ನಿಡ್ಪಳ್ಳಿ; ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲಾ ನಾಯಕನಾಗಿ 10 ನೇ ತರಗತಿಯ ದೀಪಕ್ ರಾಜ್, ಉಪ ನಾಯಕನಾಗಿ 9 ನೇ ತರಗತಿಯ ಹೇಮಂತ ಕುಮಾರ್ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ 10 ನೇ ತರಗತಿಯ ಅಂಕಿತಾ.ಸಿ.ಎಚ್ ಆಯ್ಕೆಯಾದರು.
ಗೃಹ ಮಂತ್ರಿಯಾಗಿ ಅವಿನಾಶ್, ವಿದ್ಯಾಮಂತ್ರಿಯಾಗಿ ಸ್ವಾತಿ, ಕ್ರೀಡಾ ಮಂತ್ರಿಯಾಗಿ ಸುಪ್ರೀತಾ, ಅರೋಗ್ಯ ಮಂತ್ರಿಯಾಗಿ ಕಾವ್ಯ, ಸಾಂಸ್ಕೃತಿಕ ಮಂತ್ರಿಯಾಗಿ ದಿಕ್ಷೀತಾ,ನೀರಾವರಿ ಮಂತ್ರಿಯಾಗಿ ಚೈತ್ರೇಶ,ಆಹಾರ ಮಂತ್ರಿಯಾಗಿ ನಾಗರಾಜ, ಕೃಷಿ ಮಂತ್ರಿಯಾಗಿ ಜೀವನ್, ರಕ್ಷಣಾ ಮಂತ್ರಿಯಾಗಿ ಪ್ರಶಾಂತ್, ಸ್ವಚ್ಚತಾ ಮಂತ್ರಿಯಾಗಿ ಅನನ್ಯ, ಶಿಸ್ತು ಪಾಲನಾ ಮಂತ್ರಿಯಾಗಿ ಅಪ್ನಾ, ವಿದ್ಯುತ್ ಮಂತ್ರಿಯಾಗಿ ರಕ್ಷೀತ್, ಸಮಯ ಪಾಲನಾ ಮಂತ್ರಿಯಾಗಿ ಸ್ವಾಲಿಹಾ ಮತ್ತು ಸ್ಪೀಕರ್ ಆಗಿ ಚಾಂದಿನಿ ಆಯ್ಕೆಯಾದರು.
ಮತ ಪತ್ರಗಳ ಮೂಲಕ ಮತದಾನ ನಡೆಸಿ ಚುನಾವಣೆ ನಡೆಸಲಾಯಿತು.ಮುಖ್ಯ ಗುರು ವಿಜಯಕುಮಾರ್ .ಎಂ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿದಿ ಬೋಧಿಸಿದರು.ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ, ಸಹಶಿಕ್ಷಕಿಯರಾದ ಮಂಜುಳಾ ಭಟ್, ಸೌಮ್ಯಲಕ್ಷ್ಮೀ , ಉಮಾ, ಭಾರತಿ ಹಾಗೂ ವಿನುತಾ ಇವರು ಚುನಾವಣಾ ಪ್ರಕ್ರಿಯೆ ನಡೆಸಿ ಕೊಟ್ಟರು.