ರೋಟರಿ ಕ್ಲಬ್ ಪುತ್ತೂರು ಪೂರ್ವದಿಂದ ನೆಹರೂನಗರ ಅಂಗನವಾಡಿಗೆ ಟೈಲ್ಸ್ ಅಳವಡಿಕೆ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಪೂರ್ವ ಇದರ ವತಿಯಿಂದ ನೆಹರೂನಗರದ ಅಂಗನವಾಡಿ ಕೇಂದ್ರದ ಒಳಗೆ ಟೈಲ್ಸ್ ಅಳವಡಿಕೆ ಮಾಡಲಾಗಿದ್ದು ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ರೋಟರಿ ಪೂರ್ವದ ಜಿಲ್ಲಾ ಗವರ್ನರ್ ಎಚ್.ಆರ್.ಕೇಶವ, ಉದ್ಘಾಟಿಸಿದರು. ರೋಟರಿ ಪೂರ್ವದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಅಸಿಸ್ಟೆಂಟ್ ಗವರ್ನರ್ ಪುರಂದರ ರೈ, ನಗರಸಭಾ ಸದಸ್ಯ ಕೆ. ದಿನೇಶ್ ಗೌಡ, ವಿದ್ಯುತ್ ಗುತ್ತಿಗೆದಾರ ಸೂರ್ಯನಾಥ್ ಆಳ್ವ, ನವೀನ್ ಕುಮಾರ್ ಶೆಟ್ಟಿ, ಶಶಿಧರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳ ಪೋಷಕರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ ರಮಾ, ಸಹಾಯಕಿ ಮೀನಾಕ್ಷಿ ಹಾಗೂ ಪುಟಾಣಿಗಳು ಉಪಸ್ಥಿತರಿದ್ದರು. ರೋಟರಿ ಪೂರ್ವದ ಕಾರ್ಯದರ್ಶಿ ರವಿಕುಮಾರ್ ರೈ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here