ಮಜ್ಜಾರಡ್ಕ: ಬೇಸಿಗೆ ಶಿಬಿರ ಸಮಾರೋಪ, ಪುಸ್ತಕ ವಿತರಣೆ, ಸಹಾಯ ನಿಧಿ ಚೆಕ್ ವಿತರಣೆ

0

ಪುತ್ತೂರು: ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ, ಗೌರವರ್ಪಣೆ ಹಾಗೂ ಮಕ್ಕಳಿಗೆ ಪುಸ್ತಕ ವಿತರಣೆ, ಧನ ಸಹಾಯ ವಿತರಣೆ ಕಾರ್ಯಕ್ರಮ ಜೂ.2ರಂದು ಮಜ್ಜಾರಡ್ಕ ಶ್ರೀ ವಿಷ್ಣು ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಉಪಾಧ್ಯಕ್ಷ ಯತೀಶ್ ಕೋಡಿಯಡ್ಕ ವಹಿಸಿದ್ದರು. ಅರಿಯಡ್ಕ ಅರಣ್ಯ ಗ್ರಾಮ ಸಮಿತಿ ಅಧ್ಯಕ್ಷ ಲೋಕೇಶ್ ರೈ ಅಮೈ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಸಂಘಟನೆಯ ಸಮಾಜಮುಖಿ ಕಾರ್ಯಕ್ರಮಗಳಿಗೆ ಶುಭಹಾರೈಸಿದರು. ಅತಿಥಿಗಳಾಗಿ ಆಗಮಿಸಿದ ಉದ್ಯಮಿ ಅಜಿತ್ ರೈ ದೇರ್ಲ ಇವರು ಸಂಘಟನೆಯ ನಿರಂತರ ಕಾರ್ಯಕ್ರಮಕ್ಕೆ ಹರ್ಷ ವ್ಯಕ್ತಪಡಿಸಿ, ಮಕ್ಕಳ ಬೇಸಿಗೆ ಶಿಬಿರದಲ್ಲಿ ಕುಣಿತ ಭಜನೆ ಹಾಗೂ ಮಕ್ಕಳಿಗೆ ಪೂರ್ವಕವಾದ ಕಾರ್ಯಕ್ರಮ ನೀಡಿದ ಸಂಘಟನೆಗೆ ಹೆತ್ತವರ ಹಾಗೂ ಮಕ್ಕಳ ಪರವಾಗಿ ಅಭಿನಂದನೆ ಸಲ್ಲಿಸಿದರು.

ತುಳು ಲಿಪಿ ಶಿಕ್ಷಕಿ ಚಿತ್ರಾಕ್ಷಿ ತೆಗ್ಗು, ಪುತ್ತೂರು ತಾಲೂಕು ಮಹಿಳಾ ಬಿಲ್ಲವ ಕಾರ್ಯಕಾರಿಣಿ ಸದಸ್ಯೆ ಯಶೋದಾ ಮಜ್ಜಾರ್, ಕುಣಿತ ಭಜನೆಯ ಶಿಕ್ಷಕ ಸದಾನಂದ ಆಚಾರ್ಯ ಕಾಣಿಯೂರು ಸಂದರ್ಭಬೋಚಿತವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳಿಂದ ಕಾಲೇಜು ವಿದ್ಯಾರ್ಥಿಗಳವರೆಗೆ ಸಂಘಟನೆ ವತಿಯಿಂದ ಪುಸ್ತಕ ವಿತರಣೆ ಮಾಡಲಾಯಿತು.


ಗೌರವಾರ್ಪಣೆ /ಸಹಾಯ ನಿಧಿ ವಿತರಣೆ
ಕುಣಿತ ಭಜನೆಯ ಗುರುಗಳಾದ ಸದಾನಂದ ಆಚಾರ್ಯ ಕಾಣಿಯೂರು ಹಾಗೂ ತುಳು ಲಿಪಿ ಶಿಕ್ಷಕಿ ಚಿತ್ರಾಕ್ಷಿ ತೆಗ್ಗು, ಇವರಿಗೆ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಇತ್ತೀಚೆಗೆ ಬೈಕ್ ಅಪಘಾತದಲ್ಲಿ ನಿಧನರಾದ ಶಾಂತಿಗೋಡು ನಿವಾಸಿ ಪ್ರಸಾದ್ ಇವರಿಗೆ ಸಂಘಟನೆ ಸದಸ್ಯ ಯತೀಶ್ ಕಠಾರ ಇವರ ಸಹಾಯ ನಿಧಿಯಿಂದ ಚೆಕ್ ವಿತರಣೆ ಮಾಡಲಾಯಿತು.

ಚೇತನ್ ಕೊಡಿಮರ ಇವರ ತಂದೆ, ತಾಯಿ ಇಬ್ಬರು ಅನಾರೋಗ್ಯಕ್ಕೀಡಾಗಿದ್ದು ಇವರಿಗೂ ಸಂಘಟನೆ ವತಿಯಿಂದ ಆರ್ಥಿಕ ಸಹಾಯ ಮಾಡಲಾಯಿತು. ಲಘು ಉಪಹಾರದ ವ್ಯವಸ್ಥೆಯನ್ನು ಸಂಘಟನೆ ಮಾಜಿ ಅಧ್ಯಕ್ಷ ಉದಯ ಸ್ವಾಮಿನಗರ, ಸತೀಶ್ ಮಜ್ಜಾರ್, ಸಿಹಿ ತಿಂಡಿಯನ್ನು ಸತೀಶ್ ರೈ ದೇರ್ಲ, ಅಜಿತ್ ರೈ ದೇರ್ಲ ನೀಡಿದರು. ಜಿಲ್ಲಾ ಪ್ರಶಸ್ತಿ ಪುರಸ್ಕೃತರು ಮತ್ತು ಕಾರ್ಯಕ್ರಮದ ಸಂಯೋಜಕರು, ಸಂಘಟನೆಯ ಸಂಘಟಕ ಆಗಿರುವ ರಾಜೇಶ್ ಕೆ ಮಯೂರ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯದರ್ಶಿ ಹರೀಶ್ ಸ್ವಾಮಿ ನಗರ ಪ್ರಾರ್ಥಿಸಿದರು. ಯುವಶಕ್ತಿ ಬಳಗದ ಪ್ರದಾನ ಕಾರ್ಯದರ್ಶಿ ಭರತ್ ಓಲ್ತಾಜೆ ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು.


ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದ ಮಕ್ಕಳಿಗೆ ಪುಸ್ತಕ ವಿತರಣೆ, ಬೈಕ್ ಅಪಘಾತದಲ್ಲಿ ನಿಧನಗೊಂಡ ಕುಟುಂಬಕ್ಕೆ ಸಹಾಯ ನಿಧಿ ಚೆಕ್ ವಿತರಣೆ, ಅನಾರೋಗ್ಯದಲ್ಲಿರುವ ಕುಟುಂಬಕ್ಕೆ ಧನ ಸಹಾಯ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here