ವಿಟ್ಲ ಬಸವನ ಗುಡಿಯಲ್ಲಿರುವ ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಸುಮಾರು 1250 ವಿದ್ಯಾರ್ಥಿಗಳನ್ನೊಳಗೊಂಡು ಶಿಶುಮಂದಿರ ದಿಂದ 10ನೇ ತರಗತಿಯವರೆಗೆ, ಸುಮಾರು 38ವರ್ಷಗಳಿಂದ ಶಿಕ್ಷಣ ನೀಡುತ್ತಿರುವ ವಿದ್ಯಾಸಂಸ್ಥೆಯಾಗಿದೆ. ಇಂದು ಅಸಂಖ್ಯಾತ ವಿದ್ಯಾರ್ಥಿಗಳನ್ನು ವೈದ್ಯಕೀಯ, ತಾಂತ್ರಿಕ, ವ್ಯವಹಾರಿಕ ಕ್ಷೇತ್ರಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ನೀಡಿದ ಕೀರ್ತಿಯನ್ನು ಪಡೆದಿದೆ. ಪ್ರತಿ ವರ್ಷ ಹತ್ತನೇ ತರಗತಿಯ ಫಲಿತಾಂಶದಲ್ಲಿ 100%ಫಲಿತಾಂಶ ಗಿಟ್ಟಿಸಿ ರಾಜ್ಯಮಟ್ಟದಲ್ಲಿ ಸ್ಥಾ ಗಳಿಸುತಿದೆ. ಅದ್ಭುತ ಮೂಲಭೂತ ಸೌಕರ್ಯಗಳ ಜೊತೆ ಈ ವರ್ಷದಿಂದ ಶೂನ್ಯ ವಿದ್ಯುತ್ ಬಿಲ್ ಪಡೆಯುವ “ಗ್ರೀನ್ ಕ್ಯಾಂಪಸ್” ಮಾಡಿಸಿಕೊಂಡು ದೇಶದ ಬೆಳವಣಿಗೆಗೆ ತನ್ನ ಕೊಡುಗೆ ನೀಡಿದೆ.
ನೈಸರ್ಗಿಕತೆಯ ಪೂರ್ಣ ಬಳಕೆ ಮಾಡಿಕೊಳ್ಳುವುದರೊಂದಿಗೆ ಸುಸ್ಥಿರ ಅಭಿವೃದ್ಧಿಯನ್ನು ಕಾಯ್ದುಕೊಂಡಿದೆ. ಸುಮಾರು15.5 ಲಕ್ಷ ವೆಚ್ಚದಲ್ಲಿ 41 ಸೌರ ಶಕ್ತಿ ಪ್ಯಾನೆಲ್ ಗಳನ್ನು ಅಳವಡಿಸಿಕೊಂಡು ಸುಮಾರು 26 ಕಿಲೋ ವ್ಯಾಟ್ ಸೌರ ಶಕ್ತಿಯನ್ನು ಉತ್ಪಾದಿಸುವುದಲ್ಲದೆ, ಹೆಚ್ಚುವರಿ ಸೋಲಾರ್ ಶಕ್ತಿಯನ್ನು ವಿದ್ಯುತ್ ಮಂಡಳಿಗೆ ವರ್ಗಾಯಿಸುವ ತಂತ್ರಜ್ಞಾನ ಹೊಂದಿದೆ. ಇದೀಗ ವಿಟ್ಲದಂತಹ ಪ್ರದೇಶದಲ್ಲಿ ಇಂತಹ ವ್ಯವಸ್ಥೆಯುಳ್ಳ ಏಕೈಕ ಸಂಸ್ಥೆಯೆಂಬ ಖ್ಯಾತಿಗೆ ಭಾಜನವಾಗಿದೆ. ಇದರಿಂದ ತಿಂಗಳ ವಿದ್ಯುತ್ ಬಿಲ್ ಶೂನ್ಯವಾಗಲಿದ್ದು, ವರ್ಷಕ್ಕೆ ಸುಮಾರು 2,25,000ರೂಪಾಯಿಯ ವಿದ್ಯುತ್ ಉಳಿತಾಯವಾಗಲಿದೆ. ವಿಠ್ಠಲ್ ಜೇಸಿಸ್ ಎಜುಕೇಶನ್ ಸೊಸೈಟಿಯಡಿಯಲ್ಲಿ ನಡೆಯುತ್ತಿರುವ ಈ ಸಂಸ್ಥೆಯು ಸಮಾಜದ ಆಭಿವೃದ್ಧಿಯ ಬಗೆಗಿನ ಕಾಳಜಿ , ಸಂಸ್ಕಾರ, ಪರಿಸರ ರಕ್ಷಣೆಯ ಶಿಕ್ಷಣಕ್ಕೆ ಒತ್ತು ನೀಡುವಲ್ಲಿ ಆಸಕ್ತಿ ವಹಿಸುತ್ತಿರುವುದು ಸ್ಥಳೀಯ ಹಾಗೂ ಸಮೀಪದ ಗ್ರಾಮೀಣ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.