ಪಂಚವಟಿಯಲ್ಲಿ ಶ್ರೀ ರಾಮನವಮಿ ಉತ್ಸವ

0

ಪುತ್ತೂರು: ಎ.17 ರಂದು ನರಿಮೊಗರು ಗ್ರಾಮದ ಮುಕ್ವೆ ಸಮೀಪದ ಬಲ್ನಾಡು ಸುಬ್ಬಣ್ಣ ಭಟ್ಟರ ನಿವಾಸ ಪಂಚವಟಿಯಲ್ಲಿ 51 ನೆಯ ವರ್ಷದ ಶ್ರೀ ರಾಮನವಮಿ ಉತ್ಸವವು ವಿಜ್ರಂಭಣೆಯಿಂದ ಜರುಗಿತು.

ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ, ಉಪನ್ಯಾಸಕ ಶ್ರೀ ಆದರ್ಶ ಗೋಖಲೆ ಆಧ್ಯಾತ್ಮಿಕ ಚಿಂತನೆ ನಡೆಸಿಕೊಟ್ಟರು. ರಾಮಾಯಣದಲ್ಲಿ ಕಾಣಸಿಗುವ ಆದರ್ಶಗಳನ್ನು ನಮ್ಮ ಮಕ್ಕಳಿಗೆ ಮನದಟ್ಟು ಮಾಡುವತ್ತ ನಾವು ಗಮನ ಕೊಡಬೇಕಾಗಿದೆ. ರಾಮನಾಮದ ಮಹತ್ವವನ್ನು ಅವರಿಗೆ ತಿಳಿಸಬೇಕು ಎಂದರು. ಈ ಸಂಧರ್ಭದಲ್ಲಿ ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ವೇದವ್ಯಾಸ ರಾಮಕುಂಜ ಇವರನ್ನು ವಿಶೇಷವಾಗಿ ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಿಕ್ಷಕಿ, ಸಾಹಿತಿ ಕವಿ ಅಡೂರು ವಹಿಸಿದ್ದರು. ಕೃತ್ತಿಕಾ ಹಾಗೂ ಚೈತ್ರಿಕಾ ಪ್ರಾರ್ಥಿಸಿದರು. ಪ್ರಸನ್ನ ಭಟ್ಟರು ಸ್ವಾಗತಿಸಿದರು. ಸಾಯಿಲಕ್ಷ್ಮಿ ಅಭ್ಯಾಗತರ ಪರಿಚಯವನ್ನು ವಾಚಿಸಿದರು. ಸಾಯಿಸುಬ್ರಹ್ಮಣ್ಯ ವಂದಿಸಿದರು. ಮಹಾಮಂಗಳಾರತಿಯ ನಂತರ ಭೋಜನ ಪ್ರಸಾದ ವಿತರಿಸಲಾಯಿತು.

LEAVE A REPLY

Please enter your comment!
Please enter your name here