ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಬೀರಿಗ ಕಾಲೊನಿಯ ಎ.14 ರಂದು ಬೆಳಿಗ್ಗೆ ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರ 133 ನೇ ಜನ್ಮ ದಿನಾಚರಣೆ ಆಚರಿಸಲಾಯಿತು.
ಕಾಲೋನಿಯ ಹಿರಿಯರಾದ ಗಿರಿಜಾ ಬೀರಿಗ ದೀಪ ಪ್ರಜ್ವಲನೆ ಮಾಡಿದರು. ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ನಾಗೇಶ್ ಟಿ ಎಸ್ ಅವರು ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮದಿನದಂದು ರಾಷ್ಟ್ರವು ಅವರನ್ನು ಸ್ಮರಿಸುತ್ತದೆ. “ಆರ್ ಎಸ್ ಎಸ್ ಸಂಪೂರ್ಣ ಸಮಾನತೆ ಮತ್ತು ಸಹೋದರತ್ವದಲ್ಲಿ ಸಾಗುತ್ತಿರುವುದನ್ನು ಕಂಡಿರುವ ಅಂಬೇಡ್ಕರ್ ಆರಂಭದಿಂದಲೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಾಗಾಗಿ ಇವತ್ತು ಸಂಘ ಎಲ್ಲರಲ್ಲೂ ಸಮಾನತೆಯನ್ನು ಕಾಣುತ್ತಿದೆ ಎಂದು ಹೇಳಿದರು.
ತಿಮ್ಮಪ್ಪ ಗೌಡ ಪುಳುವಾರು, ಯೋಗೀಶ್ ಮೇರ್ಲ, ಕೃಷ್ಣಪ್ರಸಾದ್ ಬೀರ್ನಹಿತ್ಲು, ಚಿದಾನಂದ ಬೀರಿಗ, ಪದ್ಮಚಂದ್ರ ಗೌಡ ಕೊಲ್ಯ, ತಿಮ್ಮಪ್ಪ ಪೂಜಾರಿ ಮೂಡಾಯುರು, ನಳಿನಿ ಕುಂಬುರ್ಗ, ತಿಮ್ಮಪ್ಪ ಕುಂಬುರ್ಗ, ದಿವ್ಯಾ ಕುಂಬುರ್ಗ, ಪುಷ್ಪಾವತಿ ಬೀರಿಗ, ಉಮೇಶ್ ಕುಂಬುರ್ಗ, ಶಿವಪ್ಪ ಕೊಲ್ಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.