ನಿಡ್ಪಳ್ಳಿ:ಅಂಗನವಾಡಿ ಕೇಂದ್ರಗಳಿಗೆ ಕಳೆದ ಎರಡು ತಿಂಗಳಿನಿಂದ ಆಹಾರ ಸಾಮಗ್ರಿ ಸರಬರಾಜು ಆಗದಿರುವ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈಯವರ ಗಮನಕ್ಕೆ ತಂದು ತಕ್ಷಣ ಒದಗಿಸುವಂತೆ ಕ್ರಮ ಕೈಗೊಳುವಂತೆ ಒತ್ತಾಯಿಸಿ ಅಜ್ಜಿಕಲ್ಲುದೆ ಮುಂಡೋದಮೂಲೆ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿಯಿಂದ ಮಾ.5 ರಂದು ಮನವಿ ನೀಡಲಾಯಿತು.
ಅಲ್ಲದೆ ಈ ಹಿಂದೆ ಬರುತ್ತಿದ್ದ ಆಹಾರದ ಬದಲು ಮುಂದೆ ಅನ್ನ ಸಾಂಬಾರ್ ಸಾಮಗ್ರಿ ಒದಗಿಸುವಂತೆ ಶಾಸಕರನ್ನು ಒತ್ತಾಯಿಸಲಾಯಿತು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಹರಿಣಾಕ್ಷಿ ಶರತ್ ಗೌಡ,ಸಮಿತಿ ಸದಸ್ಯರಾದಉಷಾ ಅಜ್ಜಿಕಲ್ಲು, ಸತೀಶ್ ಅಂಚನ್ ಹಾಗೂ ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಕಾಂಗ್ರೆಸ್ ಮುಖಂಡರಾದ ಶಶಿಕಿರಣ್ ರೈ ಮೊಡಪ್ಪಾಡಿ ಮತ್ತು ಸಂತೋಷ್ ಭಂಡಾರಿ ಚಿಲ್ಮೆತ್ತಾರು ಇವರ ಮುಂದಾಳತ್ವದಲ್ಲಿ ಶಾಸಕರಿಗೆ ಮನವಿ ನೀಡಲಾಯಿತು.