ಪುತ್ತೂರು: ಕೋಡಿಂಬಾಡಿಯಲ್ಲಿ ಸ್ಥಿರಾಸ್ತಿಗೆ ಅಕ್ರಮ ಪ್ರವೇಶಗೈದು ಗುಡ್ಡದ ಮಣ್ಣು ತೆಗೆದು ಉಡಾಫೆ ವರ್ತನೆ ಮಾಡಿರುವ ಕುರಿತು ಕೋಡಿಂಬಾಡಿಯ ಮೇಲಿನಹಿತ್ತಿಲು ಮಹಿಳೆಯೊಬ್ಬರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೋಡಿಂಬಾಡಿಯ ಮೇಲಿನಹಿತ್ತಿಲು ನಿವಾಸಿ ಮೋಹನ್ ಕುಮಾರ್ ಎಂಬವರ ಪತ್ನಿ ಪವಿತ್ರ ಮೋಹನ್ ಕುಮಾರ್ ಅವರು ದೂರು ನೀಡಿದವರಾಗಿದ್ದು, ನ್ಯಾಯಾಲಯದ ಆದೇಶದಂತೆ ಸ.ನಂ 71/1ಪಿ2 ರಲ್ಲಿ 0.50 ಸೆಂಟ್ಸ್ ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಪ್ರಿನ್ಸಿಪಾಲ್ ಸಿವಿಲ್ ನ್ಯಾಯಾಲಯ ಪುತ್ತೂರಿನಲ್ಲಿ ಒಎಸ್.273/2023ರಂತೆ ಸಿವಿಲ್ ಪ್ರಕರಣ ದಾಖಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ತಡೆಯಾಜ್ಞೆಯನ್ನ ಉಲ್ಲಂಘಿಸಿ ಕೋಡಿಂಬಾಡಿ ಗ್ರಾಮದ ಮೇಲಿನಹಿತ್ತಿಲು ಬಾರಿಕೆ ನಿವಾಸಿ ಲಕ್ಷ್ಮಣ ಗೌಡ ಅವರ ಪತ್ನಿ ಲೀಲಾವತಿ, ಪುತ್ರ ದೀಕ್ಷಿತ್, ಕೋಡಿಂಬಾಡಿಯ ಡೆಕ್ಕಾಜೆ ಶೇಖರ ಪೂಜಾರಿ ಅವರು ಅಕ್ರಮವಾಗಿ ಕೂಟ ಕಟ್ಟಿಕೊಂಡು ಬುಲ್ಡೋಜರ್ ಟಿಪ್ಪರ್ ವಾಹನವನ್ನು ಬಳಸಿಕೊಂಡು ಗುಡ್ಡ ಪ್ರದೇಶದ ಮಣ್ಣು ತೆಗೆದಿರುತ್ತಾರೆ. ಈ ಕುರಿತು ಪ್ರಶ್ನಿಸಿದಾಗ ಲೀಲಾವತಿ, ದೀಕ್ಷಿತ್, ಶೇಖರ ಪೂಜಾರಿ ಅವರು ಉಡಾಫೆಯಿಂದ ವರ್ತಸಿ ಗಲಾಟೆಗೆ ಮುಂದಾಗಿದ್ದಾರೆ. ಈ ಕುರಿತು ನ್ಯಾಯಾಲಯದ ಆದೇಶದವನ್ನು ಉಲ್ಲಂಘಿಸಿ ಗಲಾಟೆ ಮಾಡುವ ಸಮಾನ ಉದ್ದೇಶದಿಂದ ಅಕ್ರಮ ಕೂಟ ಕಟ್ಟಿ ನನ್ನ ಸ್ಥಿರಾಸಿಗೆ ಅಕ್ರಮ ಪ್ರವೇಶ ಮಾಡಿರುವ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.