ಆಲಂಕಾರು: ಶ್ರೀ ಭಾರತಿ ವಿದ್ಯಾಸಂಸ್ಥೆ ಆಲಂಕಾರಿನಲ್ಲಿ ವಿದ್ಯಾರ್ಥಿ ಮಂತ್ರಿಮಂಡಲ ಚುನಾವಣಾ ಮಾದರಿ ಮೂಲಕ ರಚಿಸಲಾಯಿತು. ವಿದ್ಯಾರ್ಥಿಗಳಲ್ಲಿ ಎಳವೆಯಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಚಯ ಮತ್ತು ನಾಯಕತ್ವದ ಗುಣ ಮೈಗೂಡಿಸುವ ಸದುದ್ದೇಶ ಶಿಕ್ಷಕರದ್ದಾಗಿತ್ತು.
ನಾಮಪತ್ರ ಸಲ್ಲಿಕೆಯೊಂದಿಗೆ ಹಂತಹಂತವಾಗಿ ನಡೆದ ಚುನಾವಣೆಯಲ್ಲಿ ಸಿಂಚನಾ ಪಿ ಕುದ್ಮಾರು ಶಾಲಾ ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ರಕ್ಷಿತಾ ನೇಲಡ್ಕ ಆಯ್ಕೆಯಾದರು. ಶಾಲಾ ಮುಖ್ಯಮಾತಾಜಿ 20 ವಿದ್ಯಾರ್ಥಿಗಳಿಗೆ ವಿವಿಧ ಖಾತೆಗಳನ್ನು ಹಂಚಿ ಆಯಾಯ ಖಾತೆಗಳ ಮಂತ್ರಿಗಳಾಗಿ ನಾಮ ನಿರ್ದೇಶನಗೊಳಿಸಿದರು.
ಬಳಿಕ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಇಂದುಶೇಖರ ಶೆಟ್ಟಿ ಬರೆಪುದೇಲು ರಾಜ್ಯಪಾಲರ ಪಾತ್ರ ವಹಿಸಿ, ಆಯ್ಕೆ ಮತ್ತು ನಾಮನಿರ್ದೇಶನಗೊಂಡ ಎಲ್ಲ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಮಯದಲ್ಲಿ ಶಾಲಾ ಮುಖ್ಯಮಾತಾಜಿಯ ಆಶಾ. ಎಸ್ ರೈ ಪ್ರಮಾಣ ವಚನ ಸ್ವೀಕರಿಸಿದ ಮಂತ್ರಿಗಳ ಸಹಿ ಕಡತದಲ್ಲಿ ದಾಖಲಿಸಿಕೊಂಡರು. ಈ ಎಲ್ಲಾ ಪೂರ್ಣ ಪ್ರಕ್ರಿಯೆಯಲ್ಲಿ ಶಾಲಾ ಶ್ರೀಮಾನ್ ಮಾತಾಜಿವೃಂದ ಸಹಕರಿಸಿದರು.ಶಾಲಾ ಆಡಳಿತ ಮಂಡಳಿ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದರು.