




ಆಲಂಕಾರು: ದ.ಕ. ಆರ್ಟ್ ಆಂಡ್ ಸ್ಫೋರ್ಟ್ ಎಸೋಸಿಯೇಷನ್ ವತಿಯಿಂದ ಸುಳ್ಯದಲ್ಲಿ ನಡೆದ ನ್ಯಾಷನಲ್ ಲೆವೆಲ್ ಒಪನ್ ಕರಾಟೆ ಚಾಂಪಿಯನ್ 2025ರ ಸ್ಪರ್ಧೆಯಲ್ಲಿ ಆಲಂಕಾರು ಶ್ರೀ ಭಾರತಿ ಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡಿದ್ದಾರೆ.



ಹರ್ಷಿತ್-ಕಮಿಟೆಯಲ್ಲಿ ದ್ವಿತೀಯ, ಕಟಾದಲ್ಲಿ ತೃತೀಯ, ಡಿವಿನ್- ಕಮಿಟೆಯಲ್ಲಿ ಪ್ರಥಮ, ಕಟಾದಲ್ಲಿ ಪ್ರಥಮ, ಗೀತೇಶ್-ಕಮಿಟೆಯಲ್ಲಿ ತೃತೀಯ, ಕಟಾದಲ್ಲಿ ತೃತೀಯ, ಯದ್ವೀತ್ ಕೆ.ಪಿ.-ಕಟಾದಲ್ಲಿ ತೃತೀಯ, ಲತೇಶ್-ಕಟಾದಲ್ಲಿ ತೃತೀಯ, ಮೋಹಿತ್-ಕಮಿಟೆಯಲ್ಲಿ ದ್ವಿತೀಯ, ಕಟಾದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರಿಗೆ ಚಂದ್ರಶೇಖರ ಕನಕಮಜಲು ತರಬೇತಿ ನೀಡಿದ್ದಾರೆ.















