ಕುಂಬ್ರ ಮರ್ಕಝುಲ್ ಹುದಾ ಸಿಲ್ವರ್ ಜ್ಯುಬಿಲಿ ಪೂರ್ವಭಾವಿಯಾಗಿ “ವೆಲ್ ಕಂ ಮೀಟ್” ಸಭೆ

0

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಕ್ಯಾಂಪಸ್ ನಲ್ಲಿ ಮೇ.16ರಂದು ನಡೆಯಲಿರುವ ಸಂಸ್ಥೆಯ ಸಿಲ್ವರ್ ಜ್ಯುಬಿಲಿ ಅಭಿಯಾನದ ಉದ್ಘಾಟನಾ ಸಮ್ಮೇಳನ ಮತ್ತು ಅಲ್ ಮಾಹಿರಾ ಪದವಿ ಪ್ರದಾನ ಸಮಾವೇಶದ ಪೂರ್ವ ಭಾವಿಯಾಗಿ ಸುನ್ನೀ ಸಂಘ ಕುಟುಂಬಗಳ ಮತ್ತು ಮರ್ಕಝುಲ್ ಹುದಾ ಅಭಿಮಾನಿಗಳ ಸಭೆ “ವೆಲ್ ಕಂ ಮೀಟ್” ಕುಂಬ್ರ ಮರ್ಕಝ್ ಕ್ಯಾಂಪಸ್ ನಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷರಾದ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ ವಹಿಸಿದರು. ಸಂಸ್ಥೆಯ ಉಪಾಧ್ಯಕ್ಷ ಎಂ ಎಸ್ ಎಂ ಅಬ್ದುಲ್ ರಶೀದ್ ಝೈನಿ ಪ್ರಾಸ್ಥಾವಿಕ ಮಾತುಗಳನ್ನಾಡಿ ಸಮ್ಮೇಳನದ ಪೂರ್ಣ ಚಿತ್ರಣವನ್ನು ಸಭೆಗೆ ನೀಡಿದರು. ಮೂಡಡ್ಕ ಮದೀನತುಲ್ ಮುನವ್ವರ ಎಜುಕೇಶನ್ ಸಂಸ್ಥೆಯ ಶರೀಅತ್ ವಿಭಾಗದ ಪ್ರಾಂಶುಪಾಲರಾದ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ಸಭೆ ಉದ್ಘಾಟಿಸಿದರು. ಮರ್ಕಝ್ ಶರೀಅತ್ ವಿಭಾಗದ ಪ್ರಾಂಶುಪಾಲರಾದ ವಳವೂರು ಮುಹಮ್ಮದ್ ಸಅದಿ, ಶರೀಅತ್ ಮುದರ್ರಿಸ್ ಜಲೀಲ್ ಸಖಾಫಿ, ಅಬೂಶಝ ಅಬ್ದುಲ್ ರಝಾಕ್ ಖಾಸಿಮಿ, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಸ್ವಾಲಿಹ್ ಹನೀಫಿ ಮಾತನಾಡಿದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ, ಕೋಶಾಧಿಕಾರಿ ಯೂಸುಫ್ ಗೌಸಿಯ ಸಾಜ, ಯೂಸುಫ್ ಹಾಜಿ ಕೈಕಾರ, ಯೂಸುಫ್ ಮೈದಾನಿಮೂಲೆ, ಆಶಿಕ್ ಅಕ್ತರ್, ಮರ್ಕಝ್ ಪದವಿ ವಿಭಾಗದ ಪ್ರಾಂಶುಪಾಲರಾದ ಮನ್ಸೂರು ಕಡಬ, ಕೆಎಂಜೆ ಪ್ರಮುಖರಾದ ಇಕ್ಬಾಲ್ ಬಪ್ಪಳಿಗೆ, ಜಲೀಲ್ ಹಾಜಿ ಕುಂಬ್ರ, ಹಾಶಿಮಿ ಮಂಜ, ಕೆ.ಜಿ.ಎನ್ ಮುಹಮ್ಮದ್ ರೆಂಜಲಾಡಿ, ಮಂಜ ಉರೂಸ್ ಸ್ವಾಗತ ಸಮಿತಿ ಕನ್ವಿನರ್ ಉವೈಸ್ ಬೀಟಿಗೆ, ಮುಹಮ್ಮದ್ ಕುಂಞಿ ಕುಂಬ್ರ, ಮಜೀದ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here