ಶುಭಾರಂಭ ಪ್ರಯುಕ್ತ 15% ಡಿಸ್ಕೌಂಟ್
50+ ಬ್ರಾಂಡ್ಗಳು, 5000+ ಡಿಸೈನ್ಗಳು
ಪುತ್ತೂರು: ಪುರುಷರ ಸಿದ್ದ ಉಡುಪುಗಳ ಮಾರಾಟ ಕ್ಷೇತ್ರದಲ್ಲಿ ಪ್ರಸಿದ್ದಿ ಪಡೆದ ವೈಟ್ ಟ್ಯಾಗ್ ಮಳಿಗೆ ಇದೀಗ ಮಹಿಳೆಯರ ಸಿದ್ದ ಉಡುಪುಗಳ ಮಳಿಗೆಯನ್ನು ಆರಂಭಿಸುವ ಮೂಲಕ ಮಹಿಳೆಯರಿಗೂ ಸ್ಪರ್ಧಾತ್ಮಕ ದರದ ಉತ್ತಮ ಉಡುಗೆಗಳನ್ನು ನೀಡಲು ಮುಂದಾಗಿದೆ.ಮಾ.11ರಂದು ಪುತ್ತೂರು ಬಸ್ ನಿಲ್ದಾಣದ ಬಳಿಯ ಶಾಲಿಮಾರ್ ಕಾಂಪ್ಲೆಕ್ಸ್ನಲ್ಲಿ ವೈಟ್ ಟ್ಯಾಗ್ ವುಮೆನ್ ನೂತನ ಶೋರೂಂ ಶುಭಾರಂಭಗೊಳ್ಳಲಿದೆ.
ಶಾಸಕ ಅಶೋಕ್ ಕುಮಾರ್ ರೈ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಜಿ.ಎಲ್ ಗ್ರೂಪ್ನ ಮುಖ್ಯಸ್ಥರಾದ ಬಲರಾಮ ಆಚಾರ್ಯ, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕುಂಬ್ರ ಕೆಐಸಿ ಅಧ್ಯಕ್ಷ ಕೆ.ಪಿ ಅಹ್ಮದ್ ಹಾಜಿ ಆಕರ್ಷಣ್, ಮರ್ಕಝುಲ್ ಹುದಾ ಅಕಾಡೆಮಿಕ್ ಆಫ್ ಥಿಯೋಲಜಿ ಇದರ ಅಧ್ಯಕ್ಷ ಡಾ.ಎಂಎಸ್ಎಂ ಅಬ್ದುಲ್ ರಶೀದ್ ಝೈನಿ, ಪುತ್ತೂರು ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಜಿ.ಪಂ ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್, ದಮ್ಮಾಮ್ ವಿಲ್ಡನ್ ಅರೇಬಿಕ್ ಗ್ರೂಪ್ನ ಸಿಇಓ ಶಾಹುಲ್ ಹಮೀದ್ ಉಜಿರೆ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಪುತ್ತೂರು ಸೀರತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಸುರಯ್ಯ, ಎಸ್ಡಿಪಿಐ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್, ಪುತ್ತೂರು ಜಿ.ಎಂ ಶಾಲಿಮಾರ್ ಕಾಂಪ್ಲೆಕ್ಸ್ನ ಶಮೀರ್ ಪರ್ಲಡ್ಕ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈಗಾಗಲೇ ಕಾಸರಗೋಡು, ಸುಳ್ಯ, ಪುತ್ತೂರಿನಲ್ಲಿ ಪುರುಷರ ಸಿದ್ದ ಉಡುಪುಗಳ ಬ್ರಾಂಡೆಡ್ ವಸ್ತ್ರಗಳನ್ನು ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಿ ಮನೆ ಮಾತಾಗಿರುವ ವೈಟ್ ಟ್ಯಾಗ್ನಲ್ಲಿ ಸಾವಿರಾರು ಡಿಸೈನ್ಗಳ ನೂರಾರು ಪ್ರಸಿದ್ದ ಬ್ರಾಂಡ್ಗಳ ಉಡುಗೆಗಳು ಲಭ್ಯವಿದೆ.
ಅಮೋಘ ಸಂಗ್ರಹ:
ವೈಟ್ ಟ್ಯಾಗ್ ವುಮೆನ್ ಮಳಿಗೆಯಲ್ಲಿ ಮಹಿಳೆಯರ ಉಡುಗೆಗಳ ಬೃಹತ್ ಸಂಗ್ರಹವಿದ್ದು, ವಿಭಿನ್ನ ವೆರೈಟಿ, ಕಲರ್ ಫುಲ್ ಮತ್ತು ರೀಸನೇಬಲ್ ದರದಲ್ಲಿ ಲಭ್ಯವಿದೆ. ಪ್ರತಿದಿನವೂ ನೂತನ ಸಂಗ್ರಹಗಳೊಂದಿಗೆ ಹೊಸತನವನ್ನು ನೀಡಲಿದ್ದು ಇದಿಗ 50 ಕ್ಕೂ ಹೆಚ್ಚಿನ ಬ್ರಾಂಡ್ಗಳಲ್ಲಿ 5000ಕ್ಕೂ ಮೇಲ್ಪಟ್ಟ ವಿವಿಧ ಡಿಸೈನ್ಗಳಲ್ಲಿ ಉಡುಪುಗಳು ಲಭ್ಯವಿದೆ. ಅಲ್ಲದೇ ಎಲ್ಲಾ ಬಗೆಯ ಬ್ರಾಂಡೆಡ್ ಲೇಡೀಸ್ ಪರ್ಫ್ಯೂಂ ಲಭ್ಯವಿದೆ. ಶುಭಾರಂಭದ ಪ್ರಯುಕ್ತ 15% ಡಿಸ್ಕೌಂಟ್ ಪ್ರಕಟಿಸಲಾಗಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ.