ಮೇ.11ರಿಂದ 14ವರೆಗೆ ʼಅಟ್ಟಾಮುಟ್ಟಾʼ ಮಕ್ಕಳ ಬೇಸಿಗೆ ಶಿಬಿರ

0

ಪುತ್ತೂರು: ಸಂಘಟನೆ, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸಾರ ಜೋಡುಮಾರ್ಗ ಸಂಸ್ಥೆಯ ನೇತೃತ್ವದಲ್ಲಿ ನಾಲ್ಕು ದಿನಗಳ ʼಅಟ್ಟಾಮುಟ್ಟಾʼ ಮಕ್ಕಳ ಬೇಸಿಗೆ ಶಿಬಿರವು ಮೇ.11ರಿಂದ 14 ರವರೆಗೆ ಪುತ್ತೂರು ಲಯನ್ಸ್‌ ಹಾಲ್‌ ನಲ್ಲಿ ನಡೆಯಲಿದೆ.

ಬೆಳಿಗ್ಗೆ 9.30ರಿಂದ ಸಂಜೆ 4ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಯೋಗ, ರಂಗಾಟಗಳು, ಕರಕುಶಲ ಕಲೆ, ಚಿತ್ರಕಲೆ, ವಿಜ್ಞಾನ ಲೋಕ, ಹೊರಸಂಚಾರ, ಕಥೆಗಳ ಪ್ರಪಂಚ, ಶಿಶುಗೀತೆ, ಜಾಗೃತಿ ಗೀತೆ ಹಾಗೂ ರಂಗ ಚಟುವಟಿಕೆಗಳನ್ನು ನಡೆಸಲಾಗುವುದು. ಶಿಬಿರದ ಭಾಗವಾಗಿ ಮಕ್ಕಳಿಂದ ಪುತ್ತೂರು ನಗರ ಪೊಲೀಸ್‌ ಠಾಣೆ ಹಾಗೂ ಪುತ್ತೂರು ಸಂಚಾರ ಪೊಲೀಸ್‌ ಠಾಣೆಗಳ ಭೇಟಿ ನಡೆಸಲಾಗುವುದು. ಮೇ.13ರ ಸೋಮವಾರ ಅಪರಾಹ್ನ 2ಗಂಟೆಯಿಂದ 4 ಗಂಟೆಯವರೆಗೆ ಕಿಲ್ಲೆ ಮೈದಾನ ಸಮೀಪ “ಮಕ್ಕಳ ಸಂತೆ”ಯನ್ನೂ ಆಯೋಜಿಸಲಾಗಿದೆ.
ಜ್ಞಾನ ಬೆಳಕು ಬಳಗ, ಲಯನ್ಸ್‌ ಕ್ಲಬ್‌ ಪುತ್ತೂರು ಹಾಗೂ ರೋಟರಿ ಪುತ್ತೂರು ಎಲೈಟ್‌ ಶಿಬಿರದ ಆಯೋಜನೆಗೆ ನೆರವು ನೀಡಲಿದೆ. 8ರಿಂದ 14 ವರ್ಷದೊಳಗಿನ ಆಸಕ್ತ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ ಎಂದು ಸಂಸಾರ ಜೋಡುಮಾರ್ಗ ತಂಡದ ನಿರ್ದೇಶಕ ಮೌನೇಶ ವಿಶ್ವಕರ್ಮ (7899161098) ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here