ಶಾಂತಿನಗರ ಶಾಲೆಯಲ್ಲಿ ’ಆಟಿದ ಪೊಲಬು ಆಟಿಡೊಂಜಿ ದಿನ ’

0

ನೆಲ್ಯಾಡಿ: ಗೋಳಿತ್ತಟ್ಟು ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಟಿದ ಪೊಲಬು ಆಟಿಡೊಂಜಿ ದಿನ ಕಾರ್ಯಕ್ರಮ ಜು.27ರಂದು ನಡೆಯಿತು.


ಬೆಳಿಗ್ಗೆ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಕ್ರೀಡಾಕೂಟ ಉದ್ಘಾಟಿಸಿ ಶುಭಹಾರೈಸಿದರು. ಪೆರ್ಲ ದೇವಸ್ಥಾನದ ಪ್ರದಾನ ಅರ್ಚಕ ಶ್ರೀನಿವಾಸ ಬಡೆಕ್ಕಿಲ್ಲಾಯ, ಶಾಂತಿನಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು, ನಿವೃತ್ತ ಎಎಸ್‌ಐ ಪದ್ಮಯ್ಯ ಗೌಡ ಡೆಂಬಲೆ, ಶಾಲಾ ಸ್ಥಾಪಕ ಸದಸ್ಯ ವೆಂಕಪ್ಪ ಗೌಡ ಪೆರ್ಲ, ಉದ್ಯಮಿ ಕೇಶವ ಪೂಜಾರಿ ಕಿನ್ಯಡ್ಕ, ಪ್ರಗತಿಪರ ಕೃಷಿಕ ನಾರಾಯಣ ಪೂಜಾರಿ ಡೆಂಬಲೆ, ನಿವೃತ್ತ ಮುಖ್ಯಗುರು ಗಣಪಯ್ಯ ಭಟ್, ಉದ್ಯಮಿ ರಂಜಿತ್ ಮೇಲೂರು ಉಪಸ್ಥಿತರಿದ್ದರು. ಬಳಿಕ ಸಾರ್ವಜನಿಕರಿಗೆ ವಿವಿಧ ಕ್ರೀಡಾಕೂಟ ನಡೆಯಿತು.

ಸಭಾ ಕಾರ್ಯಕ್ರಮ:
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಳಿತ್ತೊಟ್ಟು ಗ್ರಾ.ಪಂ. ಅಧ್ಯಕ್ಷೆ ಸವಿತಾ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ತುಳುಚಲನಚಿತ್ರ ನಟ, ತುಳು ನಾಟಕ ಕಲಾವಿದ ರವಿ ರಾಮಕುಂಜ ಅವರು ತುಳು ನಾಟದ ಡೈಲಾಗ್ ಹೇಳುವ ಮೂಲಕ ರಂಜಿಸಿದರು. ವಳಾಲು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಪುಷ್ಪಲತಾತಿಲಕ್ ಅವರು ಆಟಿ ತಿಂಗಳ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಶ್ರೀ ಕ್ಷೇ.ಧ.ಗ್ರಾ.ಯೋ.ಗೋಳಿತ್ತೊಟ್ಟು ವಲಯ ಮೇಲ್ವಿಚಾರಕಿ ಜಯಶ್ರೀ, ಗೋಳಿತ್ತೊಟ್ಟು ಗ್ರಾ.ಪಂ.ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ ಶುಭಹಾರೈಸಿದರು. ಗ್ರಾ.ಪಂ.ಅಧ್ಯಕ್ಷೆ ಸವಿತಾ, ಸದಸ್ಯರಾದ ಜನಾರ್ದನ ಗೌಡ, ಬಾಲಕೃಷ್ಣ ಅಲೆಕ್ಕಿ, ಹೇಮಲತಾ, ಯಕ್ಷಗಾನ ತರಬೇತುದಾರ ಮೋಹನ ಶರವೂರು, ಶಾಲಾ ದಾನಿ ಇಸ್ಮಾಯಿಲ್ ನೂಜೋಲು, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಶಾಂತಿನಗರ ಒಕ್ಕೂಟದ ಅಧ್ಯಕ್ಷ ಮಹೇಶ್, ಆದರ್ಶ ಯುವಕ ಮಂಡಲದ ಅಧ್ಯಕ್ಷ ತೇಜಸ್ ಶಾಂತಿನಗರ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕುಶಾಲಪ್ಪ ನೂಜೋಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
ನಾಟಿವೈದ್ಯೆ ಡೀಕಮ್ಮ ಅಲೆಕ್ಕಿ ಹಾಗೂ ಸುದ್ದಿಬಿಡುಗಡೆ ಹಿರಿಯ ವರದಿಗಾರ ಹರೀಶ್ ಬಾರಿಂಜ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಪುರುಷೋತ್ತಮ ಗುರುಂಪು, ಉಪಾಧ್ಯಕ್ಷೆ ಮೀನಾಕ್ಷಿ ಅವರು ಅತಿಥಿಗಳಿಗೆ ಗೌರವಾರ್ಪಣೆ ಮಾಡಿದರು. ಮುಖ್ಯಶಿಕ್ಷಕ ಪ್ರದೀಪ್ ಬಾಕಿಲ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕುಶಾಲಪ್ಪ ನಾಯ್ಕ್ ನೂಜೋಲು ವಂದಿಸಿದರು. ಸಹಶಿಕ್ಷಕ ಮಂಜುನಾಥ ಮಣಕವಾಡ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಶಿಕ್ಷಕಿ ರೀತಾಕ್ಷಿ, ಶಾಲಾ ಶಿಕ್ಷಕಿಯರಾದ ಪ್ರಮೀಳಾ, ಸುನಂದ, ಮೋಹಿನಿ ಸಹಕರಿಸಿದರು.

ಆಟಿ ವಿಶೇಷ:
ಆಟಿಡೊಂಜಿ ಕಾರ್ಯಕ್ರಮಕ್ಕೆ ಪೂರಕವಾಗಿ 5 ದಿನ ವಾಟ್ಸಫ್ ಮೂಲಕ ತುಳು ರಸಪ್ರಶ್ನೆ ಆಯೋಜಿಸಲಾಯಿತು. ಇದರಲ್ಲಿ 250ಕ್ಕಿಂತಲೂ ಹೆಚ್ಚು ಜನರು ಭಾಗಿಯಾಗಿದ್ದು ಪ್ರತೀ ದಿನದ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಪ್ರಥಮ ಸ್ಥಾನ ಪಡೆದ ದೇವಕಿ ಮುರಿಯೇಲು ಅವರಿಗೆ 1 ಮುಡಿ ಅಕ್ಕಿ ನೀಡಲಾಯಿತು. ತುಳು ಜಾನಪದ ಕ್ರೀಡೆ ಆಯೋಜಿಸಿ ವಿಜೇತರಿಗೆ ತುಳುನಾಡ ಪರಿಕರಗಳನ್ನು ಬಹುಮಾನವಾಗಿ ನೀಡಲಾಯಿತು. ಮಧ್ಯಾಹ್ನ ಸುಮಾರು 75 ಬಗೆಯ ಆಟಿದ ವಿಶೇಷ ಖಾದ್ಯಗಳನ್ನು ಒಳಗೊಂಡ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here