ಪುತ್ತೂರು : ನೆಹರೂ ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಆಗಸ್ಟ್ 8 ರಂದು ರೋಟರಿ ಕ್ಲಬ್, ಪುತ್ತೂರು ಯುವ ಇದರ ಸಹಯೋಗದಲ್ಲಿ, ಇಂಟರಾಕ್ಟ್ ಕ್ಲಬ್ ಆಫ್ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಅನುಸ್ಥಾಪನೆ ಮತ್ತು ಪ್ರಮಾಣವಚನ ಸಮಾರಂಭ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ರತ್ನಾಕರ್ ರೈ, ಜಿಲ್ಲಾ ಕಾರ್ಯದರ್ಶಿಗಳು ಯೂತ್ ಸರ್ವಿಸ್ , ಇಂಟರಾಕ್ಟ್ ಕ್ಲಬ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಅದೇ ರೀತಿ, ಸಮಾಜದ ಸುಸ್ಥಿರತೆಯನ್ನು ಕಾಪಾಡುವ ಹೊಣೆ ನಿಮ್ಮದಾಗಬೇಕು ಎಂದರು.
ಹಾಗೆಯೇ, ಸಮರ್ಥ್ ಎಸ್. ಹೆಗ್ಡೆ(ಗ್ರೇಡ್ 10) ಇವರು ಇಂಟರಾಕ್ಟ್ ಕ್ಲಬ್ ಆಫ್ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಅಧ್ಯಕ್ಷರಾಗಿ ಆಯ್ಕೆಯಾಗುವುದರೊಂದಿಗೆ, ಇತರ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು. ಅಶ್ವಿನಿ ಕೃಷ್ಣ ಮುಳಿಯ, ಅಧ್ಯಕ್ಷರು, ರೋಟರಿ ಕ್ಲಬ್, ಪುತ್ತೂರು ಯುವ ಇವರು ಪ್ರಮಾಣವಚನ ಸ್ವೀಕಾರವನ್ನು ನಡೆಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಅತಿಥಿಗಳಾಗಿ, ಡಾ. ಹರ್ಷ ಕುಮಾರ್ ರೈ ಅಸಿಸ್ಟೆಂಟ್ ಗವರ್ನರ್ ಝೋನ್ 5 , ವಚನ ಜಯರಾಮ್ ಕಾರ್ಯದರ್ಶಿಗಳು ರೋಟರಿ ಕ್ಲಬ್, ಸುದರ್ಶನ್ ರೈ ಯೂತ್ ಸರ್ವಿಸ್ ಡೈರೆಕ್ಟರ್, ಡಾ. ದೀಪಕ್ ಕೆ . ಬಿ, ಅಧ್ಯಕ್ಷರು ಇಂಟರಾಕ್ಟ್ ಕ್ಲಬ್ , ವಸಂತಿ ಕೆದಿಲ ಅಧ್ಯಕ್ಷರು, ವಿವೇಕಾನಂದ ಸೆಂಟ್ರಲ್ ಸ್ಕೂಲ್, ಭರತ್ .ಪೈ. ಶಾಲಾ ಸಂಚಾಲಕರು, ವಿವೇಕಾನಂದ ಸೆಂಟ್ರಲ್ ಸ್ಕೂಲ್ ಹಾಗೂ ಪ್ರಾಂಶುಪಾಲೆ ಸಿಂಧೂ ವಿ.ಜಿ. ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.