ಶಾಲಾ ನಾಯಕನಾಗಿ ಬಿ.ಆರ್.ಸೂರ್ಯ, ನಾಯಕಿಯಾಗಿ ಅನಘಾ ವಿ.ಪಿ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಶಾಲಾ ಸಂಸತ್ತು ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಪ್ರಕ್ರಿಯೆ ನಡೆಯಿತು. ನಾಲ್ಕನೇ ತರಗತಿಯಿಂದ ಹತ್ತನೆ ತರಗತಿಯವರೆಗಿನ ವಿದ್ಯಾರ್ಥಿಗಳಿಂದ ಒಟ್ಟು 9 ಮಂತ್ರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಮತದಾನ ನಡೆಸಲಾಯಿತು.
ಕುಂಬ್ರ ನಿವಾಸಿಗಳಾದ ರಂಗನಾಥ್ ಬಿ ಜಿ ಮತ್ತು ಪ್ರೇಮಕುಮಾರಿ ಬಿ ಆರ್ ದಂಪತಿಗಳ ಪುತ್ರ 10ನೇ ತರಗತಿಯ ವಿದ್ಯಾರ್ಥಿ ಬಿ.ಆರ್.ಸೂರ್ಯ ಅವಿರೋಧವಾಗಿ ಶಾಲಾ ನಾಯಕನಾಗಿ ಆಯ್ಕೆಯಾಗಿದರೆ, ಪೋಳ್ಯ ನಿವಾಸಿಗಳಾದ ವೆಂಕಟರಾಜ ಕೆ ಎಂ ಮತ್ತು ಶ್ರೀವಿದ್ಯಾ ಕೆ ದಂಪತಿಗಳ ಪುತ್ರಿ 10ನೇ ತರಗತಿಯ ಅನಘ ವಿ ಪಿ ಶಾಲಾ ನಾಯಕಿಯಾಗಿ ಆಯ್ಕೆಯಾದರು.
9ನೇ ತರಗತಿಯ ತನ್ವಿ ಎ ರೈ ಶಿಸ್ತು ಪಾಲನಾ ಮಂತ್ರಿಯಾಗಿ, 9ನೇ ತರಗತಿಯ ಸಮೃದ್ಧ್ ಎಲ್ ಶೆಟ್ಟಿ ಗೃಹ ಮಂತ್ರಿಯಾಗಿ, 8ನೇ ತರಗತಿಯ ಸಂಪ್ರೀತ್ ವಿ ಕ್ರೀಡಾ ಮಂತ್ರಿಯಾಗಿ, 9ನೇ ತರಗತಿಯ ರಕ್ಷಾ ಎಸ್ ಎಸ್ ಸಾಂಸ್ಕೃತಿಕ ಮಂತ್ರಿಯಾಗಿ, 8ನೇ ತರಗತಿಯ ಸಾತ್ವಿಕ್ ಜಿ ಶಿಕ್ಷಣ ಮಂತ್ರಿಯಾಗಿ, 8ನೇ ತರಗತಿಯ ವಂಶಿಕ ರೈ ಸಂವಹನ ಮಂತ್ರಿಯಾಗಿ, 7ನೇ ತರಗತಿಯ ಶ್ರೀನಿಕ್ ಎಸ್ ಆಚಾರ್ಯ ನೀರಾವರಿ ಮಂತ್ರಿಯಾಗಿ, 7ನೇ ತರಗತಿಯ ಮನಿಷ್ ಕಜೆ ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ ಆಯ್ಕೆಯಾದರು. ವಿರೋಧ ಪಕ್ಷದ ನಾಯಕಿಯಾಗಿ 10ನೇ ತರಗತಿಯ ಹಿತಾಲಿ ಪಿ ಶೆಟ್ಟಿ ಆಯ್ಕೆಯಾದರು.ಮಕ್ಕಳಿಂದ ಮತದಾನ ಕಾರ್ಯ ಸುಸೂತ್ರವಾಗಿ ನಡೆಯುವಲ್ಲಿ ಶಾಲಾ ಶಿಕ್ಷಕ ರಮೇಶ್ ಮತ್ತು ಶಾಲಾ ಶಿಕ್ಷಕಿ ಮಲ್ಲಿಕಾರವರು ಕಾರ್ಯನಿರ್ವಹಿಸಿದರು.