ಕೆಮ್ಮಿಂಜೆ ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀರಾಮ ದೇವರ ಪ್ರತಿಷ್ಠೆ ಕಲಶಾಭಿಷೇಕ

0

ನಾಳೆ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ

ಪುತ್ತೂರು: ಕೆಮ್ಮಿಂಜೆ ಶ್ರೀಷಣ್ಮುಖ ಸುಬ್ರಹ್ಮಣ್ಯ, ಶ್ರೀಮಹಾವಿಷ್ಣು ದೇವಸ್ಥಾನದ ವಠಾರದಲ್ಲಿರುವ ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀರಾಮದೇವರ ಪ್ರತಿಷ್ಠೆ ಹಾಗೂ ಸಾನಿಧ್ಯ ಕಲಶಾಭಿಷೇಕ ಎ.23 ಮತ್ತು 24ರಂದು ನಡೆಯಲಿದ್ದು ಇದರ ಪ್ರಯುಕ್ತ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ಎ.22ರಂದು ನಡೆಯಲಿದೆ.


ಬೆಳಿಗ್ಗೆ 11 ಗಂಟೆಗೆ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಿಂದ ಕೆಮ್ಮಿಂಜೆ ಭಜನಾ ಮಂದಿರಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟಣೆ ತಿಳಿಸಿದೆ.

ಏ.23:ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ:
ಏ.23ರಂದು ರಾತ್ರಿ ಗಂಟೆ 7 ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣೆ ಸಹಿತ ವಿವಿಧ ಧಾರ್ಮಿಕ ವಿಧಿ ವಿಧಾನ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4.30ರಿಂದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಧೀಶಕ್ತಿ ಮಹಿಳಾ ಯಕ್ಷಬಳಗ ತೆಂಕಿಲ ಪುತ್ತೂರು ಇವರಿಂದ ಕುಂಬಳೆ ಪಾರ್ತಿಸುಬ್ಬ ವಿರಚಿತ ಯಕ್ಷಗಾನ ತಾಳಮದ್ದಳೆ ‘ವಾಲಿವಧೆ’ ನಡೆಯಲಿದೆ. ಸಂಜೆ 6 ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹಿರಿಯರು ದೀಪ ಪ್ರಜ್ವಲಿಸಲಿದ್ದಾರೆ. ಈ ಸಂದರ್ಭ ನಿತ್ಯ ಕರಸೇವಕರು ಮತ್ತು ಕಟ್ಟಡದ ಕೆಲಸ ಕಾರ್ಯಗಳನ್ನು ನಿರ್ವಹಿಸಿದವರಿಗೆ ಹಾಗು ಶಿಲ್ಪಿಗಳಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಭಾಸ್ಕರ್ ರಾವ್ ಕೆ ಮರೀಲು ಮತ್ತು ವಿ.ಶಾಮಣ್ಣ ಅವರಿಗೆ ವಿಶೇಷ ಗೌರವ ಸಮರ್ಪಣೆ ಮಾಡಲಾಗುವುದು.

LEAVE A REPLY

Please enter your comment!
Please enter your name here