ಆತೂರು ಆಯಿಶಾ ವಿದ್ಯಾಲಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ , ಪ್ರತಿಭಾ ಪುರಸ್ಕಾರ

0

ಪುತ್ತೂರು : ಆತೂರು ಆಯಿಶಾ ವಿದ್ಯಾಲಯದಲ್ಲಿ ಆ.15 ರಂದು 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.


ಅನುಪಮ‌ ಮಹಿಳಾ ಮಾಸಿಕ ಇಸರ ಉಪಸಂಪಾದಕಿ ಸಬೀಹಾ ಫಾತಿಮಾ ಇವರಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಆ ಬಳಿಕ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ‌ ಸಾಧನೆ ಮಾಡಿದ ಮತ್ತು ಬಿಐಇ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿ ಪ್ರತಿನಿಧಿಗಳಿಂದ ಚಿಂತನ-ಮಂಥನ ಸಹಿತ ವಿವಿಧ ಕಾರ್ಯಕ್ರಮ ನಡೆಯಿತು.
ಈ ವೇಳೆ ಆಯಿಶಾ ವಿದ್ಯಾ ಸಂಸ್ಥೆಯ ಸ್ಥಾಪಕಾಧ್ಯಕ್ಷ ಅಮೀನ್ ಅಹ್ಸನ್, ಖಜಾಂಜಿ ರಿಯಾಝ್ ಹಾರೂನ್ , ಸಂಸ್ಥೆಯ ಆಧ್ಯಕ್ಷರಾದ ಅಬ್ಧುಲ್ ರವೂಫ್ ಯು.ಎಂ , ಯು. ಕೆ. ಇಲ್ಯಾಸ್ ,ಸಂಚಾಲಕ ಅಬ್ಧುಲ್ ಹಸೀಬ್ , ಉಪಾಧ್ಯಕ್ಷ ಬಿ.ಕೆ ಅಬ್ಧುಲ್ ರವೂಫ್ ಉಪಸ್ಥಿತರಿದ್ದರು.

ಪ್ರಾಂಶುಪಾಲರು ಸ್ವಾಗತಿಸಿ ಉಪಪ್ರಾಂಶುಪಾಲರು ಧನ್ಯಾವಾದವಿತ್ತರು. ಸವಿತಾ ಮತ್ತು ಮುಶ್ರಿಫಾ ರವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here