ಪುತ್ತೂರು : ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಜು.21ರಂದು ವಿದ್ಯಾಭಾರತಿ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಷ್ಟ್ರೀಯ ಮಟ್ಟದ ವೆಟ್ ಲಿಫ್ಟರ್ ಆದ ಪುಷ್ಪರಾಜ್ ಗೌಡ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಫುಟ್ಬಾಲ್ ಕ್ರೀಡೆಯು ದೈಹಿಕ ವ್ಯಾಯಾಮದೊಂದಿಗೆ ಮನೋಬಲವನ್ನು ವೃದ್ಧಿಸುವ ಕ್ರೀಡೆಯಾಗಿದೆ. ಪ್ರಸ್ತುತ ಈ ಕ್ರೀಡೆಗೆ ಬಹಳಷ್ಟು ಮಹತ್ವವನ್ನು ನೀಡಲಾಗುತ್ತದೆ ಎಂದು, ಭಾಗವಹಿಸುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ವಿಜಯಾನಂದ ಕೈಂತಜೆ ಇವರು; ಇಡೀ ವಿಶ್ವದಲ್ಲಿ ಅತೀ ಹೆಚ್ಚಿನ ವೀಕ್ಷಕರು ಹೊಂದಿರುವ ಕ್ರೀಡೆ ಫುಟ್ಬಾಲ್ ಎಂದು ಹೇಳಿದರು. ವೇದಿಕೆಯಲ್ಲಿ ವಿದ್ಯಾಭಾರತಿ ಜಿಲ್ಲಾ ಕ್ರೀಡಾ ಸಂಯೋಜಕ ಕರುಣಾಕರ ಇವರು ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲರಾದ ಸಿಂಧು ವಿ. ಜಿ ಇವರು ಸ್ವಾಗತಿಸಿದರು.ಶಾಲಾ ಕ್ರೀಡಾ ಮಂತ್ರಿ ಶಶಾಂಕ್ ಪಿ ಧನ್ಯವಾದಗೈದರು. ಶಿಕ್ಷಕಿ ಲತಾ ಶಂಕರಿ ನಿರೂಪಿಸಿದರು. ಶಾಲಾ ದೈಹಿಕ ಶಿಕ್ಷಕರಾದ ಶ್ಯಾಮಲಾ ಹಾಗೂ ನವೀನ್ ಇವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.