ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯದಲ್ಲಿ ಅಟಲ್ ಟಿಂಕರಿಂಗ್ ಕಾರ್ಯಗಾರವು ಜೂ.15ರಂದು ನಡೆಯಿತು.
ಶಾಲಾ ಮುಖ್ಯಶಿಕ್ಷಕಿ ರೋಸಲಿನ್ ಲೋಬೋ ವಿದ್ಯುನ್ಮಾನವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮಲ್ಲಿ ಕ್ರಿಯಾಶೀಲತೆ, ಸಂಶೋಧನಾ ಮನೋಭಾವ, ವೈಜ್ಞಾನಿಕ ಚಿಂತನೆ ಸಣ್ಣ ಪ್ರಾಯದಲ್ಲಿ ಬೆಳೆಸಿಕೊಳ್ಳಬೇಕು. ಅಟಲ್ ಟಿಂಕರಿಂಗ್ನಲ್ಲಿ ನಡೆಸುವತಂಹ ಎಲ್ಲಾ ಚಟುವಟಿಕೆಗಳು ನಮ್ಮ ವಿದ್ಯಾರ್ಥಿನಿಯರು ವೈಜ್ಞಾನಿಕವಾಗಿ ಮುನ್ನಡೆಯಲು ಪ್ರೇರಣೆಯಾಗಲಿ ಎಂದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಐಟಿ ಸಾಫ್ಟ್ವೇರ್ ಇಂಜಿನಿಯರ್ಗಳಾಗಿರುವ ಜಗನ್ನಿವಾಸ್ ಹಾಗೂ ಗ್ಯಾವಿನ್ ಕ್ರಿಸ್ ಮಸ್ಕರೇನ್ಹಸ್ರವರು ಎಲೆಕ್ಟ್ರಾನಿಕ್ಸ್ನ ಬುನಾದಿ ವಿಷಯಗಳನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಮಾಯಿದೇ ದೇವುಸ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆಯ 8 ಮಂದಿ ವಿದ್ಯಾರ್ಥಿನಿಯರು ಸೇರಿದಂತೆ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲಾ ಒಟ್ಟು 75 ವಿದ್ಯಾರ್ಥಿನಿಯರು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. ಶಿಕ್ಷಕರಾದ ಇನಾಸ್ ಗೊನ್ಸಾಲ್ವಿಸ್ ಸ್ವಾಗತಿಸಿ, ಹರಿಣಾಕ್ಷಿಯವರು ವಂದಿಸಿದರು. ರೂಪಾ ಡಿಕೋಸ್ಟ, ಭಾವನಾ ಸುಧೀರ್, ಅನುಷಾರವರು ಉಪಸ್ಥಿತರಿದ್ದರು. ಶಿಕ್ಷಕಿ ಲೆನಿಟಾ ಮೊರಾಸ್ ಕಾರ್ಯಕ್ರಮ ನಿರೂಪಿಸಿದರು.