ನಿಡ್ಪಳ್ಳಿ: ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮುದ್ದೇನಹಳ್ಳಿ ಇದರ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂಧನ ಸಾಯಿ ಅವರ 45 ನೇ ಜನ್ಮ ದಿನೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯದಲ್ಲಿ ಆಯ್ದ ಸರಕಾರಿ ಶಾಲೆಗಳಿಗೆ ನೀಡುವ ಹಸಿರು ನೈರ್ಮಲ್ಯ ಶಾಲಾ ಪ್ರಶಸ್ತಿಗೆ ದ.ಕ.ಜಿ.ಪಂ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಏಕತ್ತಡ್ಕ ಅಜ್ಜಿಕಲ್ಲು ಆಯ್ಕೆಯಾಗಿದೆ.
ಈ ಶಾಲೆಯು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ದ.ಕ.ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪತ್ರವನ್ನು ಸತತವಾಗಿ 2016-17 ಮತ್ತು 2017-18 ರಲ್ಲಿ 2 ಬಾರಿ ಪಡೆದುಕೊಂಡಿರುತ್ತದೆ.
ಪ್ರಶಸ್ತಿ ಪಡೆಯಲು ಕಾರಣವಾದ ಅಂಶಗಳು;
ಸುಸಜ್ಜಿತ ಶಾಲಾ ಕೊಠಡಿಗಳು,ಶಾಲಾ ಆವರಣ,ಆಟದ ಮೈದಾನ, ನೂತನ ಶೌಚಾಲಯ, ಸ್ಮಾರ್ಟ್ ಕ್ಲಾಸ್, ಸುಸಜ್ಜಿತ ಗ್ರಂಥಾಲಯ, ಆಕ್ಷರ ದಾಸೋಹ ಕೊಠಡಿ, ಶಾಲಾ ಔಷಧಿ ವನ, ಅಕ್ಷರ ಕೈತೋಟ, ವಿಶಾಲವಾದ ಸುವರ್ಣರಂಗ ಮಂದಿರ, ಬ್ಯಾಂಡ್ ಸೆಟ್, ಸುತ್ತ ಮುತ್ತ ಹಸಿರಿನಿಂದ ಕಂಗೊಳಿಸುವ ಸ್ವಚ್ಚ ಪರಿಸರ, ಶಿಸ್ತು ಮತ್ತು ನೈರ್ಮಲ್ಯದ ಕುರಿತು ಶಾಲೆಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮುದ್ದೇನ ಹಳ್ಳಿಯ ತಂಡ ಮೆಚ್ಚುಗೆಯೊಂದಿಗೆ ಈ ಪ್ರಶಸ್ತಿ ಘೋಷಣೆ ಮಾಡಿರುತ್ತದೆ.
ಜುಲೈ.27 ರಂದು ಪ್ರಶಸ್ತಿ ಪ್ರಧಾನ;
ಕರ್ನಾಟಕ ರಾಜ್ಯದಲ್ಲಿ ಉತ್ತಮ100 ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿ ಪ್ರಶಸ್ತಿಯ ಜೊತೆಗೆ ಪ್ರತಿ ಶಾಲೆಗೆ ರೂ.10 ಸಾವಿರ ನಗದು ಪುರಸ್ಕಾರ ನೀಡುವ ಕಾರ್ಯಕ್ರಮ ಜು.27 ರಂದು ಮುದ್ದೇನ ಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ನಡೆಯಲಿದೆ ಎಂದು ಶಾಲಾ ಪ್ರಭಾರ ಮುಖ್ಯ ಗುರು ಚಿತ್ರಾ ರೈ.ಹೆಚ್ ತಿಳಿಸಿದ್ದಾರೆ