ನಾಣಿಲ ಶಾಲೆಗೆ ಹಿರಿಯ ವಿದ್ಯಾರ್ಥಿ ಸಂಘದಿಂದ ದೇಣಿಗೆ ಹಸ್ತಾಂತರ

0

ಕಾಣಿಯೂರು: ನಾಣಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲೆಗೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ರೂ 18000 ರೂಪಾಯಿಯನ್ನು ದೇಣಿಗೆ ರೂಪದಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಿತ್ ಮಾಚಿಲ ಮಾತನಾಡಿ, ಪ್ರತಿವರ್ಷವೂ 60000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಶಾಲೆಗೆ ನೀಡಲಾಗುವುದು ಎಂದು ವಾಗ್ದಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಆನಂದ ಆಂಬುಲ ಅವರು ಕುಕ್ಕರ್ ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತ ದಲಾರಿ, ಪ್ರದೀಪ್ ಅರ್ ಗೌಡ ಅರುವಗುತ್ತು, ವಿಜಯಕುಮಾರ್ ಸೊರಕೆ, ಮುಖ್ಯಗುರು ಪದ್ಮಯ್ಯ ಗೌಡ ನೇಮಣ್ಣ ಗೌಡ ಅಂಬುಲ, ಮೋನಪ್ಪ ಗೌಡ ಅಂಬುಲ, ಧರ್ಣಪ್ಪ ಗೌಡ ಅಂಬುಲ, ಕೆ. ವಿ ಮಾಧವ ಕರಂದ್ಲಾಜೆ, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು , ಶಿಕ್ಷಕ ವೃಂದ, ಪೋಷಕರು, ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here