ಪುತ್ತೂರು: ವಿರುದ್ಧ ಧಿಕ್ಕಿನಿಂದ ಬಂದ ಆಟೋ ರಿಕ್ಷಾದ ಕುರಿತು ಕಾರಿನಲ್ಲಿದ್ದವರು ವಿಚಾರಿಸುತ್ತಿದ್ದ ವೇಳೆ ಈ ಘಟನೆಗೆ ಸಂಬಂಧವೇ ಇಲ್ಲದ ಮಹಿಳೆಯೊಬ್ಬರು ಪಕ್ಕದಲ್ಲಿದ್ದ ಅಂಗಡಿಯಿಂದ ಹೊರ ಬಂದು ಕಾರಿನಲ್ಲಿದ್ದ ಹಿಂದು ಕಾರ್ಯಕರ್ತರಿಗೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಆ.22ರ ರಾತ್ರಿ ಪುತ್ತೂರು ಕೋರ್ಟ್ ಏಕಮುಖರಸ್ತೆಯಲ್ಲಿ ನಡೆದಿದೆ.
ಬೆಟ್ಟಂಪಾಡಿಯ ಮೂಲದ ನಾಲ್ವರುಹಿಂದು ಕಾರ್ಯಕರ್ತರು ಪುತ್ತೂರು ಮೊಸರುಕುಡಿಕೆ ಉತ್ಸವಕ್ಕೆ ಮಡಿಕೆಯನ್ನು ಪುತ್ತೂರು ಕಾರ್ಯಾಲಯದಲ್ಲಿ ಇರಿಸಿ ಕಾರಿನಲ್ಲಿ ಮನೆಕಡೆ ತೆರಳುತ್ತಿದ್ದ ವೇಳೆ ಕೋರ್ಟ್ ರಸ್ತೆಯಿಂದ ಮುಖ್ಯರಸ್ತೆಗೆ ಬರುತ್ತಿದ್ದ ವೇಳೆ ಏಕಮುಖರಸ್ತೆ ವಿರುದ್ಧ ಧಿಕ್ಕಿನಿಂದ ಆಟೋ ರಿಕ್ಷಾವನ್ನು ಕಾರಿನಲ್ಲಿದ್ದವರು ವಿಚಾರಿಸಿದ್ದಾರೆ.
ಇದೇ ವೇಳೆ ಪಕ್ಕದ ಅಂಗಡಿಯಿಂದ ಹೊರ ಬಂದ ಅನ್ಯಧರ್ಮದ ಮಹಿಳೆ ಘಟನೆಗೆ ಸಂಬಂಧವಿಲ್ಲದಿದ್ದರೂ ಕಾರಿನಲ್ಲಿದ್ದ ಹಿಂದು ಕಾರ್ಯಕರ್ತರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇದೇ ಸಂದರ್ಭ ಆಟೋ ರಿಕ್ಷಾ ಚಾಲಕನೂ ಪರಾರಿಯಾಗಿದ್ದಾನೆ. ಈ ಕುರಿತು ಕಾರಿನಲ್ಲಿದ್ದ ಹಿಂದು ಕಾರ್ಯಕರ್ತರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.