ಒಳಮೊಗ್ರು ಗ್ರಾಪಂ ಪಿಡಿಒ ಆಗಿ ಮನ್ಮಥ ನೇಮಕ

0

ಪುತ್ತೂರು: ಒಳಮೊಗ್ರು ಗ್ರಾಪಂ ನೂತನ ಪಿಡಿಒ ಆಗಿ ಸವಣೂರಿನಲ್ಲಿ ಪಿಡಿಒ ಆಗಿದ್ದ ಮನ್ಮಥ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಒಳಮೊಗ್ರು ಗ್ರಾಪಂ ಪಿಡಿಒ ಆಗಿದ್ದ ಅವಿನಾಶ್ ರವರು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಪಿ ಎ ಆಗಿ ನೇಮಕವಾಗಿದ್ದರು. ತೆರವಾದ ಸ್ಥಾನಕ್ಕೆ ಕೆಯ್ಯೂರು ಗ್ರಾಪಂ ಪಿಡಿಒ ನಮಿತಾ ಅವರನ್ನು ಪ್ರಭಾರವಾಗಿ ನೇಮಕ ಮಾಡಲಗಿತ್ತು. ವಾರದಲ್ಲಿ ಮೂರು ದಿನ ಒಳಮೊಗ್ರು ಗ್ರಾಪಂ ಕಚೇರಿಯಲ್ಲಿ ಪಿಡಿಒ ಲಭ್ಯವಿರುತ್ತಿದ್ದರು. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತುಂಬಾ ತೊಂದರೆಯಾಗುತ್ತಿತ್ತು.
ಇದೀಗ ನೂತನ ಪಿಡಿಒ ಆಗಿ ಸವಣೂರಿನಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮನ್ಮಥ ಅವರನ್ನು ನೇಮಿಸಿ ಆದೇಶಿಸಲಾಗಿದೆ. ಮನ್ಮಥ ಅವರು 2022-23ನೇ ಸಾಲಿನಲ್ಲಿ ಸವಣೂರು ಪಿಡಿಒ ಆಗಿದ್ದ ವೇಳೆ ಗ್ರಾಮಕ್ಕೆ ಗಾಂಧಿಗ್ರಾಮ ಪ್ರಶಸ್ತಿ ಮತ್ತು ಅಮೃತ ಗ್ರಾಮ ಪ್ರಶಸ್ತಿ ಲಭಿಸಿತ್ತು. ಕೋವಿಡ್ ಸಮಯದಲ್ಲೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದ ಇವರನ್ನು ಜಿಲ್ಲಾಡಳಿತ ಅಭಿನಂದಿಸಿತ್ತು. ಸವಣೂರಿನಿಂದ ಗ್ರೇಡ್ ಒನ್ ಹುದ್ದೆಗೆ ಭಡ್ತಿಹೊಂದಿ ಇದೀಗ ಒಳಮೊಗ್ರು ಗ್ರಾಪಂ ಗೆ ಪಿಡಿಒ ಆಗಿ ನೇಮಕ ಮಾಡಲಾಗಿದೆ.

ಒಳಮೊಗ್ರು ಗ್ರಾಪಂ ನಲ್ಲಿ ಪೂರ್ಣಕಾಲಿಕ ಅವಧಿಗೆ ಪಿಡಿಒ ಇಲ್ಲದ ಕಾರಣ ಗ್ರಾಮಸ್ಥರಿಗೆ ಸಮಸ್ಯೆಯಗುತ್ತಿದೆ, ಪಿಡಿಒ ನೇಮಕ ಮಾಡಿಸುವಂತೆ ಶಾಸಕ ಅಶೋಕ್ ರೈ ಅವರಿಗೆ ಗ್ರಾ.ಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಗ್ರಾಪಂ ಸದಸ್ಯರು ಹಾಗೂ ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ ಮನವಿ ಮಾಡಿದ್ದರು.

LEAVE A REPLY

Please enter your comment!
Please enter your name here