ಚುನವಣಾ ವೀಕ್ಷಕರಾದ ಐಎಎಸ್ ಅಧಿಕಾರಿ ಅಕಾಂಕ್ಷ ರಂಜನ್ ಪರಿಶೀಲನೆ
ಪುತ್ತೂರು: ಎ.26ರಂದು ನಡೆಯಲಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಚುನಾವಣಾ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಚುನಾವಣೆ ಶಾಖೆಯ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ 2ನೇ ಹಂತದ ಅಂತಿಮ ತರಬೇತಿ ಕಾರ್ಯಕ್ರಮ ನಡೆದಿದೆ. ಇದರ ಜೊತೆಗೆ ಚುನಾವಣಾ ವೀಕ್ಷಕರಾಗಿ ಜಾರ್‌ಖಂಡ್‌ನ ಐಎಎಸ್ ಅಧಿಕಾರಿ ಅಕಾಂಕ್ಷ ರಂಜನ್ ಅವರು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಜುಬಿನ್ ಮೊಹಪಾತ್ರ ಅವರು ತಿಳಿಸಿದ್ದಾರೆ.
ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ, ಚುನಾವಣೆ ಶಾಖೆಯ ಎಲ್ಲಾ ಅಧಿಕಾರಿ ವರ್ಗದವರು ಮತ್ತು ಸಿಬ್ಬಂದಿಗಳು ಸೇರಿ ಸುಮಾರು 1300ಕ್ಕೂ ಅಧಿಕ ಮಂದಿಗೆ ತರಬೇತಿ ನೀಡಲಾಗಿದೆ. ಅವರಲ್ಲಿರುವ ಪ್ರಶ್ನೆಗಳು ನಿವಾರಣೆಯಾಗಿದೆ. ಇದರ ಜೊತೆಗೆ ಚುನಾವಣಾ ವೀಕ್ಷಕರಾಗಿ ಆಗಮಿಸಿದ ಜಾರ್‌ಖಂಡ್‌ನ ಐಎಎಸ್ ಅಧಿಕಾರಿ ಆಕಾಂಕ್ಷ ರಂಜನ್ ಅವರು ಪುತ್ತೂರಿನಲ್ಲಿರು ಚುನಾವಣೆ ಮತಗಟ್ಟೆಗಳನ್ನು ಮತಯಂತ್ರಗಳನ್ನು ಇರಿಸಿದ ಭದ್ರತಾ ಕೊಠಡಿ ಮತ್ತು ತರಬೇತಿಗಳನ್ನು ವೀಕ್ಷಣೆ ಮಾಡಿ ಎಲ್ಲವು ಸರಿ ಇದೆ ಎಂದು ಹೇಳಿದ್ದಾರೆ.
ಎ.24ರ ಸಂಜೆಯಿಂದ ಎ.26ರ ರಾತ್ರಿ ತನಕ ಪ್ರತಿಬಂಧಕಾಜ್ಞೆ:
ಎ.26ರಂದು ನಡೆಯಲಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಮುಕ್ತ ಮತ್ತು ನ್ಯಾಯೋಚಿತ ಮತದಾನಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ಎ.26ರ ಸಂಜೆ ಗಂಟೆ 6 ರಿಂದ ಎ.26ರ ರಾತ್ರಿ 10 ಅಂದರೆ ಮತದಾನದ ಪ್ರಕ್ರಿಯೆ ಮುಗಿಯುವ ತನಕ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಈ ಸಂದರ್ಭ ಸಾರ್ವಜನಿಕರಿಗೆ ಮೂಡಿರುವ ಪ್ರಶ್ನೆಗೆ ಸಂಬಂಧಿಸಿ ಖಾಸಗಿ ಕಾರ್ಯಕ್ರಮ ಅನುಮತಿ ಪಡೆದು ಮಾಡಬಹುದು. ಕಾನೂನು ವ್ಯವಸ್ತೆ ಸಂಚಾರಕ್ಕೆ ಮತ್ತು ಮತದಾನಕ್ಕೆ ಹೋಗುವವರಿಗೆ ತೊಂದರೆ ಆಗದಂತೆ ಮಾಡಬಹುದು. ಆದರೆ ಅದರಲ್ಲೂ ಆರೇಳು ಶರತ್ತುಗಳು ಇವೆ. ಅದನ್ನು ಪಾಲಿಸಬೇಕು ಎಂದ ಜುಬಿನ್ ಮೊಹಪಾತ್ರ ಅವರು ಗುಂಪು ಮೆರವಣಿಗೆ ನಿಷೇಧಿಸಲಾಗಿದೆ.
ಅಂಚೆ ಮತದಾನಕ್ಕೆ ಸೌಲಭ್ಯ ಕೇಂದ್ರ ತೆರೆಯಲಾಗಿದೆ:
ಬೇರೆ ಬೇರೆ ಜಿಲ್ಲೆಯಿಂದ ಬಂದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿವವರಿಗೆ ಅಂಚೆ ಮತದಾನ ಪ್ರಕ್ರಿಯೆ ನಡೆಯಲಿದೆ. ಅದಕ್ಕಾಗಿ ಎ.21 ಮತ್ತು 22ರಂದು ಪುತ್ತೂರು ತಾಲೂಕು ಆಡಳಿತ ಸೌಧದ ತರಬೇತಿ ಸಭಾಂಗಣದಲ್ಲಿ ಸೌಲಭ್ಯ ಕೇಂದ್ರ ತೆರೆಯಲಾಗಿದೆ. ಪುತ್ತೂರಿಗೆ ಸಂಬಂಧಿಸಿ 116 ಮಂದಿ ಅಂಚೆ ಮತದಾನ ಮಾಡಲಿದ್ದು, ಅದರಲ್ಲಿ 98 ಮಂದಿ ಪುತ್ತೂರಿನಲ್ಲೇ ಕೆಲಸ ಮಾಡುವವರು. 18 ಮಂದಿ ಬಂಟ್ವಾಳ, ಸುಳ್ಯ, ಮೂಡಬಿದ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅವರು ಪುತ್ತೂರು ಅಂಚೆ ಪತ್ರದ ಮೂಲಕ ಮತದಾನ ಸೌಲಭ್ಯ ಒದಗಿಸಲಾಗಿದೆ. ಈ ನಿಟ್ಟನಲ್ಲಿ ಸೌಲಭ್ಯ ಕೇಂದ್ರದಿಂದ ಅವರು ಅರ್ಜಿ ನೀಡಬಹುದು ಎಂದು ಸಹಾಯಕ ಚುನಾವಣಾಧಿಕಾರಿ ಜುಬಿನ್ ಮೊಹಪಾತ್ರ ಹೇಳಿದರು.