ಕಂಟ್ರಮಜಲು: ಲಾರಿ ಮತ್ತು ಟೆಂಪೋ ನಡುವೆ ಡಿಕ್ಕಿ – ಟೆಂಪೋ ಚಾಲಕನಿಗೆ ಗಾಯ

0

ಪುತ್ತೂರು: ಪುತ್ತೂರಿನಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಲಾರಿ( ಕೆ ಎ 12 ಸಿ2113) ಮತ್ತು ಸುಳ್ಯದಿಂದ ಪುತ್ತೂರು ಕಡೆಗೆ ಬರುತ್ತಿದ್ದ ಟೆಂಪೋ ನಡುವೆ ಡಿಕ್ಕಿ ಸಂಭವಿಸಿದೆ. ಪುತ್ತೂರು ಸುಳ್ಯ ರಸ್ತೆಯ ಅಮ್ಚಿನಡ್ಕ ಬಳಿಯ ಕಂಟ್ರಮಜಲು ಬಳಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಟೆಂಪೋ ಚಾಲಕನಿಗೆ ಗಾಯವಾಗಿದೆ. ಟೆಂಪೋ ಮುಂಭಾಗ ನಜ್ಜು ಗುಜ್ಜಾಗಿದ್ದು ಚಾಲಕ ನೆಲ್ಲೂರು ಕೆಮ್ರಾಜೆಯ ನಿಶ್ಚಿತ್‌ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here