ಪುತ್ತೂರು:ಇತ್ತೀಚೆಗೆ ನಿಧನರಾದ ನಿವೃತ್ತ ಪ್ರಾಂಶುಪಾಲ ವಿಟ್ಲ ಕೂಜಪ್ಪಾಡಿ ವಿಶ್ವನಾಥ ವೆಂಕಪ್ಪ ಶೆಟ್ಟಿಯವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯ ಮತ್ತು ಶ್ರದ್ಧಾಂಜಲಿ ಸಭೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಸನ್ನಿಧಿಯಲ್ಲಿ ಫೆ.9ರಂದು ನಡೆಯಿತು.
ಜೂನಿಯರ್ ಕಾಲೇಜು ಕೊಂಬೆಟ್ಟುವಿನಲ್ಲಿ 10 ವರ್ಷ ಪ್ರಾಧ್ಯಾಪಕರಾಗಿ,ನಂತರ ಸುಳ್ಯ ಜೂನಿಯರ್ ಕಾಲೇಜಿನಲ್ಲಿ 10 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಬಳಿಕ ಕುಂದಾಪುರದ ಕೋಟೇಶ್ವರದಲ್ಲಿ 5 ವರ್ಷ, ಬಂಟ್ವಾಳ ವಾಮದಪದವಿನಲ್ಲಿ 10 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ವಿಶ್ವನಾಥ ಶೆಟ್ಟಿಯವರು,ನಿವೃತ್ತಿಯ ನಂತರ ಕಲ್ಲುಗುಂಡಿ ಜೂನಿಯರ್ ಕಾಲೇಜು, ಕಾವೂರು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ, ಕಾವು ಬುಶ್ರಾ ಹಾಗೂ ಕೆಯ್ಯೂರು ಮಾಡಾವು ಜೂನಿಯರ್ ಕಾಲೇಜಿನಲ್ಲಿ ಒಂದೂವರೆ ವರ್ಷ ಆಡಳಿತ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದರು.ಒಳ್ಳೆಯ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಒಳ್ಳೆಯ ತಂದೆಯಾಗಿ, ಪತಿಯಾಗಿ ಸೇರಿದಂತೆ ತನ್ನ ಜೀವನದಲ್ಲಿನ ಎಲ್ಲಾ ಕರ್ತವ್ಯಗಳನ್ನು ಇವರು ನಿಷ್ಠೆಯಿಂದ ನಿಭಾಯಿಸಿದ್ದರು ಎಂದು ನುಡಿನಮನ ಸಲ್ಲಿಸಿದ ಗಣ್ಯರು ಮೃತರ ಗುಣಗಾನ ಮಾಡಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ, ಪುತ್ತೂರು ನಗರಸಭೆಯ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಉದ್ಯಮಿಗಳಾದ ಸೀತಾರಾಮ ರೈ ಕೆದಂಬಾಡಿಗುತ್ತು,ಪ್ರಸನ್ನ ಕುಮಾರ್ ಶೆಟ್ಟಿ ಱಸಿಝ್ಲರ್‌ೞ, ಪ್ರಫುಲ್ಲ ಎಲ್ಲೂರುಗುತ್ತು,ಸದಾಶಿವ ಶೆಟ್ಟಿ ಎಲ್ಲೂರುಗುತ್ತು,ಕೊರಗ ಶೆಟ್ಟಿ ಬೆಳ್ಳಿಬೆಟ್ಟುಗುತ್ತು,ವಸುಂಧರ ಶೆಟ್ಟಿ ಬೆಳ್ಳಿಬೆಟ್ಟುಗುತ್ತು,ಗಣೇಶ್ ಶೆಟ್ಟಿ ಪಣಿಯೂರುಮೂಡು ಮನೆ, ಗಿರೀಶ್ ಶೆಟ್ಟಿ ಎಲ್ಲೂರುಗುತ್ತು, ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಧ್ಯಕ್ಷ ಸುದೇಶ್ ಆರ್. ಶೆಟ್ಟಿ ಶಾಂತಿನಗರ,ಅಹಲ್ಯ ಕಿರಣ್ ಶೆಟ್ಟಿ,ಮೃತರ ಪತ್ನಿ ಪಂಜ ಬಾಕಿಮಾರುಗುತ್ತು ಹರಿಣಿ ವಿ.ಶೆಟ್ಟಿ, ಮಕ್ಕಳಾದ ಶಿಲ್ಪಾ ಜಿ.ಶೆಟ್ಟಿ, ಅಕ್ಷತಾ ಜಿ ಶೆಟ್ಟಿ, ಮೊಮ್ಮಕ್ಕಳಾದ ಧನ್ವಿ ಶೆಟ್ಟಿ, ಮಾನ್ಯ ಶೆಟ್ಟಿ, ಮೌಲ್ಯ ಶೆಟ್ಟಿ, ಜಷನ್ ಶೆಟ್ಟಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಸುಧಾಕರ ಶೆಟ್ಟಿ ಗಾಂಧಿಪಾರ್ಕ್ ಕಾರ್ಯಕ್ರಮ ನಿರೂಪಿಸಿದರು.ಇವರ ಪುತ್ರ ಉದ್ಯಮಿ ಕಿರಣ್ ಶೆಟ್ಟಿಯವರು ಒಂದೂವರೆ ವರ್ಷದ ಹಿಂದೆ ಹೃದಯಾಘಾತಕ್ಕೆ ಬಲಿಯಾಗಿದ್ದರು.