ಮನೆಗೊಂದು ಗಿಡ, ಊರಿಗೊಂದು ವನ ಗುರಿ – ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದಲ್ಲಿ ವನ ಮಹೋತ್ಸವದಲ್ಲಿ ಉಚಿತ ಹಣ್ಣಿನ ಗಿಡ ವಿತರಣೆ

0

ಪುತ್ತೂರು: ಮನೆಗೊಂದು ಗಿಡ, ಊರಿಗೊಂದು ವನದ ಗುರಿಯನ್ನಿಟ್ಟುಕೊಂಡ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ ಸಂಘದ ಸದಸ್ಯರಿಗೆ ಹಣ್ಣಿನ ಗಿಡವನ್ನು ಉಚಿತವಾಗಿ ನೀಡುವ ಮೂಲಕ ವನಮಹೋತ್ಸವವನ್ನು ಜು.7ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಆಚರಿಸಲಾಯಿತು.

ಸಂಘದ ಸಲಹಾ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸಂಘದ ಪದಾಧಿಕಾರಿಗಳಿಗೆ ಗಿಡ ಹಸ್ತಾಂತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಅಧ್ಯಕ್ಷ ರವಿ ಮುಂಗ್ಲಿಮನೆ, ಗೌಡ ಮಹಿಳಾ ಸಂಘದ ಅಧ್ಯಕ್ಷೆ ವಾರಿಜ ಬೆಳ್ಯಪ್ಪ ಗೌಡ, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ ಗೌಡ, ಸಂಘದ ಖಜಾಂಜಿ
ಶಿವರಾಮ ಗೌಡ ಮತಾವು ಸಹಿತ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here