ಜುಲೈ.23; ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು, ಪುತ್ತೂರು ಪಾಣಾಜೆ, ಆಲಂಕಾರು ದುರ್ಗಾಂಬಾ, ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಪದಗ್ರಹಣ ಸಮಾರಂಭ

0

ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು, ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆ, ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ, ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.23ರಂದು ಸಂಜೆ 6 ಗಂಟೆಗೆ ಬೈಪಾಸ್ ರಸ್ತೆಯಲ್ಲಿರುವ ಪಂಚಮಿ ಅಶ್ಮಿ ಕಂಫರ್ಟ್ ಸಭಾಂಗಣದಲ್ಲಿ ನಡೆಯಲಿದೆ. ಪೂರ್ವ ಜಿಲ್ಲಾ ಗವರ್ನರ್ ಲ| ಡಾ. ಗೀತಾಪ್ರಕಾಶ್ ಪಿಎಂಜಿಎಫ್ ರವರು ನೂತನ ಪದಾಧಿಕಾರಿಗಳ ಪದಪ್ರದಾನವನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಾಯಿಂಟ್ ಡಿಸ್ಟ್ರಿಕ್ಟ್ ಪಿಆರ್‌ಒ ಲ| ಕಾವು ಹೇಮನಾಥ ಶೆಟ್ಟಿ ಎಂಜೆಎಫ್ ರವರು ಭಾಗವಹಿಸಲಿದ್ದಾರೆ.


ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ನೂತನ ಅಧ್ಯಕ್ಷರಾಗಿ ವೇದಾವತಿ ಎ, ಕಾರ್ಯದರ್ಶಿಯಾಗಿ ಭಾಗ್ಯೇಶ್ ರೈ, ಖಜಾಂಜಿಯಾಗಿ ವತ್ಸಲಾ ಪಿ ಶೆಟ್ಟಿ, ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆ ಇದರ ನೂತನ ಅಧ್ಯಕ್ಷರಾಗಿ ದಯಾನಂದ ರೈ ಕೆ, ಕಾರ್ಯದರ್ಶಿಯಾಗಿ ನವೀನ್ ಕುಮಾರ್ ರೈ, ಖಜಾಂಜಿಯಾಗಿ ಜಲೀಲ್ ಬೈತಡ್ಕ, ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ ಇದರ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಪ್ರಭು ಎಚ್, ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ ಎಂ, ಖಜಾಂಚಿಯಾಗಿ ಸುಂದರ ಗೌಡ, ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಇದರ ನೂತನ ಅಧ್ಯಕ್ಷರಾಗಿ ಲ್ಯಾನ್ಸನ್, ಕಾರ್ಯದರ್ಶಿಯಾಗಿ ಶ್ರೀಶಾ ನಾಯಕ್, ಖಜಾಂಜಿಯಾಗಿ ವಾಜಿದಾ ಬಾನು ಅಧಿಕಾರ ಸ್ವೀಕರಿಸಲಿದ್ದಾರೆ.

LEAVE A REPLY

Please enter your comment!
Please enter your name here