೂರು : ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ 8 ಮಂದಿ ವಿದ್ಯಾರ್ಥಿಗಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ 2022-23ನೇ ಸಾಲಿನ ರಾಜ್ಯ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸ್ಕೌಟ್ ವಿದ್ಯಾರ್ಥಿಗಳ ವಿಭಾಗದಲ್ಲಿ ವಿಟ್ಲದ ಗುರುಂಪು ದೇವಸ್ಯ ನಿವಾಸಿ ಗಿರೀಶ್ ಭಟ್ ಹಾಗೂ ಸೌಮ್ಯ ಸವಿತಾ ದಂಪತಿ ಪುತ್ರ ಆತ್ರೇಯ ಭಟ್ ಎ. ಜಿ, ಪುತ್ತೂರು ವಿಜಯನಗರ ಲೇಔಟ್ ಸರ್ವೇಯರ್ ಎಂ ಪೂರ್ಣೇಶ್ ಹಾಗೂ ಕೆ. ಎನ್ ರಶ್ಮಿ ದಂಪತಿ ಪುತ್ರರಾದ ಭವಿತ್ ಪಿ. ಗೌಡ ಹಾಗೂ ಭವಿಷ್ ಪಿ ಗೌಡ, ಪುತ್ತೂರು ಸೂತ್ರಬೆಟ್ಟು ನಿವಾಸಿ ಎಸ್ ಸುಬ್ಬರಾವ್ ಹಾಗೂ ಜಯಲಕ್ಷ್ಮಿ ಎಸ್ ದಂಪತಿ ಪುತ್ರ ತನ್ವಿಶ್ ರಾವ್ ರಾಜ್ಯ ಪುರಸ್ಕಾರ ಪಡೆದಿದ್ದಾರೆ.
ಗೈಡ್ಸ್ ವಿದ್ಯಾರ್ಥಿಗಳ ವಿಭಾಗದಲ್ಲಿ ಕೋಡಿಂಬಾಡಿಯ ಬಾಲಕೃಷ್ಣ ಬೋರ್ಕರ್ ಹಾಗೂ ಆಹಲ್ಯಾ ಎಂ. ಬಿ ದಂಪತಿ ಪುತ್ರಿ ಭಾರ್ಗವಿ ಬೋರ್ಕರ್, ನೆಲ್ಲಿಪದವು ಉಜಿರೆಯ ವೆಂಕಟೇಶ್ ನಾಯ್ಕ ಹಾಗೂ ಲವೀನಾ ಕೆ. ಬಿ ದಂಪತಿ ಪುತ್ರಿ ತನ್ವಿ, ಎಸ್ಆರ್ಕೆ ನಗರದ ನಳಿನ್ ಕುಮಾರ್ ಹಾಗೂ ವಿಜಯ ಎನ್ ದಂಪತಿ ಪುತ್ರಿ ಅನ್ಸಿಕಾ ಶೆಟ್ಟಿ, ಹಾಗೂ ತಾರಿಗುಡ್ಡೆ ನಿವಾಸಿ ರುಕ್ಮಯ್ಯ ಗೌಡ ಹಾಗೂ ಜಲಜಾಕ್ಷಿ ದಂಪತಿ ಪುತ್ರಿ ಯಶಸ್ವಿ ಸುರುಳಿ ರಾಜ್ಯ ಪ್ರಶಸ್ತಿ ಪಡೆದಿರುತ್ತಾರೆ. ಇವರಿಗೆ ವಿದ್ಯಾಲಯದ ಸ್ಕೌಟ್ ಮಾಸ್ಟರ್ ಸತೀಶ್ ಇರ್ದೆ ಹಾಗೂ ಗೈಡ್ಸ್ ಶಿಕ್ಷಕಿ ಚಂದ್ರಕಲಾ ತರಬೇತಿಯನ್ನು ನೀಡಿರುತ್ತಾರೆ.