ರಾಜ್ಯ ಹೆದ್ದಾರಿ,ಗ್ರಾ.ಪಂ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆತ- ಸಾರ್ವಜನಿಕರಿಂದ ಆಕ್ರೋಶ -ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ ರಾಮಕುಂಜ ಗ್ರಾ.ಪಂ

0

ಆಲಂಕಾರು: ಉಪ್ಪಿನಂಗಡಿ, ಕಡಬ,ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿಯಲ್ಲಿ ಹಾಗು ಗ್ರಾ.ಪಂ ರಸ್ತೆಯ ಬದಿಗೆ ತ್ಯಾಜ್ಯ ಎಸೆತದಿಂದಾಗಿ ಸಾರ್ವಜನಿಕರು ಆಕ್ರೋಶಗೊಂಡ ಘಟನೆ ರಾಮಕುಂಜ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದಿದೆ.ರಾಜ್ಯ ಹೆದ್ದಾರಿ ಬದಿಯಲ್ಲಿರುವ ಕುಂಡಾಜೆ,ಸಂಪ್ಯಾಡಿ ಪರಿಸರದ ರಸ್ತೆ ಬದಿ ಹಾಗು ಇನ್ನೀತರ ಕಡೆಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ಕಸಗಳನ್ನು ತುಂಬಿ ರಸ್ತೆ ಬದಿಗೆ ಎಸೆಯುತ್ತಿರುವ ಘಟನೆಗಳು ನಡೆಯುತ್ತಿದೆ. ರಾಜ್ಯ ಹೆದ್ದಾರಿಯ ಬದಿ ಗ್ರಾ.ಪಂ ಸಂಪ್ಯಾಡಿ ರಸ್ತೆಯ ಮಧ್ಯಭಾಗಕ್ಕೆ ತ್ಯಾಜ್ಯಗಳನ್ನು ತಂದು ಎಸೆದಿದ್ದು
ಸಾರ್ವಜನಿಕರು ರಸ್ತೆಯನ್ನು ಅವಲಂಬಿಸಿರುವ ನಿವಾಸಿಗಳಾದ ಟಿ ನಾಗರಾಜ ಭಟ್, ಜಯಕರ ಪೂಜಾರಿ, ವಿನಯ ಗೌಡ ಹಾಗೂ ಬಶೀರ್,ಶಾಲಾ ಮಕ್ಕಳು ಗ್ರಾ.ಪ ಸದಸ್ಯರಿಗೆ ಹಾಗು ಗ್ರಾ.ಪಂ ಅಧ್ಯಕ್ಷರಿಗೆ ಹಾಗು ಅಭಿವೃದ್ಧಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಕಸದ ಸೂಕ್ತ ವಿಲೇವಾರಿ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.ಇದೇ ರೀತಿ ಹಳೆನೇರೆಂಕಿ ಕೂಡು ರಸ್ತೆಯಿಂದ ರಾಮಕುಂಜ ಕ್ರಾಸ್ ತನಕ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವ ಬಗ್ಗೆ ಗ್ರಾ.ಪಂ ಗೆ ಸಾರ್ವಜನಿಕ ದೂರುಗಳು ಬಂದಿದ್ದು , ಗ್ರಾ.ಪಂ ರಸ್ತೆಗೆ ತ್ಯಾಜ್ಯ ಎಸೆಯುವವರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ರಾಮಕುಂಜ ಗ್ರಾ.ಪಂ ವತಿಯಿಂದ ವಿನಂತಿಸಿದ್ದಾರೆ.

ರಸ್ತೆಗೆ ತ್ಯಾಜ್ಯ ಎಸೆದರೆ ಕಾನೂನು ಕ್ರಮ ಹಾಗು ದಂಡ ಗ್ರಾ.ಪಂ ರಾಮಕುಂಜ
ರಾಮಕುಂಜ ಗ್ರಾ.ಪಂ ವ್ಯಾಪ್ತಿಯಲ್ಲಿ ತ್ಯಾಜ್ಯಗಳನ್ನು ರಸ್ತೆಗೆ ಎಸೆಯುವುದರ ಬಗ್ಗೆ ಸಾರ್ವಜನಿಕರಿಂದ ಅನೇಕ ಬಾರಿ ದೂರುಗಳು ಬಂದಿದ್ದು ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಚರ್ಚೆಗಳು ನಡೆದಿದೆ.ಸ್ವಚ್ಚತೆಗೆ ಅಧ್ಯತೆ ನೀಡುವ ಬಗ್ಗೆ ನಾವು ಪಂಚಾಯತ್ ವತಿಯಿಂದ ಅಂಗಡಿ ಮುಂಗಟ್ಟುಗಳಿಗೆ ಗೋಣಿಚೀಲಗಳನ್ನು ಪಂಚಾಯತ್ ವತಿಯಿಂದ ವಿತರಿಸಿದ್ದೇವೆ.ರಾಜ್ಯ ಹೆದ್ದಾರಿ ಬದಿಗೆ ಹಾಗು ಸಾರ್ವಜನಿಕ ರಸ್ತೆಗಳಿಗೆ ತ್ಯಾಜ್ಯವನ್ನು ತಂದು ಕೆಲವರು ಎಸೆಯುತ್ತಿದ್ದಾರೆ ತ್ಯಾಜ್ಯ ಎಸೆಯುವವರ ಬಗ್ಗೆ ಸಾರ್ವಜನಿಕರು ಮಾಹಿತಿಯನ್ನು ನೀಡಬೇಕು
ಹಾಗು ಅವರ ವಿರುದ್ದ ಕಾನೂನು ಕ್ರಮಕೈಗೊಳ್ಳಲು ಗ್ರಾ.ಪಂ ಬದ್ದವಾಗಿದೆ.
ಸುಚೇತಾ ಅಧ್ಯಕ್ಷರು ರಾಮಕುಂಜ ಗ್ರಾ.ಪಂ

ರಾಮಕುಂಜ ಗ್ರಾ.ಪಂ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ರಾಜ್ಯ ಹೆದ್ದಾರಿ ಹಾಗು ಸಾರ್ವಜನಿಕ ರಸ್ತೆಗೆ ತ್ಯಾಜ್ಯ ಎಸೆಯುವ ಬಗ್ಗೆ ದೂರುಗಳು ಬಂದಿದ್ದು ತ್ಯಾಜ್ಯ ಎಸೆಯುವರಿಗೆ ದಂಡ ಹಾಗು ಕಾನೂನು ಕ್ರಮ ಕೈಗೊಳ್ಳುತ್ತೇವೆ
ಅಭಿವೃದ್ಧಿ ಅಧಿಕಾರಿ ಲಲಿತಾ

LEAVE A REPLY

Please enter your comment!
Please enter your name here